ನೀವು ಜೀವ ರಕ್ಷಕ 'ಸೀಟ್ ಬೆಲ್ಟ್' ಏಕೆ ಧರಿಸಬೇಕು?
ನಿಮ್ಮಲ್ಲಿ ಹಲವರು ಯೋಚಿಸುತ್ತಿರಬಹುದು, ಸೀಟು ಬೆಲ್ಟ್ ಧರಿಸುವುದಾದರೂ ಏಕೆ? ಹೀಗೆ ಮಾಡುವುದರಿಂದ ಪ್ರಯೋಜನವಾದರೂ ಏನು? ಸೀಟ್ ಬೆಲ್ಟ್ ಧರಿಸದಿದ್ದರೂ ಪರವಾಗಿಲ್ಲ ಬಿಡಿ ಆರಾಮವಾಗಿ ಗಾಡಿ ಓಡಿಸಬಹುದು ಹೀಗೆ ಹತ್ತು ಹಲವಾರು ಚಿಂತನೆ ಮೂಡಬಹುದು.
ಹೌದು ನಿಜ, ಸೀಟ್ ಬೆಲ್ಟ್ ಇಲ್ಲದಿದ್ದರೂ ಗಾಡಿ ಚೆನ್ನಾಗಿಯೇ ಓಡಿಸಬಹುದು. ಆದರೆ ಅಪಘಾತ ಸಂದರ್ಭದವನ್ನೊಮ್ಮೆ ಯೋಚಿಸಿ ನೋಡಿ? ಕಿರಿಕಿರಿಯನ್ನುಂಟು ಮಾಡುತ್ತಿದೆಯೆಂಬ ಏಕ ಕಾರಣಕ್ಕಾಗಿ ನೀವು ಸೀಟ್ ಬೆಲ್ಟ್ ಧರಿಸಿಲ್ಲವೇ? ಅದರ ಭವಿಷ್ಯತ್ ಫಲ ನೀವೇ ತೆರಬೇಕಾಗಿತು ಎಚ್ಚರ!
ಕೆಳಗಡೆ ಕೊಟ್ಟಿರುವ ಇಂದಿನ ಫೇಸ್‌ಬುಕ್ ವೀಡಿಯೋ ಲೇಖನವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಸಿಗಲಿದೆ. ಸೀಟು ಬೆಲ್ಟ್ ಧರಿಸುವುದರಿಂದ ಅಪಘಾತದ ವೇಳೆ ನಿಮ್ಮ ಮೇಲೆ ಪೆಟ್ಟಾಗುವ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂಬುದನ್ನು ಸಂಶೋಧನೆಗಳೇ ತಿಳಿಸಿವೆ. ಈ ಮೂಲಕ ಸೀಟು ಬೆಲ್ಟ್‌ಗಳು ನಿಜಕ್ಕೂ ಜೀವ ರಕ್ಷಕ ಎನಿಸಿಕೊಂಡಿವೆ. ಹಾಗಿದ್ದರೆ ಇನ್ಯಾಕೆ ತಡ ನೇರ ವೀಡಿಯೋದತ್ತ ಮುಂದುವರಿಯಿರಿ. ಹ್ಯಾಪಿ ಡ್ರೈವಿಂಗ್!
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








