ಡ್ರೋನ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದಾದ ಸ್ಪೈಸ್ ಜೆಟ್
ಸ್ಪೈಸ್ ಜೆಟ್ ಕಂಪನಿಯು ಭಾರತದಲ್ಲಿ ಕಡಿಮೆ ಬೆಲೆಯ ವಿಮಾನಯಾನ ಸೇವೆಯನ್ನು ನೀಡುತ್ತದೆ. ಪ್ರಯಾಣಿಕರ ವಿಮಾನಗಳ ಜೊತೆಗೆ, ಪಾರ್ಸೆಲ್ ಸೇವೆಯನ್ನು ಸ್ಪೈಸ್ಎಕ್ಸ್‌ಪ್ರೆಸ್ ವಿಭಾಗದ ಮೂಲಕ ನೀಡಲಾಗುತ್ತದೆ.

ಈಗ ಡ್ರೋನ್ ಮೂಲಕ ಪಾರ್ಸೆಲ್‌ಗಳನ್ನು ತಲುಪಿಸಲು ಫೆಡರಲ್ ಏವಿಯೇಷನ್ ರೆಗ್ಯುಲೇಟರಿ ಅಥಾರಿಟಿಯು ಸ್ಪೈಸ್‌ಜೆಟ್‌ಗೆ ಅನುಮೋದನೆ ನೀಡಿದೆ. ಇದರಿಂದಾಗಿ ಪಾರ್ಸೆಲ್ ವಿತರಣಾ ಸೇವೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ಕಂಪನಿಯು ಪಾರ್ಸೆಲ್ ಸೇವೆಯನ್ನು ವಿಮಾನಗಳ ಮೂಲಕ ಮಾತ್ರವಲ್ಲದೆ ವಿಮಾನಗಳಿಲ್ಲದ ಪ್ರದೇಶಗಳಿಗೂ ನೀಡಲು ಮುಂದಾಗಿದೆ. ಇದಕ್ಕಾಗಿ ಡ್ರೋನ್‌ಗಳನ್ನು ಬಳಸಿ ಪಾರ್ಸೆಲ್‌ಗಳನ್ನು ದೂರದ ಪ್ರದೇಶಗಳಿಗೆ ವೇಗವಾಗಿ ಸಾಗಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಇದರಿಂದಾಗಿ ವೈದ್ಯಕೀಯ ಹಾಗೂ ಅಗತ್ಯ ವಸ್ತುಗಳನ್ನು ವೇಗವಾಗಿ ಪೂರೈಸಲು ಸಾಧ್ಯವಾಗಲಿದೆ ಎಂದು ಸ್ಪೈಸ್‌ಜೆಟ್ ಹೇಳಿದೆ. ಈ ಪಾರ್ಸೆಲ್ ಸೇವೆಗಾಗಿ ಡ್ರೋನ್‌ಗಳನ್ನು ಬಳಸಲು ಸ್ಪೈಸ್‌ಜೆಟ್ ಕಂಪನಿಯು ಫೆಡರಲ್ ಏವಿಯೇಷನ್ ರೆಗ್ಯುಲೇಟರಿ ಅಥಾರಿಟಿಯಿಂದ ಅನುಮತಿಯನ್ನು ಪಡೆದಿದೆ.

ಈ ಡ್ರೋನ್‌ಗಳನ್ನು ಪ್ರಾಯೋಗಿಕವಾಗಿ ಬಳಸಲಾಗುವುದು. ಈ ಹೊಸ ಯೋಜನೆಯಿಂದ ಗ್ರಾಹಕರು ಪಾರ್ಸೆಲ್ ಸೇವೆಯನ್ನು ವೇಗವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ಪಾರ್ಸೆಲ್‌ಗಳನ್ನು ಕಳುಹಿಸುವ ವೆಚ್ಚವು ಸಾಕಷ್ಟು ಕಡಿಮೆಯಾಗುತ್ತದೆ ಎಂದು ಸ್ಪೈಸ್‌ಜೆಟ್ ಅಭಿಪ್ರಾಯ ಪಟ್ಟಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸ್ಪೈಸ್ ಜೆಟ್ ಪಾರ್ಸೆಲ್ ಯೋಜನೆಯನ್ನು ಡ್ರೋನ್ ತಯಾರಕ ಕಂಪನಿಯಾದ ಥ್ರೊಟಲ್ ಏರೋಸ್ಪೇಸ್, ಐಯೊಲಾಜಿಕ್ ಸಾಫ್ಟ್‌ವೇರ್ ಕಂಪನಿ ಹಾಗೂ ಇನ್ವೊಲಿಯಾ ಟೆಕ್ನಾಲಜಿಯ ಜೊತೆಗೆ ಪರೀಕ್ಷಿಸಲಿದೆ.

ಈ ಯೋಜನೆಯು ಯಶಸ್ವಿಯಾದರೆ ಪಾರ್ಸೆಲ್ ಸೇವೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಈ ಯೋಜನೆಯನ್ನು ವಿಸ್ತರಿಸುವ ಅವಕಾಶವು ಶೀಘ್ರದಲ್ಲೇ ಮುಗಿಯಲಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.


Click it and Unblock the Notifications