ಹಗಲೆಲ್ಲ ಭೀಕ್ಷೆ ಯಾಚಿಸಿ ಆಡಿ ಕಾರಲ್ಲಿ ಮನೆಗೆ ಹಿಂತಿರುಗುವ ಭಿಕ್ಷುಕ
ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯ ಭೀಕ್ಷಕರನ್ನು ಕಂಡಿರುತ್ತೇವೆ. ಒಂದು ತುತ್ತಿನ ಅನ್ನಕ್ಕಾಗಿ ಬೇರೆ ಗತಿಯಿಲ್ಲದೆ ಭೀಕ್ಷೆ ಬೇಡುವ ದಯನೀಯ ಪರಿಸ್ಥಿತಿ ಎದುರಾಗುತ್ತಿದೆ. ಹಾಗಿರುವಾಗ ಭೀಕ್ಷೆ ಯಾಚನೆಯನ್ನೇ ತಮ್ಮ ವೃತ್ತಿಯಾಗಿ ಸ್ವೀಕರಿಸಿದರೆ ಹೇಗಿರಬಹುದು?
ಇಂತಹದೊಂದು ನೈಜ ಘಟನೆಯನ್ನು ನಾವಿಂದು ಹೇಳಲಿದ್ದೇವೆ. ಜರ್ಮನಿಯಲ್ಲಿ ಭೀಕ್ಷೆಯಾಚನೆಯನ್ನು ವೃತ್ತಿಯಾಗಿ ಸ್ವೀಕರಿಸಿರುವ ಮ್ಯಾಥ್ಯೂ ಬ್ರಿಂಟನ್ ಬಳಿಕ ಆಡಿ ಕಾರಲ್ಲಿ ಮನೆಗೆ ಹಿಂತಿರುತ್ತಾರೆ.

ಇದರವರ ಐಷಾರಾಮಿ ಶೋಕಿ ಜೀವನದ ಹಿಂದಿರುವ ಕಥೆ. ಎಂದಿನ ಭಿಕ್ಷೆಯಾಚನೆಯ ಬಳಿಕ ಸಂಜೆಯ ವೇಳೆಗೆ ತಮ್ಮ ಸಾಕುಪ್ರಾಣಿಯೊಂದಿಗೆ ಕೋಟಿ ಬೆಲೆ ಬಾಳುವ ಆಡಿ ಟಿಟಿ ಕಾರಲ್ಲಿ ಹಿಂತಿರುತ್ತಾರೆ.

ಹಾಗೆ ಒಂದು ದಿನ ಭಿಕ್ಷೆಯಾಚಿಸಿ ಮನೆಗೆ ಹಿಂತಿರುಗುವ ದೃಶ್ಯಗಳನ್ನು ವಿಡಿಯೋದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಲಾಗಿತ್ತು. ಇದವರ ಜೀವನ ಚರಿತ್ರೆಯನ್ನೇ ಬದಲಾಯಿಸಿತ್ತು.

ಮೊದಲೆಲ್ಲ ಪಾಪ ಬಡವನೆಂದು ಧನ ಸಹಾಯ ಮಾಡುತ್ತಿದ್ದವರು ಈ ವಿಚಾರವನ್ನು ಅರಿತು ಆಕ್ರೋಶಭರಿತರಾದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಅಪ್ ಲೋಡ್ ಆದ ಬೆನ್ನಲ್ಲೇ ಭಾರಿ ಟೀಕೆಗಳು ವ್ಯಕ್ತವಾದವು.

ಕುಪಿತಗೊಂಡ ಜನರಿಂದ ಬ್ರಿಂಟನ್‌ಗೆ ಜೀವ ಬೆದರಿಕೆಯೂ ಎದುರಾಯಿತು. ಈ ನಡುವೆ ಬ್ರಿಂಟನ್ ಕಾರು ಕಳವಾದ ಪ್ರಕರಣವೂ ಎದುರಾಯಿತು.

ಸ್ಥಳೀಯ ಪೊಲೀಸ್ ಅಧಿಕಾರಿಗಳು ಇದನ್ನು ದೃಢೀಕರಿಸಿದ್ದು, ಬ್ರಿಂಟನ್‌ಗೆ ಜೀವ ಬೆದರಿಕೆ ಎದುರಾಗುತ್ತಿದೆ ಎಂದು ವಿವರಿಸಿದ್ದಾರೆ.

ಒಟ್ಟಾರೆಯಾಗಿ ಭಿಕ್ಷೆಯನ್ನು ವೃತ್ತಿಯಾಗಿ ಸ್ವೀಕರಿಸಿರುವುದೇ ಈತ ಮಾಡಿರುವ ಮಹಾ ಅಪರಾಧವಾಗಿ ಮಾರ್ಪಟ್ಟಿದೆ.


Click it and Unblock the Notifications