ಕಾರ್ ಕೀ ಕಳ್ಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ರಜನಿಕಾಂತ್ ಎರಡನೇ ಪುತ್ರಿ

ಕೆಲವು ತಿಂಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಮೊದಲ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಮನೆಯಲ್ಲಿ ಭಾರಿ ಮೊತ್ತದ ಆಭರಣ ಕಳ್ಳತನದ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ರಜನೀಕಾಂತ್ ಮತ್ತೋರ್ವ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದೀಗ ಸೌಂದರ್ಯ ರಜನಿಕಾಂತ್ ತಮ್ಮ ಐಶಾರಾಮಿ ರೇಂಜ್ ರೋವರ್ ಕಾರಿನ ಕೀ ಕಳೆದುಕೊಂಡು ಕಳೆದು ಹೋಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಏಪ್ರಿಲ್ 23 ರಂದು ಮನೆಯಿಂದ ಖಾಸಗಿ ಕಾಲೇಜೊಂದಕ್ಕೆ ತೆರಳುವಾ ತೆರಳುತ್ತಿದ್ದ ವೇಳೆ ಕೀ ಕಾಣೆಯಾಗಿದೆ. ರೇಂಜ್ ರೋವರ್ ಕಾರನ್ನು ಬಿಟ್ಟು ಮತ್ತೊಂದು ಕಾರಿನಲ್ಲಿ ಕಾರ್ಯಕ್ರಮಕ್ಕೆ ತೆರಳಿದರು. ಈ ಬಗ್ಗೆ ದೂರು ನೀಡಿರುವ ಸೌಂದರ್ಯಾ ಕೀ ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Rajini Daughter

ಸುಮಾರು ಮೂರು ಕೋಟಿಗೂ ಹೆಚ್ಚಿನ ಬೆಲೆಯ ರೇಂಜ್ ರೋವರ್ ಕಾರಿನ ಕೀಲಿ ಕೈ ಸಹ ಬಹು ದುಬಾರಿ. ಕೀಲಿ ಕೈ ಸಿಕ್ಕಿದವರು ಕಾರು ಕಳವು ಮಾಡುವ ಸಾಧ್ಯತೆಗಳು ಹೆಚ್ಚಿದೆ. ಮತ್ತೊಂದು ಕೀ ಮಾಡಿಸಲು ಸಹ ಪೊಲೀಸ್ ದೂರು ಅವಶ್ಯಕ ಎನ್ನಲಾಗುತ್ತದೆ. ತನ್ನ ಪೌಚ್ ನಲ್ಲಿಟ್ಟಿದ್ದ ಐಷಾರಾಮಿ ವಾಹನದ ಕೀ ನಾಪತ್ತೆಯಾಗಿದ್ದು ಅದನ್ನು ಪತ್ತೆ ಹಚ್ಚಲು ಪೊಲೀಸರ ಸಹಾಯ ಕೋರಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಮೊದಲು ರಜನಿಕಾಂತ್ ಅವರ ಮೊದಲ ಪುತ್ರಿ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನವಾಗಿತ್ತು. ದೂರು ನೀಡಿದ್ದ ಐಶ್ವರ್ಯಾ, ಮನೆಗೆಲಸದವರಾದ ಈಶ್ವರಿ, ಲಕ್ಷ್ಮಿ ಹಾಗೂ ಈಶ್ವರಿಯ ಪತಿ ಉಮಾಪತಿ ಮೇಲೆ ಅನುಮಾನ ಇರುವುದಾಗಿ ಹೇಳಿದ್ದರು. ಐಶ್ವರ್ಯಾ ಅವರ ದೂರಿನ ಆಧಾರದ ಮೇಲೆ ಮನೆ ಕೆಲಸದಾಕೆ ಈಶ್ವರಿ ಮತ್ತು ಕಾರು ಚಾಲಕ ವೆಂಕಟೇಶನ್ ಎಂಬ ಇಬ್ಬರನ್ನೂ ವಿಚಾರಣೆ ನಡೆಸಿದಾಗ ಹಲವು ವಿಷಯಗಳು ಬಹಿರಂಗವಾಯ್ತು.

ಹಲವು ವರ್ಷಗಳಿಂದ ಐಶ್ವರ್ಯಾ ಮನೆಯಲ್ಲಿ ಕೆಲಸ ಮಾಡುತ್ತಿರುವ ಈಶ್ವರಿ, ಕಳ್ಳತನ ಮಾಡುತ್ತ ಆಭರಣಗಳನ್ನು ಮಾರಿ ಬಂದ ಹಣದಿಂದ ಈಶ್ವರಿ ಸುಮಾರು ಒಂದು ಕೋಟಿ ಮೌಲ್ಯದ ಮನೆಯನ್ನು ಚೆನ್ನೈನ ಕೋಳಿಗನಲ್ಲೂರಿನಲ್ಲಿ ಖರೀದಿಸಿದ್ದರು. ಪೊಲೀಸರು ಈಶ್ವರಿಯ ಮನೆಯ ಮೇಲೆ ದಾಳಿ ಮಾಡಿದಾಗಲೂ ಅವರಿಗೆ ಸುಮಾರು 800 ಗ್ರಾಂ ಚಿನ್ನ, 30 ಗ್ರಾಂ ವಜ್ರ, ನಾಲ್ಕು ಕೆಜಿ ಬೆಳ್ಳಿ ಆಭರಣಗಳು ಸಿಕ್ಕಿದರು.

ಇವುಗಳ ಒಟ್ಟು ಮೌಲ್ಯ ಸುಮಾರು 4 ಕೋಟಿಗೂ ಹೆಚ್ಚೆಂದು ಪೊಲೀಸರು ಅಂದಾಜಿಸಿದ್ದಾರೆ. ಚಿನ್ನಾಭರಣಗಳ ಹೊರತಾಗಿ ಇನ್ನೂ ಕೆಲವು ವಸ್ತುಗಳನ್ನು, ನಗದು ಹಣವನ್ನು ಸಹ ಈಶ್ವರಿ ಹಾಗೂ ವೆಂಕಟ್ ಒಟ್ಟು ಸೇರಿ ಕದ್ದಿದ್ದಾರೆ ಎಂದಿದ್ದರು ಪೊಲೀಸರು. ಇನ್ನು ಇದೀಗ ಸೌಂದರ್ಯಾರ ಐಶಾರಾಮಿ ಕಾರಿನ ಕೀಲಿ ಕಾಣೆಯಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಐಶ್ವರ್ಯಾರ ತಂಗಿಸೌಂದರ್ಯಾ 2010 ರಲ್ಲಿ ಅಶ್ವಿನ್ ರಾಮ್​ಕುಮಾರ್ ಎಂಬುವರನ್ನು ವಿವಾಹವಾಗಿದ್ದರು. ಆ ಬಳಿಕ 2017 ರಲ್ಲಿ ಅವರಿಂದ ವಿಚ್ಛೇದನ ಪಡೆದರು. ಬಳಿಕ 2019 ರಲ್ಲಿ ವಿಶಾಗನ್ ವನಗಮುಡಿ ಎಂಬುವರನ್ನು ಅದ್ಧೂರಿಯಾಗಿ ವಿವಾಹವಾದರು. 2020ರಲ್ಲಿ ಈ ದಂಪತಿಗೆ ಮಗುವೊಂದು ಜನಿಸಿದೆ. ಇನ್ನು ಸೌಂದರ್ಯ ಅವರ ರೇಂಜ್ ರೋವರ್ ಕಾರ್ ಕೀಗಳು ಕಳೆದುಹೋಗಿವೆ. ಅವರ ಬಳಿ ಯಾವ ಮಾದರಿಯ ರೇಂಜ್ ರೋವರ್ ಕಾರು ಇದೆ ಎಂಬುದು ನಿಖರವಾಗಿ ತಿಳಿದಿಲ್ಲ.

ಏಕೆಂದರೆ ಪ್ರಸ್ತುತ ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್, ರೇಂಜ್ ರೋವರ್, ರೇಂಜ್ ರೋವರ್ ಇವೊಕ್ ಮತ್ತು ರೇಂಜ್ ರೋವರ್ ವೆಲಾರ್ ಎಂಬ 4 ವಿಭಿನ್ನ ರೇಂಜ್ ರೋವರ್ ಮಾದರಿಗಳು ಮಾರಾಟದಲ್ಲಿವೆ. ಎಲ್ಲಾ ನಾಲ್ಕು ನೋಟದಲ್ಲಿ ಸ್ವಲ್ಪ ಭಿನ್ನವಾಗಿರುತ್ತವೆ. ಆದರೆ ತಾಂತ್ರಿಕ ಅಂಶಗಳಲ್ಲಿ ಈ ನಾಲ್ಕರ ನಡುವೆ ಹಲವು ವ್ಯತ್ಯಾಸಗಳಿವೆ.

Article Published On: Thursday, May 11, 2023, 11:42 [IST]
English summary
Soundarya rajinikanth missed her range rover car key goes to cops details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+