ಬೇಕಿತ್ತಾ ಇದೆಲ್ಲ: ಕಾಲೇಜಿನಲ್ಲಿ ಹೀರೋಯಿಸಂ ತೋರಿಸಲು ಹೋದ ವಿದ್ಯಾರ್ಥಿಗಳು, ಮುಂದಿತ್ತು 'ಮಾರಿಹಬ್ಬ'..!

ಇವತ್ತಿನ ದಿನ 'ಸಾಮಾಜಿಕ ಜಾಲತಾಣ' ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿದೆ. ಇಲ್ಲಿ, ಖ್ಯಾತಿಗಳಿಸಲು ಯುವಕ, ಯುವತಿಯರು ರೀಲ್ಸ್ ಮಾಡುತ್ತಾರೆ. ಬಹುತೇಕ ಮಂದಿ ಶೀಘ್ರ ಜನರನ್ನು ತಲುಪುತ್ತೇವೆ ಎಂಬ ಭ್ರಮೆಯಲ್ಲಿ ಬೈಕ್ ಅಥವಾ ಕಾರುಗಳಲ್ಲಿ ಅಪಾಯಕಾರಿ ಸಾಹಸ ಪ್ರದರ್ಶನ (stunts) ಮಾಡಲು ಮುಂದಾಗುತ್ತಾರೆ.

ಕೆಲವು ಅನೀರಿಕ್ಷಿತ ಸಂದರ್ಭದಲ್ಲಿ ಸ್ಟಂಟ್‌ ಮಾಡಲು ಹೋದಾಗ ತೊಂದರೆಗೆ ಸಿಲುಕಿಕೊಲ್ಲುತ್ತಾರೆ. ಹಲವೆಡೆ ಕಾಲೇಜು ಫೆಸ್ಟ್‌ಗಳಲ್ಲಿ ಬೈಕ್/ ಕಾರು ರ‍್ಯಾಲಿಗಳನ್ನು ಆಯೋಜಿಸಲಾಗುತ್ತದೆ. ಅದನ್ನು ವ್ಯವಸ್ಥಿತವಾಗಿ ಸಂಘಟಿಸಿರುತ್ತಾರೆ. ಆದರೆ, ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳ ತಂಡವೊಂದು ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಮೇಲೆ ನಿಂತು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಆ ವೇಳೆ ಕಾರು ಮುಂದಕ್ಕೆ ಚಲಿಸಿದಾಗ ಅವರೆಲ್ಲ ರಸ್ತೆ ಮೇಲೆ ಬೀಳುತ್ತಾರೆ. ಸದ್ಯ, ಆ ಫೋಟೋ/ ವಿಡಿಯೋಗಳು ಭಾರೀ ವೈರಲ್ ಆಗಿದೆ.

ಬೇಕಿತ್ತಾ ಇದೆಲ್ಲ: ಕಾಲೇಜಿನಲ್ಲಿ ಹೀರೋಯಿಸಂ ತೋರಿಸಲು ಹೋದ ವಿದ್ಯಾರ್ಥಿಗಳು, ಮುಂದಿತ್ತು ಮಾರಿಹಬ್ಬ..!

ಈ ವಿಡಿಯೋವನ್ನು ರೆಡ್ಡಿಟ್‌ (Reddit) ಬಳಕೆದಾರನೊಬ್ಬ ಹಂಚಿಕೊಂಡಿದ್ದಾರೆ. ಆದರೆ, ಈ ಘಟನೆ ನಡೆದ ನಿಖರವಾದ ಸ್ಥಳದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಾಲೇಜಿನ ಫೆಸ್ಟ್‌ ವೇಳೆ, ಕೆಂಪು ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಮೇಲೆ ಮೂವರು ವಿದ್ಯಾರ್ಥಿಗಳು ನಿಂತಿದ್ದಾರೆ. ಅದರಲ್ಲಿ ಒಬ್ಬಾತ ಬಿಳಿ ಧ್ವಜವನ್ನು ಹಿಡಿದಿದ್ದಾನೆ. ಮತ್ತೆ ಸೀರೆಯುಟ್ಟಿದ್ದ ಮೂವರು ವಿದ್ಯಾರ್ಥಿನಿಯರು ಕಾರಿನ ಪಕ್ಕದಲ್ಲಿ ಇದ್ದಾರೆ.

ಹಿಂಭಾಗದ ಬಂಪರ್ ಮೇಲೆ ಮತ್ತಿಬ್ಬರು ವಿದ್ಯಾರ್ಥಿಗಳು ನಿಂತುಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು. ಸ್ಕಾರ್ಪಿಯೋ ಚಲಿಸಲು ಪ್ರಾರಂಭವಾಗುತ್ತದೆ. ರೂಫ್ ಮೇಲೆ ವಿದ್ಯಾರ್ಥಿಗಳು ಯಾವುದೇ ಸಪೋರ್ಟ್ ಇಲ್ಲದೆ ನಿಂತಿರುತ್ತಾರೆ. ಕ್ಷಣಕಾಲ ಕಾರು ಮುಂದೆ ಚಲಿಸಿದ ಕೊಡಲೇ ವಿದ್ಯಾಥಿಗಳು ಆಯತಪ್ಪಿ, ಹಿಂಭಾಗ ನಿಂತಿದ್ದ ವಿದ್ಯಾರ್ಥಿನಿಯರ ಮೇಲೆ ಬೀಳುತ್ತಾರೆ. ಅಲ್ಲಿಯೇ ಸ್ಥಳದಲ್ಲಿದ್ದ ಇತರರು, ಇವರ ಸಹಾಯಕ್ಕೆ ಬರುತ್ತಾರೆ.

ಬೇಕಿತ್ತಾ ಇದೆಲ್ಲ: ಕಾಲೇಜಿನಲ್ಲಿ ಹೀರೋಯಿಸಂ ತೋರಿಸಲು ಹೋದ ವಿದ್ಯಾರ್ಥಿಗಳು, ಮುಂದಿತ್ತು ಮಾರಿಹಬ್ಬ..!

ಇಲ್ಲಿ ಕಾರು, ಇದ್ದಕ್ಕಿಂದ್ದಂತೆ ವೇಗವನ್ನು ಪಡೆಯುತ್ತದೆ. ರೂಫ್ ಮೇಲೆ ನಿಂತಿದ್ದವರೂ ಏನನ್ನು ಸಹಾಯಕ್ಕೆ ಹಿಡಿದುಕೊಳ್ಳದ ಕಾರಣ ಬಿದ್ದರಬಹುದು. ನಿಮಗೆ ಗೊತ್ತಿರಲಿ.. ಸಾರ್ವಜನಿಕ ಸ್ಥಳದಲ್ಲಿ ಸಾಹಸ ಪ್ರದರ್ಶನ ಮಾಡುವುದು ಕಾನೂನು ಬಾಹಿರ. ಆಗೊಮ್ಮೆ ನೀವು ಸ್ಟಂಟ್ ಮಾಡಬೇಕು ಅಂದುಕೊಂಡರೆ ಅದಕ್ಕಾಗಿ ಮೀಸಲಾಗಿರುವ ಖಾಸಗಿ ಸ್ಥಳ ಅಥವಾ ರೇಸ್ ಟ್ರಾಕ್ ನಲ್ಲಿ ನುರಿತ ಮಾರ್ಗದರ್ಶಕರ ನೇತೃತ್ವದಲ್ಲಿ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿ, ಮುನ್ನೆಚ್ಚರಿಕೆಯಿಂದ ನಡೆಸಿ.

ಈ ಘಟನೆಯನ್ನು ಗಮನಿಸಿದಾಗ ಕಾಲೇಜು ಆಡಳಿತ ಮಂಡಳಿಗಳು ಸಹ ಫೆಸ್ಟ್ ಸೇರಿದಂತೆ ವಿಶೇಷ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಫ್ರೀ ಬಿಡುತ್ತಾರೆ. ಒಂದಷ್ಟು ಮಂದಿ ಇದನ್ನೇ ಅವಕಾಶವಾಗಿ ಬಳಸಿಕೊಂಡು, ಇಂತಹ ಕೆಲಸಗಳಿಗೆ ಕೈಹಾಕಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳತ್ತಾರೆ. ಎಷ್ಟೋ ಸಂದರ್ಭದಲ್ಲಿ ಬೈಕ್/ ಕಾರು ಬಳಸಿ, ಸಾಹನ ಪ್ರದರ್ಶನ ಮಾಡಲು ಹೋಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಯನ್ನು ನೋಡಿದ್ದೇವೆ. ಈಗಲಾದರೂ ಸಂಬಧಪಟ್ಟವರೂ ಎಚ್ಚರವಹಿಸಲಿ.

ಬೇಕಿತ್ತಾ ಇದೆಲ್ಲ: ಕಾಲೇಜಿನಲ್ಲಿ ಹೀರೋಯಿಸಂ ತೋರಿಸಲು ಹೋದ ವಿದ್ಯಾರ್ಥಿಗಳು, ಮುಂದಿತ್ತು ಮಾರಿಹಬ್ಬ..!

ಇನ್ನು, ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸುವ ಯಾವುದೇ ವಾಹನ ಸವಾರರು, ಸಂಚಾರಿ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿರಿ. ನಿಗದಿಪಡಿಸಿರುವ ವೇಗಮಿತಿಯಲ್ಲಿ ಕಾರು ಅಥವಾ ಬೈಕ್ ಓಡಿಸಿರಿ. ಮದ್ಯಪಾನ ಮಾಡಿ ಅಥವಾ ಫೋನ್ ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಬೇಡಿ. ಕಾರುಗಳಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಹಾಕಿಕೊಳ್ಳುವುದನ್ನು ಮರೆಯದಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, September 16, 2023, 11:01 [IST]
English summary
Students stunting moving mahindra scorpio have fall down
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+