ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ತಾವು ಬುಕ್ಕಿಂಗ್ ಮಾಡಿರುವ ಹೊಸ ಬೈಕುಗಳ ವಿತರಣೆಯನ್ನು ತೆಗೆದುಕೊಳ್ಳುವಾಗ ಆಗುವ ಸಂತೋಷವನ್ನು ಹೇಳಲಾಸಾಧ್ಯ. ಆ ಬೈಕ್ ದುಬಾರಿ ಬೆಲೆಯ ಟೂರರ್ ಬೈಕ್ ಆದರಂತೂ ಅದರ ಖುಷಿ ದುಪ್ಪಟ್ಟಾಗುತ್ತದೆ. ಕೆಲವೊಮ್ಮೆ ಇದೇ ಖುಷಿಯೇ ಎಡವಟ್ಟುಗಳಿಗೆ ದಾರಿ ಮಾಡಿಕೊಡುತ್ತದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಇತ್ತೀಚೆಗೆ ವ್ಯಕ್ತಿಯೊಬ್ಬ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕಿನ ವಿತರಣೆಯನ್ನು ತೆಗೆದುಕೊಳ್ಳುವಾಗ ಎಡವಟ್ಟು ಮಾಡಿಕೊಂಡಿದ್ದಾನೆ. ಆದರೆ ಬೈಕಿಗಾಗಲೀ, ಆತನಿಗಾಗಲಿ ಯಾವುದೇ ತೊಂದರೆಯಾಗಿಲ್ಲವೆಂಬುದೇ ಸಮಾಧಾನದ ಸಂಗತಿ. ಹೊಸ ಹೋಂಡಾ ಆಫ್ರಿಕಾ ಟ್ವಿನ್ ಅಪಘಾತದ ಸುಳಿಗೆ ಸಿಲುಕಿದರೂ ಸ್ವಲ್ಪದರಲ್ಲೇ ಪಾರಾಗಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಹೊಸ ಹೋಂಡಾ ಆಫ್ರಿಕಾ ಟ್ವಿನ್ ಟೂರರ್ ಬೈಕ್ ಅನ್ನು ಶೋರೂಂನಿಂದ ಹೊರತೆಗೆಯುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಬೈಕಿನ ಮುಂಭಾಗದಲ್ಲಿರುವ ಫೋರ್ಕ್ ಅನ್ನು ಮೃದುವಾಗಿಸಿರುವ ಸಾಧ್ಯತೆಗಳಿವೆ. ಈ ಕಾರಣದಿಂದಾಗಿ ಮುಂಭಾಗದ ಸಸ್ಪೆಂಷನ್ ಸ್ವಲ್ಪ ಕಡಿಮೆಯಾಗಿದ್ದು, ಗ್ರೌಂಡ್ ಕ್ಲಿಯರೆನ್ಸ್ ಸಹ ಕಡಿಮೆಯಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಇದರಿಂದಾಗಿ ಬೈಕ್‌ನ ಬ್ಯಾಷ್ ಪ್ಲೇಟ್ ಮೆಟ್ಟಿಲಿಗೆ ಗುದ್ದಿದೆ. ಹೋಂಡಾದ ಗುಣಮಟ್ಟ ಅದ್ಭುತವಾಗಿರುವ ಕಾರಣಕ್ಕೆ ಮೆಟ್ಟಿಲು ಕಿತ್ತುಕೊಂಡು ಬಂದಿದೆ. ಈ ಸಣ್ಣ ದುರಂತದಲ್ಲಿ ಬೈಕಿಗಾಗಲಿ ಅಥವಾ ಸವಾರನಿಗಾಗಲಿ ಯಾವುದೇ ಹಾನಿಯಾಗಿಲ್ಲ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಹೊಸ ಹೋಂಡಾ ಆಫ್ರಿಕಾ ಟ್ವಿನ್ ಟೂರರ್ ಬೈಕ್ ಆಗಿದೆ. ಈ ಬೈಕ್ ಮೆಟ್ಟಿಲುಗಳ ಮೇಲೆಯೂ ಸರಾಗವಾಗಿ ಚಲಿಸುತ್ತದೆ. ಆದರೆ ಬೈಕಿನಲ್ಲಿರುವ ಸಸ್ಪೆಂಷನ್ ಅನ್ನು ಸರಿಯಾಗಿ ಅಡ್ಜಸ್ಟ್ ಮಾಡಿಕೊಳ್ಳಬೇಕು. ಬೈಕಿನ ವಿತರಣೆಯನ್ನು ಪಡೆಯುವ ಮುನ್ನ ಪರೀಕ್ಷಿಸಿ, ಸರಿಪಡಿಸಿಕೊಳ್ಳುವುದು ಒಳ್ಳೆಯದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

2020ರ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕಿನ ಎಂಜಿನ್ ನಲ್ಲಿ ಭಾರೀ ಬದಲಾವಣೆಯನ್ನು ಮಾಡಲಾಗಿದೆ. ಹೋಂಡಾ ಕಂಪನಿಯು ಈ ಬೈಕಿನಲ್ಲಿ 1,084 ಸಿಸಿಯ ಬಿಎಸ್ 6 ಎಂಜಿನ್ ಅಳವಡಿಸಿದೆ. ಈ ಎಂಜಿನ್ 100 ಬಿಹೆಚ್‌ಪಿ ಪವರ್ ಹಾಗೂ 105 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಬೈಕ್ 6-ಸ್ಪೀಡಿನ ಮ್ಯಾನುವಲ್ ಹಾಗೂ 6-ಸ್ಪೀಡಿನ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ (ಡಿಸಿಟಿ) ಗೇರ್ ಬಾಕ್ಸ್ ಹೊಂದಿದೆ. ಹ್ಯಾಂಡ್ಲಿಂಗ್ ಅನ್ನು ಸುಲಭವಾಗಿಸಲು ಈ ಬೈಕಿನಲ್ಲಿರುವ ಫ್ರೇಮ್ ಅನ್ನು ಅಪ್ ಡೇಟ್ ಗೊಳಿಸಲಾಗಿದೆ. ಇದರಿಂದಾಗಿ ಬೈಕಿನ ತೂಕವು 3 ಕೆ.ಜಿಯಷ್ಟು ಕಡಿಮೆಯಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

2020ರ ಹೊಸ ಹೋಂಡಾ ಆಫ್ರಿಕಾ ಟ್ವಿನ್‌ ಬೈಕಿನಲ್ಲಿ ಕ್ರೂಸ್ ಕಂಟ್ರೋಲ್, ಟ್ಯೂಬ್‌ಲೆಸ್ ವ್ಹೀಲ್, ಚಾರ್ಜಿಂಗ್ ಸಾಕೆಟ್, ದೊಡ್ಡ ಸ್ಕಿಡ್ ಪ್ಲೇಟ್, ಅಲ್ಯೂಮಿನಿಯಂ ರಾಕ್ ಹಾಗೂ ದೊಡ್ಡ ಗಾತ್ರದ ಫ್ಯೂಯಲ್ ಟ್ಯಾಂಕ್ ನೀಡಲಾಗಿದೆ. ಹೊಸದಾಗಿ ಆಫ್-ರೋಡ್ ರೈಡಿಂಗ್ ಮೋಡ್ ಅನ್ನು ಸಹ ಸೇರಿಸಲಾಗಿದೆ.

ಚಿತ್ರಕೃಪೆ : ರೇಡಿಯಂಟ್ ಕ್ಲಿಕ್ಸ್ ಲೈಫ್‌ಸ್ಟೈಲ್

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಇನ್ನು 2020ರ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ, ಟ್ರಯಂಫ್ ಟೈಗರ್ ಮತ್ತು ಬಿಎಂಡಬ್ಲ್ಯು ಜಿಎಸ್ 1250 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 15.35 ಲಕ್ಷ ಬೆಲೆ ಹೊಂದಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಬಿಎಸ್-4 ಮಾದರಿಗಿಂತಲೂ ಹೆಚ್ಚು ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿರುವ ಬಿಎಸ್-6 ಮಾದರಿಯು ಹೊಸ ಎಂಜಿನ್‍ನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು ಡಿಸಿ‍ಟಿ ಗೇರ್‍‍ಬಾಕ್ಸ್ ಜೋಡಣೆ ಮಾಡಲಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

2020ರ ಆಫ್ರಿಕಾ ಟ್ವಿನ್ ಬೈಕ್ ಮಾದರಿಯು ಮುಂಭಾಗದಲ್ಲಿ ಶೋವಾ 45 ಎಂಎಂ ಕಾರ್ಟ್ರಿಡ್ಜ್ ಮಾದರಿಯ ಇನ್ವರ್ಡಡ್ ಟಿಲಿಸ್ಕೋಪಿಕ್ ಫೋರ್ಕ್‍‍ಗಳು ಮತ್ತು ಪ್ರೊ-ಲಿಂಕ್‍‍ನೊಂದಿಗೆ ಮೊನೊಬ್ಲಾಕ್ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಹಿಂಭಾಗದಲ್ಲಿ ಶೋವಾ ಗ್ಯಾಸ್-ಚಾರ್ಜ್ಡ್ ಡ್ಯಾಂಪರ್ ಅನ್ನು ಒಳಗೊಂಡಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಹೊಸ ಬೈಕ್ ಫ್ರೆಮ್ ಸಹ ನವೀಕರಿಸಲಾಗಿದ್ದು, ಆಫ್ರಿಕಾ ಟ್ವಿನ್‌ನಲ್ಲಿ ಕಾರ್ನರಿಂಗ್ ಎಬಿ‍ಎಸ್, ರಿಯರ್ ಲಿಫ್ಟ್ ಕಂಟ್ರೋಲ್ ಹೊಂದಿದೆ. ಜೊತೆಗೆ ಅಡ್ವೆಂಚರ್ ಸ್ಪೋರ್ಟ್ ಇಎಸ್ ಮಾದರಿಯು ಎಲೆಕ್ಟ್ರಾನಿಕ್ ಸಸ್ಪೆಂಷನ್ ಅನ್ನು ಹೊಂದಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಹೊಸ ಆಫ್ರಿಕಾ ಟ್ವಿನ್ ಪ್ರಮುಖ ಫೀಚರ್ಸ್ ಅಂದರೆ ಹೊಸ 6 ಇಂಚಿನ ಟಿ‍ಎಫ್‍‍ಟಿ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇ ಅನ್ನು ಹೊಂದಿದ್ದು, ಇದರೊಂದಿಗೆ ಆ್ಯಪಲ್ ಕಾರ್‍‍ಪ್ಲೇ ಅನ್ನು ಅಳವಡಿಸಲಾಗಿದೆ. ಹೊಸ ಬೈಕ್ ಆರು ಎಕ್ಸಸ್ ಐಎಂಯು ಮತ್ತು ಬ್ಲೂಟತ್ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಎಡವಟ್ಟು ಮಾಡಿಕೊಂಡ ಬೈಕ್ ಸವಾರ

ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಈ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಹೈಡ್ರಾಲಿಕ್ ಡಿಸ್ಕ್ ಗಳು ಮತ್ತು ಹಿಂಭಾಗದಲ್ಲಿ 256 ಎಂಎಂ ಹೈಡ್ರಾಲಿಕ್ ಡಿಸ್ಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಆನ್ ರೋಡ್ ಮತ್ತು ಆಫ್-ರೋಡ್ ಗಳಲ್ಲಿ ಎಬಿಎಸ್ ಮೋಡ್ ಅನ್ನು ಸಹ ಹೊಂದಿರುತ್ತದೆ.

Most Read Articles

Kannada
English summary
Steps uprooted during new Honda Africa twin bike delivery. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X