ಕಷ್ಟಕ್ಕೆ ಹೆದರದೆ ಮುಗುಳುನಗೆಯೊಂದಿಗೆ ಫುಡ್ ಡೆಲಿವರಿ ಮಾಡುವ ವಿಶೇಷಚೇತನ ಮಂಗಳೂರಿನ ಪರಶುರಾಮ

ಇಂದು ಹಸಿವಾಯ್ತು ಎಂದಾಗ ಆಡುಗೆ ಮಾಡುವ ಬದಲು ಮೊಬೈಲ್ ಹಿಡಿದು ಆನ್‌ಲೈನ್‌ ಅಪ್ಲಿಕೇಷನ್ ಮೂಲಕ ತಮ್ಮಿಷ್ಟದ ಫುಡ್ ಆರ್ಡರ್ ಮಾಡಿ ತಿನ್ನುತ್ತಾರೆ. ಕೆಲವರಿಗೆ ಆಡುಗೆ ಮಾಡಿ ತಿನ್ನಲು ಸಮಯ ಸಿಗುವುದಿಲ್ಲ. ಕೆಲಸದ ಒತ್ತಡ ಎನ್ನುವ ಕಾರಣಕ್ಕೆ ಬಹುತೇಕರು ಆನ್‌ಲೈನ್‌ ಅಪ್ಲಿಕೇಷನ್ ಮೂಲಕ ಆರ್ಡರ್ ಮಾಡಿ ತಿನ್ನುತ್ತಾರೆ.

ಆನ್‌ಲೈನ್‌ ನಲ್ಲಿ ಆರ್ಡರ್ ಮಾಡಿದ್ರೆ ಮನೆ ಬಾಗಿಲಿಗೆ ಫುಡ್ ತಂದುಕೊಡುವ ಸ್ವಿಗ್ಗಿ ಹಾಗೂ ಝೋಮೇಟೊದಲ್ಲಿ ಅಪ್ಲಿಕೇಷನ್ ಗಳು ಹೆಚ್ಚು ಜನಪ್ರಿಯತೆಗಳಿಸಿದೆ. ಆನ್‌ಲೈನ್‌ ನಲ್ಲಿ ಆರ್ಡರ್ ಮಾಡಿ ನಾವು ಆರಾಮವಾಗಿ ತಿನ್ನುವರು ಕೆಲವು ಸಲ ಫುಡ್ ಬರಲು ತಡವಾದರೂ ನಾವು ಕೋಪ ಬರುತ್ತದೆ. ಕೆಲವರು ಡೆಲಿವರಿ ಬಾಯ್‍ಗೆ ಬೈಯುತ್ತಾರೆ. ಆದರೆ ನಮಗೆ ಫುಡ್ ತಂದುಕೊಡಲು ಅವರ ಪಡುವ ಶ್ರಮದ ಬಗ್ಗೆ ನಾವು ಚಿಂತೆ ಮಾಡುವುದಿಲ್ಲ.

ಫುಡ್ ಡೆಲಿವರಿ ಮಾಡುವ ವಿಶೇಷಚೇತನ ಮಂಗಳೂರಿನ ಪರಶುರಾಮ

ಮಳೆಯಲ್ಲಿ ಒದ್ದೆಯಾಗಿ ಅಥವಾ ಇತರ ರೀತಿಯಲ್ಲಿ ಕಷ್ಟ ಪಡುವವರ ವೀಡಿಯೊಗಳು ಅಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದು ಮಂಗಳೂರಿನ ವೀಡಿಯೊ ಆಗಿದೆ. ಇತ್ತೀಚೆಗೆ ವಿಕಲಚೇತನ ಡೆಲಿವರಿ ಬಾಯ್ ವಿಡಿಯೋ ಫುಲ್ ವೈರಲ್ ಆಗಿದೆ. "ರಿಯಲ್ ಹೀರೋ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ವೈರಲ್ ಆಗಿದೆ. ವಿಕಲಚೇತನ ವ್ಯಕ್ತಿಯೊಬ್ಬರು ಸ್ಕೂಟರ್‌ನಿಂದ ಕೆಳಗಿಳಿಯುತ್ತಿರುವುದು ವಿಡಿಯೋದಲ್ಲಿದೆ. ವೀಡಿಯೋದಲ್ಲಿ ಕಂಡುಬರುವ ಯುವಕ ತನ್ನ ಸ್ಕೂಟರ್‌ನಿಂದ ಕೆಳಗಿಳಿದು ರೆಸ್ಟೋರೆಂಟ್‌ನ ಕಡೆಗೆ ಹೋಗುತ್ತಾನೆ.

ಆರ್ಡರ್ ನಲ್ಲಿರುವ ಫುಡ್ ಪಡೆಯಲು ರೆಸ್ಟೋರೆಂಟ್ ಸಿಬ್ಬಂದಿ ಹತ್ತಿರ ಬಳಿಗೆ ಬರುತ್ತಿದ್ದಂತೆ ಡೆಲಿವರಿ ಮಾಡಲಿರುವ ಅವರು ಫುಡ್ ನೀಡುತ್ತಾರೆ. ಅವನು ಆರ್ಡರ್ ಅನ್ನು ಸಂಗ್ರಹಿಸಿ ನಂತರ ತನ್ನ ಸ್ಕೂಟರ್‌ಗೆ ಹಿಂತಿರುಗುತ್ತಾನೆ. ಬ್ಯಾಗ್​ನ್ನು ಹೆಗಲೇರಿಸಿಕೊಂಡು ಫುಡ್ ಡೆಲಿವರಿ ಮಾಡಲು ಕೈಯ ಶಕ್ತಿಯಿಂದ ನಡೆಯುವ ಈ ಯುವಕನ ಹೆಸರು ಪರಶುರಾಮ. ಇವರು ಮೂಲತಃ ವಿಜಯಪುರದವರಾಗಿದ್ದು, ಹೆತ್ತವರು ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿದ್ದಾರೆ. ಇವರು ಹುಟ್ಟಿ ಒಂದು ವರ್ಷದವರೆಗೆ ಯಾವುದೇ ಸಮಸ್ಯೆಗಳಿರಲಿಲ್ಲ.

ಬಳಿಕ ಅವರಿಗೆ ಜ್ವರ ಬಂದು ಡಾಕ್ಟರ್ ಬಳಿ ತೆರಳಿದ್ದರು. ಅಲ್ಲಿ ಡಾಕ್ಟರ್ ನೀಡಿದ ಇಂಜೆಕ್ಷನ್​ನಿಂದಾಗಿ ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿತು. ಇನ್ನೊಂದು ಕಾಲು ಕೊಂಚ ಬಲವಿದ್ದರೂ ಅಂಗವೈಕಲ್ಯಕ್ಕೆ ಇವರು ತುತ್ತಾದರು. ಪರಶುರಾಮ ಅವರು 9ನೇ ತರಗತಿಯ ತರಗತಿಯವರೆಗೆ ಮಾತ್ರ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಬಡತನದಿಂದ ಶಿಕ್ಷಣ ಮುಂದುವರೆಸಲು ಸಾಧ್ಯವಾಗಿಲ್ಲ. ನಂತರ ಅವರು ಭಿಕ್ಷಾಟನೆಗೆ ಇಳಿದರು. ನಂತ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯಲು ಪ್ರಾರಂಭಿಸಿದರು.

ಸರ್ಕಾರದ ಸ್ಕೀಮ್ ಒಂದರಲ್ಲಿ ದೊರೆತ ದ್ವಿಚಕ್ರ ವಾಹನವನ್ನು ಬಳಿಸಿ ಫುಡ್ ಡೆಲಿವರಿ ಮಾಡಲು ಪ್ರಾರಂಭಿಸಿದ್ದರು. ಇಂತಹ ಪರಶುರಾಮ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಭಾರತದ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಅನೇಕ ಜನರು ಭಿಕ್ಷೆ ಬೇಡುವುದನ್ನು ನಾವು ನೋಡಿದ್ದೇವೆ. ಅವರಿಗೆ ಹೋಲಿಸಿದರೆ, ಈ ಪರಶುರಾಮ ಖಂಡಿತವಾಗಿಯೂ ನಿಜ ಜೀವನದಲ್ಲಿ ಹೀರೋ ಆಗಿದ್ದಾನೆ ಏಕೆಂದರೆ ಅವನು ತನ್ನ ಅಂಗವೈಕಲ್ಯಗಳ ಬಗ್ಗೆ ಚಿಂತಿಸದೆ ತನ್ನ ಜೀವನದಲ್ಲಿ ಯಶಸ್ವಿಯಾಗುವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ವಿಶೇಷವಾಗಿ ಭಾರತದಂತಹ ದೇಶದಲ್ಲಿ ವಿಕಲಚೇತನರ ಜೀವನ ಕಷ್ಟಕರವಾಗಿದೆ. ವಿಷಯಗಳು ನಿಧಾನವಾಗಿ ಸುಧಾರಿಸುತ್ತಿವೆ ಆದರೆ, ಈ ವಿಶೇಷ ಸಾಮರ್ಥ್ಯವುಳ್ಳ ಜನರಿಗೆ ಮೂಲಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆ ವಲಯದಲ್ಲಿ ನೀಡುವ ಸೌಕರ್ಯ ಕೂಡ ಮತ್ತಷ್ಟು ಹೆಚ್ಚಿಸಬೇಕಾಗಿದೆ. ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿತರಾಗಿರುವ ಅಂತಹ ಜನರನ್ನು ನಾವು ಆಗಾಗ್ಗೆ ನೋಡುತ್ತೇವೆ. ಇದು ಎಲ್ಲರದ್ದೂ ಅಲ್ಲ. ತಮಗೆ ತಾವೇ ಸವಾಲೆಸೆದು ಸ್ವತಂತ್ರ ಮಾರ್ಗ ಕಂಡುಕೊಂಡವರು ಹಲವು ವಿಕಲಚೇತನರಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ನಲ್ಲಿ ನಾವು ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, February 23, 2023, 15:40 [IST]
English summary
Specially abled parashuram delivering swiggy orders in mangalore details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+