ಚಿನ್ನ ಮಾರಿದರೂ ಮನಸ್ಸು ಬಂಗಾರ! ಹೆತ್ತವರಿಗೆ ಕೋಟಿ ಮೌಲ್ಯದ ಕಾರು ಉಡುಗೊರೆ!

ಹೆತ್ತವರಿಗೆ ತಮ್ಮ ಕನಸಿನ ಕಾರನ್ನು ಉಡುಗೊರೆಯಾಗಿ ನೀಡುವುದು ಹಲವರು ಮಕ್ಕಳ ಕನಸಾಗಿರುತ್ತದೆ. ಆ ಸಂದರ್ಭ ಬಂದಾಗ ಅವರ ಮುಖದಲ್ಲಿ ಸಂತೋಷವನ್ನು ನೋಡಿದರೆ ಮನಸ್ಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಇಂತಹದ್ದೇ ಸಂದರ್ಭವನ್ನು ಕ್ಯಾಮರಾದಲ್ಲಿ ಸೆರೆಹಿಡಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಣೆಯ ಆಭರಣ ವ್ಯಾಪಾರಿಯೊಬ್ಬರು ತಮ್ಮ ಹೆತ್ತವರಿಗೆ 1.7 ಕೋಟಿ ರೂ. ಮೌಲ್ಯದ ಹೊಚ್ಚ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಐಷಾರಾಮಿ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹೃದಯಸ್ಪರ್ಶಿ ವೀಡಿಯೊ ಹಲವರ ಮನಗೆದ್ದಿದೆ.

ತನ್ನ ಹೆತ್ತವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಈ ವೀಡಿಯೊವನ್ನು ಪ್ರಸಾದ್ ನಗರ್ಕರ್ ಎಂಬವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೋಷಕರ ಕಣ್ಣುಮುಚ್ಚಿಸಿ ಶೋರೂಂ ಒಳಗೆ ಕರೆತಂದು ಬಾನೆಟ್ ಮೇಲೆ ಕೈಗಳನ್ನು ಇರಿಸಿ ಕಣ್ಣು ತೆರೆಸಿದ್ದಾರೆ. ಈ ವೇಳೆ ಹೊಚ್ಚ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‌ಯುವಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಕಾರನ್ನು ತಮಗಾಗಿ ಖರೀದಿಸಿರುವುದು ತಿಳಿದು ಪೋಷಕರು ತುಂಬಾ ಸಂತೋಷಪಟ್ಟಿದ್ದಾರೆ.

son-surprise-gift-to-parents-mercedes-benz-gls

ಆಭರಣ ವ್ಯಾಪಾರಿ ತನ್ನ ಹೆತ್ತವರಿಗೆ ಹಯಾಸಿಂತ್ ರೆಡ್ ಮೆಟಾಲಿಕ್ ಬಣ್ಣದ ಐಷಾರಾಮಿ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬೆಂಝ್ ಜಿಎಲ್ಎಸ್ ಅನ್ನು ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಜಿಎಲ್ಎಸ್ 450 ಪೆಟ್ರೋಲ್ ಆವೃತ್ತಿಯು 3.0 ಲೀಟರ್ ಎಂಜಿನ್ ಹೊಂದಿದ್ದು, 375 ಬಿಹೆಚ್ ಪವರ್ ಹಾಗೂ 500 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಡೀಸೆಲ್ ಕಾರಿನಲ್ಲಿ 3.0 ಲೀಟರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 362 ಬಿಹೆಚ್ ಪವರ್ ಮತ್ತು 750 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡರಲ್ಲೂ 9 - ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಹೊರತುಪಡಿಸಿ, ಪ್ರಸಾದ್ ನಗರ್ಕರ್ ಇನ್ನೂ ಕೆಲವು ಕಾರುಗಳನ್ನು ಹೊಂದಿದ್ದಾರೆ.

son-surprise-gift-to-parents-mercedes-benz-gls

ಅವರ ಕಾರು ಸಂಗ್ರಹದಲ್ಲಿ ಪ್ರಮುಖವಾಗಿ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿಯನ್ನು ಸಹ ಹೊಂದಿದ್ದಾರೆ. ಇದು ಪ್ರಮಾಣಿತ ಜಿ - ವಾಗನ್ ಅಲ್ಲ. ಬದಲಾಗಿ, ಇದನ್ನು ವಿಶೇಷ ಬ್ರಾಬಸ್ ಬಾಡಿ ಕಿಟ್ ನೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಈ ಎಸ್‌ಯುವಿಯನ್ನು ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ, ಇದು ಇನ್ನಷ್ಟು ಆಕ್ರಮಣಕಾರಿಯಾಗಿ ಕಾಣುತ್ತದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಜೊತೆಗೆ ಲ್ಯಾಂಬೊರ್ಗಿನಿ ಹುರಾಕನ್ ಇವಿಒ ಸ್ಪೈಡರ್ ಕಾರನ್ನು ಹೊಂದಿದ್ದು, ಇದು ಬ್ಲೂ ಸೈಡ್ರಿಸ್ ಬಣ್ಣದ್ದಾಗಿದೆ. ಈ ಹುರಾಕನ್ ಇವಿಒ ಸ್ಪೈಡರ್ 5.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ವಿ10 ಎಂಜಿನ್ ಹೊಂದಿದೆ. ಈ ಎಂಜಿನ್ 630 ಬಿಹೆಚ್ ಪವರ್ ಮತ್ತು 600 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಸ್ಪೀಡ್‌ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಈ ಕಾರನ್ನು ತಮ್ಮಿಷ್ಟದಂತೆ ಮಾಡಿಫೈಗೊಳಿಸಿ ಆಕರ್ಷಕವಾಗಿ ಮಾಡಿಸಿದ್ದಾರೆ. ಸಿಲ್ವರ್ ಅಲಾಯ್, ಬ್ಲಾಕ್ ಇಂಟೀರಿಯರ್‌ನೊಂದಿಗೆ ಇದನ್ನು ಕಸ್ಟಮೈಸ್ ಮಾಡಿಸಿದ್ದಾರೆ. ಇದಲ್ಲದೆ, ಅವರು ಹುರಾಕನ್ ಪರ್ಫಾರ್ಮೆಂಟೆ ಶೈಲಿಯ ಹಿಂಭಾಗದ ವಿಂಗ್ ಮತ್ತು ಕಸ್ಟಮ್ ಕಾರ್ಬನ್ ಫೈಬರ್ ಸ್ಟೀರಿಂಗ್ ವೀಲ್ ಸೇರಿದಂತೆ ಕೆಲವು ಮಾರ್ಪಾಡುಗಳನ್ನು ಮಾಡಿಸಿದ್ದು, ಇದು ರಸ್ತೆಯಲ್ಲಿ ಎಲ್ಲರನ್ನು ಸೆಳೆಯುವಂತ ನೋಟವನ್ನು ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 23, 2024, 13:25 [IST]
English summary
Son surprise gift to parents mercedes benz gls
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+