ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಭಾರತದಲ್ಲಿ ಕರೋನಾ ವೈರಸ್ ಸಮಸ್ಯೆ ಶುರುವಾದ ಬಳಿಕ ನಟ ಸೋನು ಸೂದ್ ಸಂಕಷ್ಟದಲ್ಲಿರುವವರ ಪಾಲಿಗೆ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಸೋನು ಸೂದ್ ಹೊರ ರಾಜ್ಯದ ಕಾರ್ಮಿಕರು ತಮ್ಮ ಊರಿಗೆ ಮರಳಲು ನೆರವಾಗಿದ್ದಾರೆ.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಜೊತೆಗೆ ಕೋವಿಡ್ 19 ಸೋಂಕಿತರಿಗೆ ಆಕ್ಸಿಜನ್ ಒದಗಿಸಿದ್ದಾರೆ. ಸೋನು ಸೂದ್'ರವರಿಗೆ ಸಂಬಂಧಿಸಿದ ವೀಡಿಯೊವೊಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ಸೋನು ಸೂದ್ ಇತ್ತೀಚೆಗೆ ಬಿಡುಗಡೆಯಾದ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯೊಂದಿಗೆ ಇರುವುದನ್ನು ಕಾಣಬಹುದು.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಈ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಸೋನು ಸೂದ್ ತಮ್ಮ ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಈ ವೀಡಿಯೊದಲ್ಲಿ ವರದಿಯಾಗಿತ್ತು. ಈ ವೀಡಿಯೊ ಬಗ್ಗೆ ಸೋನು ಸೂದ್ ವಿವರಣೆ ನೀಡಿದ್ದಾರೆ.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಸೋನು ಸೂದ್ ಈ ಕಾರನ್ನು ಖರೀದಿಸಿಲ್ಲವೆಂದು ತಿಳಿಸಿದ್ದಾರೆ. ಆದರೂ ಸೋನು ಸೂದ್ ಕಾರು ಖರೀದಿಸಿದ್ದಾರೆ ಎಂಬ ತಪ್ಪು ಮಾಹಿತಿ ಹರಿದಾಡುತ್ತಿದೆ. ವಾಸ್ತವವಾಗಿ ಈ ಕಾರು ಸೋನು ಸೂದ್ ಮನೆಗೆ ಪರೀಕ್ಷೆಗೆ ಬಂದಿತ್ತು.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಸೋನು ಸೂದ್ ಟೆಸ್ಟ್ ಡ್ರೈವ್'ಗಾಗಿ ಕಾರನ್ನು ತಮ್ಮ ಮನೆಗೆ ತಂದಿದ್ದರು. ವೀಡಿಯೊದಲ್ಲಿರುವ ಕಪ್ಪು ಬಣ್ಣದ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯನ್ನು ಸೋನು ಸೂದ್ ಮನೆಯ ಮುಂದೆ ನಿಲ್ಲಿಸಲಾಗಿತ್ತು.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಈ ವೀಡಿಯೊದಲ್ಲಿ ಶೋರೂಂ ಉದ್ಯೋಗಿಯೊಬ್ಬ ಕಾರಿನಲ್ಲಿರುವ ಸೌಲಭ್ಯಗಳನ್ನು ಸೋನು ಸೂದ್'ರವರಿಗೆ ವಿವರಿಸುತ್ತಾನೆ. ಇದನ್ನು ನೋಡಿದವರು ಸೋನು ಸೂದ್ ಹೊಸ ಕಾರು ಖರೀದಿಸಿದ್ದಾರೆ ಎಂದು ವರದಿ ಮಾಡಿದ್ದರು.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ತಂದೆಯಂದಿರ ದಿನಾಚರಣೆಯ ಮುನ್ನಾದಿನದಂದು ಸೋನು ಸೂದ್ ತಮ್ಮ ಮಗನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು.ಆದರೆ ಇದು ನಿಜವಲ್ಲವೆಂದು ಸೋನು ಸೂದ್ ತಿಳಿಸಿದ್ದಾರೆ.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ತಂದೆಯ ದಿನದಂದು ನಾನು ನನ್ನ ಮಗನಿಗೆ ಕಾರನ್ನು ಏಕೆ ಉಡುಗೊರೆಯಾಗಿ ನೀಡಬೇಕು? ಅವನು ನನಗೆ ಏನನ್ನಾದರೂ ಕೊಡಬೇಕಲ್ಲವೇ? ಎಂದು ಸೋನು ಸೂದ್ ಪ್ರಶ್ನಿಸಿದ್ದಾರೆ.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಅಂದ ಹಾಗೆ ಮರ್ಸಿಡಿಸ್ ಬೆಂಝ್ ಕಂಪನಿಯು ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯನ್ನು ಸಿಬಿಯು ರೂಪದಲ್ಲಿ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಈ ಎಸ್‌ಯುವಿಯನ್ನು ಒಂದು ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.43 ಕೋಟಿಗಳಾಗಿದೆ.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯು ಹಲವಾರು ಐಷಾರಾಮಿ ಫೀಚರ್'ಗಳನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ 4.0 ಲೀಟರ್ ವಿ 8 ಎಂಜಿನ್ ಅಳವಡಿಸಲಾಗಿದೆ.

ಮಗನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಸೋನು ಸೂದ್

ಈ ಎಸ್‌ಯುವಿ 48 ವಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಈ ಎಸ್‌ಯುವಿಯು 8 ಏರ್‌ಬ್ಯಾಗ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಎಬಿಎಸ್ ಹಾಗೂ ಇಬಿಡಿಗಳನ್ನು ಹೊಂದಿದೆ.

Most Read Articles

Kannada
English summary
Sonu Sood denies news about gifting luxury car to his son. Read in Kannada.
Story first published: Tuesday, June 22, 2021, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X