ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಪತ್ತೆಯಾದ ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದು, ಇದುವರೆಗೂ ಲಕ್ಷಾಂತರ ಜನರ ಜೀವ ತೆಗೆದಿದೆ. ಕರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಭಾರತದಲ್ಲಿ ಇದುವರೆಗೂ 35 ಸಾವಿರಕ್ಕೂ ಹೆಚ್ಚು ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. 1,152 ಜನರು ಈ ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಸೋಂಕಿತರ ಜನರ ಸಂಖ್ಯೆ ಹೆಚ್ಕುತ್ತಿರುವುದರಿಂದ ನಿನ್ನೆ ಮುಕ್ತಾಯವಾಗಬೇಕಿದ್ದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ವೈರಸ್ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಎಲ್ಲಾ ದೇಶಗಳಲ್ಲಿಯೂ ತನ್ನ ರುದ್ರ ನರ್ತನವನ್ನು ತೋರಿಸುತ್ತಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಅಮೆರಿಕಾದಲ್ಲಿ ಕರೋನಾ ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ 50,000ದ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕರೋನಾ ವೈರಸ್ ಹಾವಳಿಯ ನಡುವೆಯೂ ಉತ್ತರ ಕರೊಲಿನಾ ರಾಜ್ಯದ ಕೆಲವು ಶೋರೂಂಗಳಿಂದ ಸುಮಾರು 50 ಕಾರುಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಅಮೆರಿಕಾದ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಅನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿಲ್ಲ. ಕೆಲವು ಅಗತ್ಯವಿರುವ ಅಂಗಡಿಗಳನ್ನು ಹೊರತುಪಡಿಸಿ ಶಾಪಿಂಗ್ ಮಾಲ್, ಥಿಯೇಟರ್ ಹಾಗೂ ಕಾರು ಶೋರೂಂಗಳನ್ನು ಮುಚ್ಚಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಈ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವ ಸಮಾಜ ವಿರೋಧಿಗಳು ಕಳ್ಳತನದಂತಹ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ಉತ್ತರ ಕರೊಲಿನಾ ರಾಜ್ಯ ಪೊಲೀಸರ ಪ್ರಕಾರ ಮಾರ್ಚ್ 17ರಿಂದ 46 ಕಾರುಗಳನ್ನು ಕಳವು ಮಾಡಲಾಗಿದೆ.

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಈ ಕಾರುಗಳ ಒಟ್ಟು ಮೌಲ್ಯ ಸುಮಾರು 1 1.1 ಮಿಲಿಯನ್ ಡಾಲರ್‌ಗಳಾಗಿದೆ. ಭಾರತೀಯ ಮೌಲ್ಯದಲ್ಲಿ 8 ಕೋಟಿ 34 ಲಕ್ಷದ 14 ಸಾವಿರ ರೂಪಾಯಿಗಳಾಗುತ್ತದೆ. ಆಡಿ, ಷೆವರ್ಲೆ, ಫೋರ್ಡ್, ಹೋಂಡಾ, ಲೆಕ್ಸಸ್, ಸುಬಾರು, ಟೊಯೋಟಾ ಹಾಗೂ ವೋಲ್ವೋ ಸೇರಿದಂತೆ 13 ಕಂಪನಿಗಳ ಶೋರೂಂಗಳಲ್ಲಿ ಕಳವು ಮಾಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಪೊಲೀಸರ ಪ್ರಕಾರ, ಈ ಕಾರುಗಳನ್ನು ಕದ್ದವರು ಸಾಮಾನ್ಯ ಕಾರು ಕಳ್ಳರಲ್ಲ. ಪೋಷಕರು ಕಾರುಗಳನ್ನು ಚಾಲನೆ ಮಾಡಲು ನೀಡದ ಕಾರಣಕ್ಕೆ ಕಾರುಗಳ್ಳತನಕ್ಕೆ ಇಳಿದವರು. ಇವರಲ್ಲಿ 19 ಜನರನ್ನು ಗುರುತಿಸಲಾಗಿದೆ. ಆದರೆ ಇವರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಅವರೆಲ್ಲಾ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಕದ್ದ 46 ಕಾರುಗಳ ಪೈಕಿ 40 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಅಪರಾಧದಲ್ಲಿ ಭಾಗಿಯಾಗಿದ್ದ 19 ವರ್ಷದ ಯುವಕನನ್ನು ಮಾತ್ರ ಬಂಧಿಸಲಾಗಿದೆ. ಈ ಕದ್ದ ಕಾರುಗಳಿಂದ ಅಪಘಾತವಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಇದರಿಂದ ಈ ಕಾರುಗಳನ್ನು ಕದ್ದವರು ಕಾರು ಚಾಲನೆಯಲ್ಲಿ ಅನುಭವ ಹೊಂದಿರುವುದನ್ನು ಕಾಣಬಹುದು. ಉತ್ತರ ಕರೊಲಿನಾ ಪೊಲೀಸರು ಹೆಚ್ಚಿನ ಕಾರು ಕಳ್ಳರನ್ನು ಪತ್ತೆ ಹಚ್ಚಲು ಪತ್ತೆದಾರರ ನೆರವನ್ನು ಕೋರಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಗದ ಕಾರಣ ಕಳುವಾಗಿರುವ ಕಾರುಗಳ ಮೇಲ್ವಿಚಾರಣೆ ಮಾಡಲು ಯೋಜಿಸಲಾಗಿದೆ.

ಕಾರು ನೀಡಲು ಪೋಷಕರ ನಕಾರ, ಕಾರು ಕಳ್ಳತನಕ್ಕಿಳಿದ ಬಾಲಕರು..!

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ ಪಾರ್ಕಿಂಗ್ ಮಾಡಲಾಗುವ ಕಾರುಗಳನ್ನು ರಕ್ಷಿಸುವಂತೆ ಡೀಲರ್‌ಗಳಿಗೆ ಸೂಚಿಸಲಾಗಿದೆ. ಕರೋನಾ ವೈರಸ್‌ನ ಈ ಸಂದರ್ಭವನ್ನು ಕಳ್ಳರು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ.

Most Read Articles

Kannada
English summary
Boys steal 46 cars worth over 8 crores. Read in Kannada.
Story first published: Monday, May 4, 2020, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X