ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಆಟೋಮೋಟಿವ್ ಪ್ರಿಯರು ಕಾರು ಹಾಗೂ ಬೈಕುಗಳನ್ನು ಚಲಾಯಿಸುವುದನ್ನು, ಸವಾರಿ ಮಾಡುವುದನ್ನು ನೋಡಿದ್ದೇವೆ. ಕೆಲವರಿಗೆ ವಾಹನಗಳ ಸವಾರಿ ಮಾಡುವುದೆಂದರೆ ಏನೋ ಒಂದು ರೀತಿಯ ಆನಂದದಾಯಕ ಅನುಭವ. ದೇಹದಲ್ಲಿ ಯಾವುದೇ ನ್ಯೂನತೆಗಳಿಲ್ಲದವರು ವಾಹನ ಚಲಾಯಿಸಲು ಯಾವುದೇ ರೀತಿಯ ತೊಂದರೆಯನ್ನು ಎದುರಿಸಬೇಕಿಲ್ಲ.

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಆದರೆ ದೇಹದಲ್ಲಿ ನ್ಯೂನತೆಗಳನ್ನು ಹೊಂದಿರುವ ವಿಶೇಷ ಚೇತನರು, ವಾಹನ ಚಲಾಯಿಸಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಕೇರಳದ ಕಾಸರಗೋಡಿನ ನಿವಾಸಿ ಜಯೇಶ್‍‍ರವರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಜಯೇಶ್ ಕೂಡ ಆಟೋಮೊಬೈಲ್ ಪ್ರಿಯರು. ಆದರೆ ವಿಶೇಷ ಚೇತನರಾದ ಕಾರಣ ಸುಲಭವಾಗಿ ವಾಹನ ಚಲಾಯಿಸುವುದಕ್ಕೆ ಸಾಧ್ಯವಿಲ್ಲ. ವ್ಹೀಲ್‍‍ಬಿ‍‍ಹೆಚ್‍‍ಪಿಯಲ್ಲಿ ವರದಿಯಾದಂತೆ ಜಯೇಶ್ 6 ತಿಂಗಳ ಮಗುವಾಗಿದ್ದಾಗ ಪೋಲಿಯೊದ ಕಾರಣದಿಂದ ತಮ್ಮ ಎರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡರು.

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಆದರೂ ವಾಹನಗಳ ಬಗೆಗಿನ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ. ಜಯೇಶ್ ಈಗ ಟಾಟಾ ನೆಕ್ಸಾನ್ ಕಾರಿನ ಮಾಲೀಕರಾಗಿದ್ದಾರೆ. ಜಯೇಶ್‍‍ರವರ ಬಳಿಯಿರುವ ನೆಕ್ಸಾನ್ ಕಾರಿನಲ್ಲಿ ವಿಶೇಷ ಉಪಕರಣಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಅವರು ಸುಲಭವಾಗಿ ಕಾರನ್ನು ಚಲಾಯಿಸಲು ಸಾಧ್ಯವಾಗಲಿದೆ.

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಕಾರುಗಳ ಬಗೆಗೆ ವಿಪರೀತವಾದ ಆಸಕ್ತಿ ಹೊಂದಿರುವ ಜಯೇಶ್‍‍ರವರಿಗೆ, ಕಾರು ಡ್ರೈವ್ ಮಾಡುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅವರಿಗೆ 18 ವರ್ಷವಾಗಿದ್ದಾಗ ಅವರು ಸ್ಕೂಟರ್ ಒಂದನ್ನು ಚಲಾಯಿಸಿದ್ದರು. ವಿಭಿನ್ನವಾಗಿ ಸ್ಕೂಟರ್ ಚಲಾಯಿಸಲು ಪ್ರಯತ್ನಪಟ್ಟರೂ ಸಂಬಂಧಪಟ್ಟ ಅಧಿಕಾರಿಗಳು ಸಹಕಾರ ನೀಡಲಿಲ್ಲ.

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಜಯೇಶ್‍‍ರವರು ಹೇಳುವಂತೆ ಪ್ರಾರಂಭದಲ್ಲಿ ಸಂಬಂಧಪಟ್ಟವರು ಉತ್ತೇಜನ ನೀಡದೇ ನಿರಾಶಾರಾಗಿದ್ದರು. ಆದರೂ ಛಲ ಬಿಡದೇ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು. ನಂತರ ಅವರು ಮಾರುತಿ ಸುಜುಕಿ ಆಲ್ಟೊ ಕಾರನ್ನು ಖರೀದಿಸಿದರು.

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಈ ಕಾರಿನಲ್ಲಿ ವಿಶೇಷ ಚೇತನರು ಕಾರು ಚಲಾಯಿಸಲು ಅನುಕೂಲವಾಗುವಂತಹ ಉಪಕರಣಗಳನ್ನು ಅಳವಡಿಸಿಲಾಗಿತ್ತು. ಜಯೇಶ್ ಇತ್ತೀಚಿಗೆ ಟಾಟಾ ನೆಕ್ಸಾನ್ ಖರೀದಿಸಿದ್ದಾರೆ. ಜಯೇಶ್‍‍ರವರ ಪ್ರಕಾರ ಈ ಕಾರು ಆರಾಮದಾಯಕವಾಗಿದ್ದು, ಸುರಕ್ಷತೆಯನ್ನು ಒದಗಿಸುತ್ತದೆ.

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಜಯೇಶ್ ಹೊಸ ಕಾರನ್ನು ಪ್ರತಿ ದಿನವೂ ಡ್ರೈವ್ ಮಾಡುತ್ತಾರೆ. ತಾವು ನೆಕ್ಸಾನ್ ಖರೀದಿಸಿದ್ದು ಏಕೆ ಎಂಬ ಬಗ್ಗೆ ಜಯೇಶ್ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ಹೆಚ್ಚಿನ ಅಪಾಯಗಳನ್ನು ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ನಾನು ದಿನಕ್ಕೆ 10 ದೀರ್ಘ ಗಂಟೆಗಳ ಕಾಲ ಕಾರು ಚಲಾಯಿಸಲು ಇಷ್ಟಪಡುತ್ತೇನೆ.

MOST READ: ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಈ ಕಾರಿನಲ್ಲಿರುವ ಕಂಫರ್ಟ್, ಸುರಕ್ಷಾ ಫೀಚರ್ಸ್ ಹಾಗೂ ಶಬ್ದವಿಲ್ಲದ ಪ್ರಯಾಣವು ನನಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ದಾರೆ. ಜಯೇಶ್‍‍ರವರ ಬಳಿಯಿರುವ ನೆಕ್ಸಾನ್ ಕಾರು, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ಕಾರಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಲಿವರ್‌ ಅಳವಡಿಸಲಾಗಿದೆ.

MOST READ: ಏರಿಕೆಯಾಗಲಿವೆ ಇನೋವಾ ಕ್ರಿಸ್ಟಾ ಹಾಗೂ ಫಾರ್ಚೂನರ್ ದರಗಳು

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಇದು ಫುಟ್‌ವೆಲ್‍‍‍ಗಳನ್ನು ಕೈನಿಂದ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಲಿವರ್‍‍ನ ಮೇಲಿರುವ ನಾಬ್ ಅನ್ನು ಕಾರಿನ ಆಕ್ಸೆಲೆರೇಟರ್ ಹಾಗೂ ಬ್ರೇಕ್‌ಗಳಿಗೆ ಜೋಡಿಸಲಾಗಿದೆ. ಈ ಲಿವರ್ ಅನ್ನು ತಳ್ಳಿದಾಗ, ಆಕ್ಸೆಲೆರೇಟರ್‍‍ನಂತೆ ಹಾಗೂ ಎಳೆದಾಗ ಬ್ರೇಕ್‍‍ನಂತೆ ಕಾರ್ಯನಿರ್ವಹಿಸುತ್ತದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ಆರಂಭದಲ್ಲಿ ಈ ರೀತಿಯಾಗಿ ಮಾಡಲು ಕಷ್ಟವಾದರೂ, ನಂತರ ಮಾಮೂಲಿನಂತಾಗುತ್ತದೆ. ತನ್ನ ವಾಹನದಲ್ಲಿ ಈ ರೀತಿಯ ಸೌಲಭ್ಯಗಳನ್ನು ಪಡೆಯಲು ಜಯೇಶ್‍‍ರವರು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದ ಅನುಮೋದನೆಯ ಪತ್ರವನ್ನು ಪಡೆದಿದ್ದಾರೆ.

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಟಾಟಾ ನೆಕ್ಸಾನ್ ಚಲಾನೆ..!

ನಂತರ ಸ್ಥಳೀಯ ಆರ್‍‍‍ಟಿ‍ಒದಿಂದ ಈ ಪ್ರಕ್ರಿಯೆಯನ್ನು ಕಾನೂನುಬದ್ಧಗೊಳಿಸಿ ಕೊಂಡಿದ್ದಾರೆ. ಜನರಿಗೆ ಸ್ಫೂರ್ತಿ ನೀಡುವುದಕ್ಕಾಗಿ ತಮ್ಮ ನೆಕ್ಸಾನ್ ಕಾರಿನಲ್ಲಿ ಕಾಸರ‍‍ಗೋಡಿನಿಂದ ಭೂತಾನ್‍‍ವರೆಗೆ ಸುಮಾರು 7,000 ಕಿ.ಮೀ ಸಂಚರಿಸುವ ಯೋಜನೆಯಲಿದ್ದಾರೆ. ಜಯೇಶ್‍‍ರವರ ಮನೋಬಲಕ್ಕೆ ಅಭಿನಂದನೆಗಳು. ಅವರ ಮುಂದಿನ ಎಲ್ಲಾ ಕಾರ್ಯಕ್ಕೆ ಜಯ ಸಿಗಲಿ ಎಂದು ಹಾರೈಸುತ್ತೇವೆ.

Source: Wheelbhp

Most Read Articles

Kannada
English summary
Specially abled car enthusiast overcomes challenges to drive the Tata Nexon - Read in kannada
Story first published: Tuesday, August 20, 2019, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more