ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಕಳೆದ ವರ್ಷ ಕರೋನಾ ವೈರಸ್ ಅಟ್ಟಹಾಸ ಆರಂಭವಾದಾಗಿನಿಂದ ವಲಸೆ ಕಾರ್ಮಿಕರು ಸೇರಿದಂತೆ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕರೋನಾ ವೈರಸ್ ಎರಡನೇ ಅಲೆಯ ಅವಧಿಯಲ್ಲಿಯೂ ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಜನರಿಗೆ ನೆರವಾಗಿದ್ದಾರೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಈಗ ಸೋನು ಸೂದ್'ರವರಿಗೆ ಸಂಬಂಧಿಸಿದ ಹೊಸ ವೀಡಿಯೊವೊಂದು ಹೊರಬಂದಿದೆ. ಈ ವೀಡಿಯೊದಲ್ಲಿ ಅವರು ಇತ್ತೀಚೆಗೆ ಬಿಡುಗಡೆಯಾದ ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯೊಂದಿಗೆ ತಮ್ಮ ಕುಟುಂಬದವರೊಂದಿಗೆ ಕಾಣಿಸಿಕೊಂಡಿದ್ದಾರೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಈ ಎಸ್‌ಯುವಿಯನ್ನು ಅವರು ತಮ್ಮ ಮಗ ಆರ್ಯನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ವೀಡಿಯೊವನ್ನು ಬಾಲಿವುಡ್ ಬೋಲ್ ಎಂಬ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಈ ವೀಡಿಯೊದಲ್ಲಿ ಇನ್ನು ರಿಜಿಸ್ಟರ್ ಆಗದ ಕಪ್ಪು ಬಣ್ಣದ ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯನ್ನು ಕಾಣಬಹುದು. ವ್ಯಕ್ತಿಯೊಬ್ಬ ಈಎಸ್‌ಯುವಿಯ ಬಗ್ಗೆ ಸೋನು ಸೂದ್'ರವರಿಗೆ ವಿವರಣೆ ನೀಡುತ್ತಾನೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಎಸ್‌ಯುವಿಯ ಫೀಚರ್'ಗಳನ್ನು ಪರೀಕ್ಷಿಸಿದ ನಂತರ ಸೋನು ಸೂದ್ ತಮ್ಮ ಮಕ್ಕಳೊಂದಿಗೆ ಮನೆಯಿಂದ ಹೊರ ಹೋಗುತ್ತಾರೆ. ಸೋನು ಸೂದ್ ಚಾಲಕನ ಸೀಟಿನಲ್ಲಿ ಕುಳಿತು ಹೊರ ಹೋಗುತ್ತಿರುವುದನ್ನು ಕಾಣಬಹುದು.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಸೋನು ಸೂದ್ ಅವರು ಆಡಿ ಕ್ಯೂ 7 ಸೇರಿದಂತೆ ಹಲವು ಟಾಪ್ ಎಂಡ್ ಕಾರು ಹಾಗೂ ಎಸ್‌ಯುವಿಗಳನ್ನು ಹೊಂದಿದ್ದಾರೆ. ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಕಳೆದ ವಾರವಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ದೇಶಿಯ ಮಾರುಕಟ್ಟೆಗಾಗಿ ಈ ಎಸ್‌ಯುವಿಯ 50 ಯುನಿಟ್'ಗಳನ್ನು ಮೊದಲೇ ಕಾಯ್ದಿರಿಸಲಾಗಿತ್ತು. ಈಗಾಗಲೇ ಈ ಎಲ್ಲಾ 50 ಯುನಿಟ್'ಗಳು ಮಾರಾಟವಾಗಿವೆ ಎಂದು ಕಂಪನಿ ಹೇಳಿದೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯ ಮೂಲ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.2.43 ಕೋಟಿಗಳಾಗಿದೆ. ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಎಸ್‌ಯುವಿಯು ಹಲವು ಫೀಚರ್ ಹಾಗೂ ಟೆಕ್ನಾಲಜಿಗಳನ್ನು ಹೊಂದಿದೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಇವುಗಳಲ್ಲಿ 12.3 ಇಂಚಿನ ಎಂಬಿಎಕ್ಸ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 12.3 ಇಂಚಿನ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಬರ್ಮಿಸ್ಟರ್ ಸರೌಂಡ್ ಸೌಂಡ್ ಸಿಸ್ಟಂ, ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್, ಡ್ಯಾಶ್‌ಬೋರ್ಡ್‌ನಲ್ಲಿ ಬಳಸುವ ನಪ್ಪಾ ಲೆದರ್'ಗಳು ಸೇರಿವೆ.

ಈ ಐಷಾರಾಮಿ ಎಸ್‌ಯುವಿಯಲ್ಲಿ 4.0 ಲೀಟರ್ ವಿ 8 ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 542 ಬಿಹೆಚ್‌ಪಿ ಪವರ್ ಹಾಗೂ 730 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 9 ಜಿ ಟ್ರೋನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಮಗನಿಗೆ ಹೊಸ ಐಷಾರಾಮಿ ಎಸ್‌ಯುವಿ ಉಡುಗೊರೆ ನೀಡಿದ ಸೋನು ಸೂದ್

ಈ ಎಂಜಿನ್'ನೊಂದಿಗೆ ಇಕ್ಯೂ ಬೂಸ್ಟ್ ಸ್ಟಾರ್ಟರ್ ಜನರೇಟರ್‌ ಜೋಡಿಸಲಾಗುತ್ತದೆ. ಈ ಜನರೇಟರ್ ಹೆಚ್ಚುವರಿಯಾಗಿ 21 ಬಿಹೆಚ್‌ಪಿ ಪವರ್ ಹಾಗೂ 249 ಎನ್‌ಎಂ ಟಾರ್ಕ್ ಅನ್ನು ಅಲ್ಪಾವಧಿಗೆ ಉತ್ಪಾದಿಸುತ್ತದೆ.

ಚಿತ್ರ ಕೃಪೆ: ಬೊಲ್ ಬಾಲಿವುಡ್

Article Published On: Monday, June 14, 2021, 21:01 [IST]
English summary
Sonu Sood gifts new Mercedes Maybach GLS600 SUV to his son. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+