ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಕಾರುಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಅದರಲ್ಲಿ ಹಾಲಿವುಡ್ ಸಿನಿಮಾ ಸೆಲಬ್ರಿಟಿಗಳು ಅತಿ ದುಬಾರಿ ಕಾರುಗಳನ್ನು ಖರೀದಿಸಿ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಹಾಲಿವುಡ್ ನಟ ಟಾಮ್ ಹಾಲೆಂಡ್ ಅವರು ಹೊಸ ಎಲೆಕ್ಟ್ರಿಕ್ ಸೂಪರ್ ಕಾರನ್ನು ಖರೀದಿಸಿದ್ದಾರೆ. ನಟ ಟಾಮ್ ಹಾಲೆಂಡ್ ಅವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಹಾಲೆಂಡ್ ಅನೇಕ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ, ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್‌ನಲ್ಲಿನ ಸ್ಪೈಡರ್ ಮ್ಯಾನ್ ಫ್ರ್ಯಾಂಚೈಸ್, ಮತ್ತು ಇತ್ತೀಚೆಗೆ ಅದೇ ಹೆಸರಿನ ವೀಡಿಯೊ ಗೇಮ್ ಆಧಾರಿತ ಅನ್‌ಚಾರ್ಟೆಡ್ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅನೇಕರಿಗೆ ತಿಳಿದಿಲ್ಲದ ಸಂಗತಿಯೆಂದರೆ, ಹಾಲೆಂಡ್ ಅವರು ಚಲನಚಿತ್ರಗಳಂತೆ ಅವರ ಕಾರುಗಳನ್ನು ಇಷ್ಟಪಡುತ್ತಾರೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ನಟ ಟಾಮ್ ಹಾಲೆಂಡ್ ಅವರು ಹೊಸ ಪೋರ್ಷೆ ಟೇಕನ್ ಟರ್ಬೊ ಎಸ್ ಕಾರನ್ನು ಖರೀದಿಸಿದ್ದಾರೆ. ಈ ಹೊಸ ಕಾರಿನೊಂದಿಗಿನ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋರ್ಷೆ ಟೇಕಾನ್ ಟರ್ಬೊ ಎಸ್ ಒಂದು ಸ್ಪೋರ್ಟ್ಸ್ ಸಲೂನ್ ಮತ್ತು ಪ್ರಸ್ತುತ ಪೋರ್ಷೆ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಶಕ್ತಿಶಾಲಿ ಸ್ಪೋರ್ಟ್ಸ್ ಕಾರ್ ಆಗಿದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಹಾಲಿವುಡ್ ನಟ ಟಾಮ್ ಹಾಲೆಂಡ್ ಅವರು ಭಾರತದಲ್ಲಿ ಎಕ್ಸ್-ಶೋರೂಮ್ ಪ್ರಕಾರ ರೂ.2.13 ಕೋಟಿಗೆ ಮಾರಾಟವಾಗುವ ಟಾಪ್-ಸ್ಪೆಕ್ ಪೋರ್ಷೆ ಟೇಕಾನ್ ಟರ್ಬೊ ಎಸ್ ರೂಪಾಂತರವನ್ನು ಖರೀದಿಸಿದೆ. ಈ ಎಲೆಕ್ಟ್ರಿಕ್ ಸೂಪರ್‌ಕಾರ್ 750 ಬಿಹೆಚ್‍ಪಿ ಪವರ್ ಮತ್ತು 1050 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಎರಡು ಶಾಶ್ವತ-ಮ್ಯಾಗ್ನೆಟ್ ಸಿಂಕ್ರೊನಸ್ (PMS) ಮೋಟಾರ್‌ಗಳು ಪವರ್ ನೀಡುತ್ತದೆ. ನಾಲ್ಕು ಡೋರಿನ ಎಲೆಕ್ಟ್ರಿಕ್ ಸೂಪರ್‌ಕಾರ್ ಕೇವಲ ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಪೋರ್ಷೆ ಟೇಕಾನ್ ಟರ್ಬೊ ಎಸ್ ಸೂಪರ್‌ಕಾರ್ 260 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಎಲೆಕ್ಟ್ರಿಕ್ ಮೋಟರ್‌ಗಳನ್ನು ಪವರ್ ಮಾಡುವುದು ಟೇಕಾನ್‌ನಲ್ಲಿನ ಬೃಹತ್ 93.4 ಕಿ.ವ್ಯಾಟ್ ಬ್ಯಾಟರಿಯಾಗಿದ್ದು, ಒಂದೇ ಚಾರ್ಜ್‌ನಲ್ಲಿ 390-416 ಕಿಮೀ (WLTP ಸೈಕಲ್) ರೇಂಜ್ ಅನ್ನು ನೀಡುತ್ತದೆ. ನಟ ಟಾಮ್ ವೇಗದ ಅಥವಾ ಐಷಾರಾಮಿ ಕಾರುಗಳ ಪ್ರಿಯರಾಗಿದ್ದಾರೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಅವರ ಬಳಿ ಆಡಿ ಆರ್‌ಎಸ್ ಸ್ಪೋರ್ಟ್‌ಬ್ಯಾಕ್, ಆಡಿ ಕ್ಯೂ7 ಮತ್ತು ರೋಲ್ಸ್ ರಾಯ್ಸ್ ಕುಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಸಹ ಹೊಂದಿದ್ದಾರೆ. ಇದೀಗ ಈ ಸಾಲಿಗೆ ಪೋರ್ಷೆ ಟೇಕನ್ ಟರ್ಬೊ ಎಸ್ ಎಲೆಕ್ಟ್ರಿಕ್ ಕಾರು ಕೂಡ ಸೇರಿದೆ. ಸ್ಪೈಡರ್ ಮ್ಯಾನ್ ಫ್ರ್ಯಾಂಚೈಸ್‌ನಲ್ಲಿ ಅವರ ಕೊನೆಯ ಚಿತ್ರ 2021 ರಲ್ಲಿ ಬಿಡುಗಡೆಯಾದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಮತ್ತು ಮಾರ್ವೆಲ್ ಸ್ಟುಡಿಯೋಸ್ ಚಿತ್ರಗಳು ಹಲವಾರು ದಾಖಲೆಯನ್ನು ಬರೆದಿದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಪೋರ್ಷೆ ಕಂಪನಿಯು ಭಾರತದಲ್ಲಿ ವಿಶಿಷ್ಟವಾದ ಶೋರೂಂ ಅನ್ನು ಕಳೆದ ವರ್ಷ ತೆರೆದಿತ್ತು. ಕಂಪನಿಯು ದೆಹಲಿಯ ಕೊನಾಟ್ ಪ್ಲೇಸ್‌ನಲ್ಲಿ ಸ್ಟುಡಿಯೋ ಕೆಫೆ ಶೋರೂಂ ಅನ್ನು ಆರಂಭಿಸಿತು ಈ ಶೋರೂಂನಲ್ಲಿ ಗ್ರಾಹಕರು ಕಾರುಗಳನ್ನು ಖರೀದಿಸಬಹುದು ಹಾಗೂ ಕಾರನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಈ ಶೋರೂಂನಲ್ಲಿಯೇ ಅನೇಕ ಕಸ್ಟಮೈಸ್ ಆಯ್ಕೆಗಳು ಲಭ್ಯವಿರುವುದರಿಂದ ಇಲ್ಲಿ ಖರೀದಿಸಿದ ಕಾರುಗಳನ್ನು ಶೋರೂಂನ ಹೊರಗೆ ಕಸ್ಟಮೈಸ್ ಮಾಡುವ ಅಗತ್ಯವಿಲ್ಲವೆಂದು ಪೋರ್ಷೆ ಕಂಪನಿ ಹೇಳಿದೆ. ಶೋರೂಂಗೆ ಬರುವ ಗ್ರಾಹಕರು ತಮ್ಮ ನೆಚ್ಚಿನ ಪೋರ್ಷೆ ಕಾರನ್ನು ಆಯ್ಕೆ ಮಾಡಿಕೊಂಡು ಕಸ್ಟಮೈಸ್ ಮಾಡಬಹುದು. ಅಲ್ಲದೇ ಗ್ರಾಹಕರು ಆಯ್ಕೆ ಮಾಡಿದ ಕಸ್ಟಮೈಸ್ ಅನ್ವಯ ಕಾರನ್ನು ತಲುಪಿಸಲಾಗುತ್ತದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಗ್ರಾಹಕರಿಗಾಗಿ ಕಾಫಿ ಶಾಪ್ ಪರಿಸರವನ್ನು ರಚಿಸಲಾಗಿದೆ. ಅಲ್ಲಿ ಗ್ರಾಹಕರು ಕಾಫಿ ಕುಡಿಯುತ್ತಾ ಪ್ಯಾಕೇಜ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾರಿನಲ್ಲಿ ಮಾಡಲಾಗುವ ಬದಲಾವಣೆಗಳನ್ನು ತೋರಿಸಲು, ದೊಡ್ಡ ಟಿವಿ ಸ್ಕ್ರೀನ್ ಅಳವಡಿಸಲಾಗಿದೆ. ಈ ಸ್ಕ್ರೀನ್'ನಲ್ಲಿ ಕಾರನ್ನು ಹೊಸ ಉಪಕರಣ ಹಾಗೂ ಕಸ್ಟಮೈಸ್ ಮೂಲಕ ಪ್ರದರ್ಶಿಸಲಾಗುತ್ತದೆ. ಈ ಶೋರೂಂನಲ್ಲಿ ಪೋರ್ಷೆ ಕಂಪನಿಯ ಇತಿಹಾಸವನ್ನು ಗ್ರಾಹಕರನ್ನು ಪರಿಚಯಿಸಲು, ಕಂಪನಿಯು ಪೋರ್ಷೆ ಹೆರಿಟೇಜ್ ವಾಲ್ ಅನ್ನು ಸ್ಥಾಪಿಸಿದೆ. ಇದರಲ್ಲಿ ಕಂಪನಿಯ ಐಕಾನಿಕ್ ಕಾರುಗಳನ್ನು ಪ್ರದರ್ಶಿಸಲಾಗುತ್ತದೆ. ವಿಶ್ವಾದ್ಯಂತ ಇದೇ ರೀತಿಯ ಮೂರು ಪೋರ್ಷೆ ಶೋರೂಂಗಳಿವೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಇನ್ನು ಐಷಾರಾಮಿ ಕಾರು ತಯಾರಕ ಕಂಪನಿಯಾದ ಪೋರ್ಷೆ, ಸುಸ್ಥಿರ ಚಲನಶೀಲತೆಯ ಕಡೆಗೆ ತನ್ನ ಪ್ರಯತ್ನದ ಭಾಗವಾಗಿ ಹೆಚ್ಐಎಫ್ ಗ್ಲೋಬಲ್‌ನಲ್ಲಿ 75 ಮಿಲಿಯನ್ ಡಾಲರ್ (569 ಕೋಟಿ ರೂ.) ಹೂಡಿಕೆಯನ್ನು ಘೋಷಿಸಿದೆ. ಹೆಚ್ಐಎಫ್ ಗ್ಲೋಬಲ್ ಎಂಬುದು ಸುಸ್ಥಿರ ಇಂಧನ ಯೋಜನೆಗಳಿಗಾಗಿ ಅಂತರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಬೃಹತ್ ಸಂಸ್ಥೆಯಾಗಿದೆ. ಪೋರ್ಷೆ ಮತ್ತು ಎಚ್‌ಐಎಫ್ ಗ್ಲೋಬಲ್ ಒಟ್ಟಾಗಿ ಪೋರ್ಷೆ ಸ್ಪೋರ್ಟ್ಸ್ ಕಾರುಗಳಲ್ಲಿ ಮತ್ತು ಮೋಟಾರ್‌ಸ್ಪೋರ್ಟ್‌ನಲ್ಲಿ ಇ-ಫ್ಯುಯೆಲ್‌ ಅಭಿವೃದ್ಧಿ ಪಡಿಸುವ ನಿರೀಕ್ಷೆಯಿದೆ. ಪ್ರಪಂಚದಾದ್ಯಂತ ಸಾರ್ವಜನಿಕರಲ್ಲಿ ಹಸಿರು ಮತ್ತು ಹೆಚ್ಚು ಸಮರ್ಥನೀಯ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಪರಿಸರ ಸ್ನೇಹಿ ವಾಹನ ಬಳಕೆಯ ಪ್ರಜ್ಞೆಯು ಹುಟ್ಟಿಕೊಂಡಿದೆ.

ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಸೂಪರ್‌ಕಾರ್ ಖರೀದಿಸಿದ 'ಸ್ಪೈಡರ್ ಮ್ಯಾನ್' ಖ್ಯಾತಿಯ ನಟ ಟಾಮ್ ಹಾಲೆಂಡ್

ಈ ನಿಟ್ಟಿನಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ, ಬಹುತೇಕ ಎಲ್ಲಾ ಬ್ರ್ಯಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳು ಮಾತ್ರ ನಮಗೆ ಮುಂದಿನ ದಾರಿ ಎಂದು ಭಾವಿಸುತ್ತಿವೆ. ಈ ನಡುವೆ ಕೆಲವು ಬ್ರ್ಯಾಂಡ್‌ಗಳು ವಿದ್ಯುತ್‌ ಚಾಲಿತ ವಾಹನಗಳು ಮಾತ್ರ ನಮಗೆ ಆಯ್ಕೆಯಾಗಿಲ್ಲ, ಬದಲಾಗಿ ಸಮರ್ಥನೀಯ ಇಂಧನಗಳಳು ನಮಗೆ ಮತ್ತೊಂದು ಆಯ್ಕೆಯಾಗಲಿವೆ ಎಂದು ಹೇಳುತ್ತಿರುವ ಕಂಪನಿಗಳಲ್ಲಿ ಪೋರ್ಷೆ ಕೂಡ ಒಂದಾಗಿದೆ.

Most Read Articles

Kannada
English summary
Spider man famed actor tom holland buys new porsche tycan turbo s details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X