Sri Ram: ಎಂಜಿ ಹೆಕ್ಟರ್ ಕಾರಿನ ಮೇಲೆಲ್ಲಾ ಶ್ರೀರಾಮನ ಫೋಟೋ ಹಾಕಿಸಿ ಭಕ್ತಿ ಮೆರೆದ ವ್ಯಕ್ತಿ

ಪವಿತ್ರ ಪುಣ್ಯ ಕ್ಷೇತ್ರ ಅಯೋಧ್ಯೆ (Ayodhya)ಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಜನವರಿ 22 ರಂದು 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ದೇಶಾದ್ಯಂತ ಹಲವರು ತಮಗೆ ತೋಚಿದ ರೀತಿಯಲ್ಲಿ ಶ್ರೀರಾಮನ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಹುತೇಕರು ಬಸ್, ರೈಲು ಹಾಗೂ ವಿಮಾನಗಳ ಮೂಲಕ ಅಯೋಧ್ಯೆಗೆ ಭೇಟಿ ನೀಡಲು ಯೋಜಿಸುತ್ತಿದ್ದು, ಅಗತ್ಯ ತಯಾರಿಯನ್ನು ನಡೆಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮೂರಿನ ದೇಗುಲಗಳಲ್ಲಿಯೇ 'ರಾಮ ಲಲ್ಲಾ' ಪ್ರತಿಷ್ಠಾಪನೆಯನ್ನು ಸಂಭ್ರಮಿಸಲು ಸಿದ್ಧತೆಯನ್ನು ಮಾಡಿಕೊಳುತ್ತಿದ್ದಾರೆ. ವಿಶೇಷವೆಂಬಂತೆ ಸೂರತ್‌ನ ವ್ಯಕ್ತಿಯೊಬ್ಬರು ತಮ್ಮ ಎಂಜಿ ಹೆಕ್ಟರ್ (MG Hector) ಎಸ್‌ಯುವಿಯನ್ನು ಸಂಪೂರ್ಣವಾಗಿ ಶ್ರೀರಾಮನ ಚಿತ್ರಗಳಿಂದ ಅಲಂಕರಿಸಿದ್ದಾರೆ.

Sri Ram: ಎಂಜಿ ಹೆಕ್ಟರ್ ಕಾರಿನ ಮೇಲೆಲ್ಲಾ ಶ್ರೀರಾಮನ ಫೋಟೋ ಹಾಕಿಸಿ ಭಕ್ತಿ ಮೆರೆದ ವ್ಯಕ್ತಿ

ಈ ವಿಡಿಯೋವನ್ನು 'ರವಿ ಖರಾಡಿ' ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು, ಎಂಜಿ ಹೆಕ್ಟರ್ ಸನ್‌ರೂಫ್‌ನಿಂದ ಹೊರಬಂದು ಶ್ರೀರಾಮನ ಭಾವಚಿತ್ರವಿರುವ ಧ್ವಜವನ್ನು ಹಾರಿಸುತ್ತಿರುವುದನ್ನು ಕಾಣಬಹುದು. ಕಾರಿನ ಹೊರಭಾಗ ಸಂಪೂರ್ಣ ಕೇಸರಿಮಯವಾಗಿದ್ದು, ಅದರ ಮೇಲೆ ಶ್ರೀರಾಮನ ಫೋಟೋಗಳನ್ನು ಅಂಟಿಸಲಾಗಿದೆ. ಜೊತೆಗೆ ರಾಮ ಜನ್ಮಭೂಮಿ ಅಯೋಧ್ಯೆ ಮತ್ತು ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಹಿಂದಿಯಲ್ಲಿ ಬರೆಸಿರುವುದನ್ನು ನೋಡಬಹುದು.

ವಿವಿಧ ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ರವಿ ಖರಾಡಿ (Ravi Kharadi), 'ನಾನು ಶ್ರೀರಾಮ (Sri Ram)ನ ಪರಮ ಭಕ್ತನಾಗಿದ್ದನೆ. ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವುದು ನನಗೆ ತುಂಬಾ ಖುಷಿ ತಂದಿದೆ. ಕಾರಿನ ವಿನ್ಯಾಸವು ಹೆಚ್ಚು ತೃಪ್ತಿ ಕೊಟ್ಟಿದೆ. ಅದನ್ನು ರಾಮ ಜನ್ಮಭೂಮಿ ಅಯೋಧ್ಯೆಗೆ ತೆಗೆದುಕೊಂಡು ಹೋಗುತ್ತೇನೆ' ಎಂದು ಹೇಳಿದ್ದಾರೆ.

Sri Ram: ಎಂಜಿ ಹೆಕ್ಟರ್ ಕಾರಿನ ಮೇಲೆಲ್ಲಾ ಶ್ರೀರಾಮನ ಫೋಟೋ ಹಾಕಿಸಿ ಭಕ್ತಿ ಮೆರೆದ ವ್ಯಕ್ತಿ

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಂಜಿ ಹೆಕ್ಟರ್, ರೂ.15 ಲಕ್ಷದಿಂದ ರೂ.22 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.5 - ಲೀಟರ್ ಟರ್ಬೊ ಪೆಟ್ರೋಲ್, 2 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 6 - ಸ್ವೀಡ್ ಮ್ಯಾನುವಲ್, ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. 15.58 kmpl ಮೈಲೇಜ್ ನೀಡುತ್ತದೆ.

ಈ ಕಾರು, 6 ಅಥವಾ 7 ಆಸನ ಆಯ್ಕೆ ವ್ಯವಸ್ಥೆವನ್ನು ಹೊಂದಿದ್ದು, 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. 7- ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ಫೀಚರ್ಸ್ ಇವೆ.

ಅಯೋಧ್ಯೆ ವಿಚಾರಕ್ಕೆ ಬರವುದಾದರೆ, ಇಲ್ಲಿಗೆ ಹಲವು ರಾಜ್ಯಗಳಿಂದ ಯಾತ್ರಿಕರು ಆಗಮಿಸಲು ನೇರ ವಿಮಾನ ಹಾಗೂ ರೈಲು ಸಂಚಾರ ಪ್ರಾರಂಭವಾಗುತ್ತಿದೆ. ಕರ್ನಾಟಕದಿಂದ ಸಹ ಮುಂದಿನ ತಿಂಗಳು (ಫೆಬ್ರವರಿ) ಅಯೋಧ್ಯೆಗೆ 11 ವಿಶೇಷ ರೈಲುಗಳು ಸಂಚರಿಸುವ ಸಾಧ್ಯತೆಯಿದೆ. ಬೆಂಗಳೂರು ನಗರದಿಂದ 3 ರೈಲುಗಳು, ಹುಬ್ಬಳ್ಳಿಯಿಂದ 2, ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಬೆಳಗಾವಿಯಿಂದ ತಲಾ 1 ರೈಲು ಕಾರ್ಯಾಚರಣೆ ನಡೆಸುವ ನೀರಿಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 18, 2024, 16:35 [IST]
English summary
Sri ram photos print on mg hector car man showing his devotee
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+