ನಟಿ ಶ್ರೀದೇವಿಯಿಂದ ಪತಿಗೆ ಲಗ್ಷುರಿ ಪೋರ್ಷೆ ಕಯೀನ್ ಗಿಫ್ಟ್!

ಒಂದು ಕಾಲದಲ್ಲಿ ಬಾಲಿವುಡ್ ಜಗತ್ತಿನ ಮನೆಮಾತಾಗಿದ್ದ ಜನಪ್ರಿಯ ನಟಿ ಶ್ರೀದೇವಿ ಇತ್ತೀಚೆಗಷ್ಟೇ ಇಂಗ್ಲಿಂಷ್ ವಿಂಗ್ಲೀಷ್ ಚಿತ್ರದ ಮೂಲಕ ಮತ್ತೆ ಗಮನಸೆಳೆದಿದ್ದರು. ಇದೀಗ ಮತ್ತೆ ಸುದ್ದಿಯಲ್ಲಿರುವ ಸೆಲೆಬ್ರಿಟಿ ಶ್ರೀದೇವಿ ತಮ್ಮ ಪತಿ ಹಾಗೂ ಬಾಲಿವುಡ್ ನಿರ್ಮಾಪಕ ಆಗಿರುವ ಬೋನಿ ಕಪೂರ್ ಅವರಿಗೆ ಪ್ರೀಮಿಯಂ ಎಸ್‌ಯುವಿ ಪೋರ್ಷೆ ಕಯೀನ್ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಅಂದ ಹಾಗೆ ನಿಮ್ಮಿಂದ ಈ ದುಬಾರಿ ಡೀಸೆಲ್ ಕಾರಿನ ಬೆಲೆ ಎಷ್ಟು ಎಂಬುದನ್ನು ಅಂದಾಜಿಸಬಹುದೇ? ಹೋಗ್ಲಿ ಬಿಡಿ ನಾವೇ ಹೇಳ್ತೀವಿ. ಪೋರ್ಷೆ ಕಯೀನ್ ಎಕ್ಸ್ ಶೋ ರೂಂ ಬೆಲೆ ಬರೋಬ್ಬರಿ 65 ಲಕ್ಷ ರುಪಾಯಿಗಳು. ಅಲ್ಲದೆ ಪೋರ್ಷೆ ಕಯೀನ್ 100ನೇ ಕಾರನ್ನು ಶ್ರೀದೇವಿ ಖರೀದಿಸಿಕೊಂಡಿದ್ದಾರೆ. ಹಾಗಾದ್ರೆ ಬಣ್ಣಿ ನೋಡೋಣ ಪೋರ್ಷೆ ಕಯೀನ್ ಕಾರು ಜತೆ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಜಲಕ್!

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಬಾಲಿವುಡ್ ಜಗತ್ತಿನ ಹೆಸರಾಂತ ನಟಿ ಶ್ರೀದೇವಿ ತಮ್ಮ ಪತಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರಿಗೆ ಐಷಾರಾಮಿ ಪೋರ್ಷೆ ಕಯೀನ್ ಡೀಸೆಲ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

100ನೇ ಪೋರ್ಷೆ ಕಯೀನ್ ಕಾರನ್ನು ದೇಶದಲ್ಲೇ ಸೆಲೆಬ್ರಿಟಿ ನಟಿ ಶ್ರೀದೇವಿಗೆ ಹಸ್ತಾಂತರಿಸಲಾಗಿದೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ನೂತನ ಪೋರ್ಷೆ ಕಯೀನ್ ಖರೀದಿ ಸಂದರ್ಭದಲ್ಲಿ ಶ್ರೀದೇವಿ ತಮ್ಮ ಪತಿ ಜತೆಗೆ ತುಂಬಾನೇ ಹಸಮ್ಮುಖಿಯಾಗಿ ಕಂಡುಬಂದಿದ್ದರು.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಇಲ್ಲಿದೆ ನೋಡಿ ನಗುಮುಖದ ಶ್ರೀದೇವಿ ಜತೆ ಚಾಕೋಲೇಟ್ ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಪೋರ್ಷೆ ಕಯೀನ್ ಖರೀದಿಸಿದ ಬಳಿಕ ತಮ್ಮ ಅನುಭವವನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳಲು ಶ್ರೀದೇವಿ

ಮರೆಯಲಿಲ್ಲ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಪೋರ್ಷೆ ಕಯೀನ್ 3 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, 245 ಬಿಎಚ್‌ಪಿ ಪವರ್ ಹಾಗೂ 550 ಎನ್‌ಎಂ ಟರ್ಕ್ಯೂ ಉತ್ಪಾದಿಸುತ್ತಿದೆ. ಇಂಧನ ಉಳಿತಕ್ಕಾಗಿ ಸ್ಟಾಪ್ ಸ್ಟಾರ್ಟ್ ತಂತ್ರಜ್ಞಾನವನ್ನು ಕಾರಿಗೆ ಆಳವಡಿಸಲಾಗಿದೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ದುಬಾರಿ ಎಸ್‌ಯುವಿ ಆಗಿರುವ ಹೊರತಾಗಿಯೂ ಪೋರ್ಷೆ ಕಯೀನ್ ಪ್ರತಿ ಗಂಟೆಗೆ 220 ಕಿಲೋ ಮೀಟರ್ ಗರಿಷ್ಠ ವೇಗದಲ್ಲಿ ಚಲಿಸಲಿದೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಟಿಪ್‌ಟ್ರಾನಿಕ್ 8 ಸ್ಪೀಡ್ ಟ್ರಾನ್ಸ್‌ಮಿಷನ್ ಜತೆ ಡೀಸೆಲ್ ಎಂಜಿನ್ ಬಳಸಲಾಗಿದೆ. ಸ್ಟೀರಿಂಗ್ ಮೌಂಟೆಡ್ ಪ್ಯಾಡೆಲ್ ಬಳಸುವ ಮೂಲಕ ಗೇರ್ ಮ್ಯಾನುವಲ್ ಶಿಫ್ಟ್ ಮಾಡಬಹುದು.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಪೋರ್ಷೆ ಕಯೀನ್ ಗಾತ್ರ ಸ್ವಲ್ಪ ದೊಡ್ಡದಾಗಿದ್ದು, 4846 ಎಂಎಂ ಉದ್ದ, 1939 ಎಂಎಂ ಅಗಲ ಹಾಗೂ 1705 ಎಂಎಂ ಎತ್ತರವನ್ನು ಹೊಂದಿದೆ. ಕಯೀನ್ ವೀಲ್ ಬೇಸ್ 2895 ಎಂಎಂ ಆಗಿದ್ದರೆ ಭಾರ 2175 ಕಿಲೋ ಗ್ರಾಂ ಹೊಂದಿದೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಪೋರ್ಷೆ ಕಯೀನ್ ಇಂಟಿರಿಯರ್ ಭಾಗಗಳು ಸಹ ಗರಿಷ್ಠ ದರ್ಜೆಯದ್ದಾಗಿದೆ. ಹೊಂದಾಣಿಕೆಯ ಸೀಟ್‌ನಲ್ಲಿ ಡ್ರೈವ್ ಮಾಡಲು ಕುಳಿತುಕೊಂಡಾಗ ಚಾಲಕನಿಗೆ ಸ್ಫೋರ್ಟ್ ಕಾರಿನ ಅನುಭವವಾಗಲಿದೆ. ದೀರ್ಘ ಪ್ರಯಾಣಕ್ಕೂ ಪೋರ್ಷೆ ಕಯೀನ್ ಹೇಳಿ ಮಾಡಿಸಿದಂತಿದೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ದುಬಾರಿ ಎಸ್‌ಯುವಿ ಕಾರುಗಳಿಂದ ನಾವು ಹೆಚ್ಚಿನ ಮೈಲೇಜ್ ನಿರೀಕ್ಷಿಸುವಂತಿಲ್ಲ. ಹಾಗಿದ್ದರೂ ಪೋರ್ಷೆ ಕಯೀನ್ ಪ್ರತಿ ಲೀಟರ್‌ಗೆ 13 ಕಿಲೋ ಮೀಟರ್ ಇಂಧನ ಸಾಮರ್ಥ್ಯವನ್ನು ಒದಗಿಸಲಿದೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಪೋರ್ಷೆ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಬ್ರಾಂಡ್ ಕಯೀನ್ ಆಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಲಗ್ಷುರಿ ಪೋರ್ಷೆ ಕಯೀನ್ ಕಾರು ಐದು ವೆರಿಯಂಟ್‌ಗಳಲ್ಲಿ ಲಭ್ಯವಿದ್ದು, ಈ ಪೈಕಿ ನಾಲ್ಕು ಪೆಟ್ರೋಲ್ ಎಂಜಿನ್‌ಗಳಿಂದ ನಿಯಂತ್ರಿಸಲ್ಪಡಲಿದೆ. ಪೋರ್ಷೆ ಕಯೀನ್ ಅಗ್ಗದ ಡೀಸೆಲ್ ಮಾದರಿಗೆ ರು. 65 ಲಕ್ಷ ಇದ್ದು, ಅತಿ ದುಬಾರಿ ಟರ್ಬೊ ಮಾದರಿಗೆ 1.28 ಕೋಟಿ ರುಪಾಯಿಗಳಿವೆ.

ಪೋರ್ಷೆ ಕಯೀನ್

ಪೋರ್ಷೆ ಕಯೀನ್

ಇಲ್ಲಿದೆ ನೋಡಿ ಪೋರ್ಷೆ ಕಯೀನ್ ಕಾರಿನಲ್ಲಿ ಶ್ರೀದೇವಿ ಜಲಕ್

More from DriveSpark

Article Published On: Friday, November 9, 2012, 14:48 [IST]
English summary
Bollywood actress Sridevi is celebrating the success of her latest film English Vinglish's success by splurging on a premium SUV. She has gifted her husband and Bollywood producer Boney Kapoor a brand new Porsche Cayenne.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+