ಪೊಲೀಸ್ ಅಧಿಕಾರಿಯಿಂದ ಪರೀಕ್ಷೆ ತಪ್ಪಿದ ವಿದ್ಯಾರ್ಥಿನಿ: ಕಿಡಿಕಾರಿದ ವಿಡಿಯೋ ಫುಲ್ ವೈರಲ್!
ರಾಜಕಾರಣಿಗಳು, ಸಚಿವರು ಅಥವಾ ಇತರ ವಿವಿಐಪಿಗಳು ತಮ್ಮ ಬೆಂಗಾವಲು ಪಡೆಯೊಂದಿಗೆ ರಸ್ತೆಯಲ್ಲಿ ಸಂಚರಿಸಲು ಸಾಮಾನ್ಯ ಜನರ ಸಂಚಾರವನ್ನು ನಿಲ್ಲಿಸಲಾಗುತ್ತದೆ. ಭಾರತದಲ್ಲಿ ಈ ವಿಐಪಿ ಸಂಸ್ಕೃತಿ ಸಾಮಾನ್ಯ ಜನರಿಗೆ ಕಿರಿಕಿಯಾಗುತ್ತದೆ, ಕೆಲವೊಮ್ಮೆ ಇತರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇತ್ತೀಚೆಗೆ ಸಾಮಾನ್ಯ ಪ್ರಯಾಣಿಕರ ಸಂಚಾರವನ್ನು ನಿಲ್ಲಿಸಿದ ಕಾರಣ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆಗೆ ಗೈರಾಗಿದ್ದಾರೆ. ಇದನ್ನು ಪ್ರಶ್ನಿಸಿ ಆ ವಿದ್ಯಾರ್ಥಿನಿ ಅಲ್ಲಿದ್ದ ಪೊಲೀಸರ ಮೇಲೆ ಕಿಡಿಕಾರಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸರು ಆಟೋವನ್ನು ನಿಲ್ಲಿಸಿದ್ದರಿಂದ ವಿದ್ಯಾರ್ಥಿನಿ ಪರೀಕ್ಷೆಯನ್ನು ತಪ್ಪಿಸಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಪರೀಕ್ಷೆಯನ್ನು ತಪ್ಪಿಸಿಕೊಂಡ ವಿದ್ಯಾರ್ಥಿನಿ ಸಂಪೂರ್ಣ ಘಟನೆಯನ್ನು ರೆಕಾರ್ಡ್ ಮಾಡಿ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದು, ತನ್ನ ಪರೀಕ್ಷೆಗೆ ತಡವಾಗಿದ್ದರಿಂದ ತನ್ನ ವಾಹನವನ್ನು ಬಿಡುವಂತೆ ಅಧಿಕಾರಿಯನ್ನು ವಿನಂತಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಆದರೆ, ಫೋನ್‌ನಲ್ಲಿ ಮಾತನಾಡುತ್ತಿದ್ದ ಪೊಲೀಸ್ ಅಧಿಕಾರಿ ಆಕೆಯ ಮನವಿಯನ್ನು ನಿರಾಕರಿಸಿದ್ದರು. ಸಂಚಾರವನ್ನು ನಿರ್ಬಂಧಿಸಲು ತನಗೆ ಆದೇಶಗಳಿವೆ, ಅನುಮತಿ ಪಡೆಯುವವರೆಗೆ ಯಾವುದೇ ವಾಹನಗಳನ್ನು ಹಾದುಹೋಗಲು ಬಿಡುವುದಿಲ್ಲ. ಬದಲಾಗಿ ಆಕೆ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾವನ್ನು ಬಿಟ್ಟು, ಇನ್ನೊಂದು ಬದಿಗೆ ನಡೆದುಹೋಗಿ ಮತ್ತೊಂದು ವಾಹನವನ್ನು ಹುಡುಕುವಂತೆ ಹೇಳಿದ್ದಾರೆ.
ಎಲ್ಲಾ ರಸ್ತೆಗಳನ್ನು ಬ್ಲಾಕ್ ಮಾಡಿದ್ದರಿಂದ ಆ ರಸ್ತೆಯಲ್ಲಿ ಆಟೋಗಳು ಸಂಚರಿಸುತ್ತಿರಲಿಲ್ಲ. ನನಗೆ ಮತ್ತೊಂದು ದಾರಿಯಿಲ್ಲ ಎಂದು ಕೇಳಿಕೊಂಡರು ಪ್ರಯೋಜನವಾಗಲಿಲ್ಲ. ವಿಐಪಿ ವಾಹನಗಳು ಹಾದುಹೋಗುವವರೆಗು ವಿದ್ಯಾರ್ಥಿನಿಗೆ ಕಾಯುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ವಿವಿಐಪಿ ಬೆಂಗಾವಲು ಹಾದುಹೋಗುವ ಮೊದಲು ಅವರು ಸುಮಾರು 30 ನಿಮಿಷಗಳ ಕಾಲ ಕಾಯಬೇಕಾಯಿತು.

ಪೊಲೀಸ್ ಅಧಿಕಾರಿ ವಿವೇಚನೆಯನ್ನು ಬಳಸಬಹುದಿತ್ತು. ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಬದಲು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಿದೆ. ಪೊಲೀಸ್ ಅಧಿಕಾರಿಯು ವಿದ್ಯಾರ್ಥಿನಿಗೆ ಉತ್ತೀರ್ಣರಾಗಲು ಅವಕಾಶ ನೀಡಿದ್ದರೆ, ಆಕೆ ತನ್ನ ಪರೀಕ್ಷೆಯನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಲ್ಲದೇ ಮುಂದೊಂದು ದಿನ ಆಕೆ ಗರ್ವವಾಗಿ ಪೊಲೀಸರ ಬಗ್ಗೆ ಹೇಳಿಕೊಳ್ಳುತ್ತಿದ್ದರು.
ವಾಸ್ತವವಾಗಿ ನಮ್ಮ ದೇಶದಲ್ಲಿ ವಿಐಪಿ ಸಂಸ್ಕೃತಿ ಗಂಭೀರ ವಿಷಯವಾಗಿದೆ. ಈ ಸಂಸ್ಕೃತಿಯು ರಾಜಕಾರಣಿಗಳಿಗೆ ಅವರ ಭದ್ರತಾ ಪ್ರೋಟೋಕಾಲ್‌ನ ಭಾಗವಾಗಿದ್ದರೂ, ಸಾಮಾನ್ಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಈ ಹಿಂದೆ ಸಚಿವರು ಅಥವಾ ರಾಜಕಾರಣಿ ಹಾದುಹೋಗಲು ಆಂಬ್ಯುಲೆನ್ಸ್ ಗಳನ್ನು ಸಹ ಬಲವಂತವಾಗಿ ನಿಲ್ಲಿಸಿದ ಪ್ರಕರಣಗಳು ಕೂಡ ಇವೆ.
ರಾಜಕಾರಣಿಗಳ ಬೆಂಗಾವಲು ವಾಹನಗಳನ್ನು ಹೆಚ್ಚಿನ ವೇಗದಲ್ಲಿ ಓಡಿಸಲಾಗುತ್ತದೆ, ಇದು ಸಂಚಾರವನ್ನು ನಿರ್ಬಂಧಿಸಲು ಮತ್ತೊಂದು ಕಾರಣವಾಗಿದೆ. ಭದ್ರತಾ ವಾಹನವು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳು ಹೆಚ್ಚು. ಅಂತಹ ಅಪಘಾತಗಳನ್ನು ತಡೆಗಟ್ಟಲು, ಸಂಚಾರವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗುತ್ತದೆ. ಆದರೂ, ಇದು ಸಾಮಾನ್ಯ ಜನರನ್ನು ತೊಂದರೆಗೀಡುಮಾಡುವುದು ಕೂಡ ಅಷ್ಟೇ ಸತ್ಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications