ಬದಲಾವಣೆಯ ಪರ್ವದಲ್ಲಿ ಭಾರತೀಯ ರೈಲ್ವೇ; ಹೊಸತೇನಿದೆ ?
ನೀವು ರೆಡಿನಾ? ಬದಲಾಗುತ್ತಿದೆ ಭಾರತೀಯ ರೈಲ್ವೇ. ಅಕ್ಷರಶ: ದೇಶದ ಲಕ್ಷಾಂತರ ಮಂದಿಯ ಪಾಲಿಗಿದು ಹೊಸ ಅನುಭವಾಗಿರಲಿದೆ. ಕೊನೆಗೂ ಯಾತ್ರಿಕರ ಕೂಗು ಕೇಳಿರುವ ಇತಿಹಾಸ ಪ್ರಸಿದ್ಧ ಭಾರತೀಯ ರೈಲ್ವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ತರ 'ಮೇಕ್ ಇನ್ ಇಂಡಿಯಾ' ಯೋಜನೆಯ ಪ್ರಕಾರ ಹೆಚ್ಚು ಸೌಲಭ್ಯಗಳನ್ನು ಒಳಗೊಂಡಿರುವ ರೈಲುಗಳನ್ನು ನಿರ್ಮಿಸುತ್ತಿದೆ.
Also Read: ಇಂಡಿಯನ್ ರೈಲ್ವೆ 40 ಸ್ವಾರಸ್ಯಕರ ಅಂಶಗಳು
ಪ್ರಮುಖವಾಗಿಯೂ ಅನುಕೂಲ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದ್ದು, ರೈಲ್ವೇ ಒಳಮೈ ಸಂಪೂರ್ಣವಾಗಿ ಮಾರ್ಪಾಡುಗೊಳ್ಳಲಿದೆ. ಅನೇಕ ಮಂದಿ ನಿರ್ವಹಣೆಯ ಕೊರತೆಯಿಂದಾಗಿ ದುರ್ವಾಸನೆ ಬೀರುವ ರೈಲ್ವೇ ಪಯಣದಿಂದ ದೂರವುಳಿಯುತ್ತಾರೆ. ಅಂಥವರನ್ನು ಮರಳಿ ರೈಲ್ವೇಯಲ್ಲಿ ಪಯಣಿಸುವಂತೆ ಹುರಿದುಂಬಿಸಲಿದೆ.

ಬಲ್ಲ ಮೂಲಗಳಿಂದ ಲಭ್ಯವಾಗಿರುವ ವರದಿಗಳ ಪ್ರಕಾರ ಭಾರತೀಯ ರೈಲ್ವೇ ಅತಿ ಶೀಘ್ರದಲ್ಲೇ ಹೊಸತಾದ ಲಗ್ಷುರಿ ರೈಲುಗಳನ್ನು ದೇಶಕ್ಕೆ ಪರಿಚಯಿಸಲಿದೆ. ಇದರ ಆಂತರಿಕ ಭಾಗವೂ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಈ ನಿಟ್ಟಿನಲ್ಲಿ ಭೋಪಾಲ್ ಮತ್ತು ಬಿನಾ ರೈಲ್ವೇ ಸ್ಟೇಷನ್ ನಗಳ ನಡುವೆ ಗಂಟೆಗೆ 120 ಕೀ.ಮೀ. ವೇಗದಲ್ಲಿ 24 ಕೋಚ್ ಗಳ ಅಭ್ಯಾಸ ಪಯಣವನ್ನು ಹಮ್ಮಿಕೊಳ್ಳಲಾಗಿತ್ತು.

ಭೋಪಾಲ್ ನಲ್ಲಿ ಸ್ಥಿತಗೊಂಡಿರುವ ಕೋಚ್ ಪುನಶ್ಚೈತನ್ಯ ಕಾರ್ಯಾಗಾರದಲ್ಲಿ (CRWS) ಹೊಚ್ಚ ಹೊಸ ರೈಲ್ವೇ ಆಂತರಿಕ ಭಾಗಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಹೊಸತಾದ ಅಂದವಾದ ಒಳಮೈಯಲ್ಲಿ ಕಂಡುಬಂದಿರುವ ಪ್ರಮುಖ ವೈಶಿಷ್ಟ್ಯವೆಂದರೆ ಎಳೆತ ಕಡಿಮೆಯ (jerk-less) ಆಸನ ವ್ಯವಸ್ಥೆಯಾಗಿದೆ. ಅಷ್ಟೇ ಅಲ್ಲದೆ ಈಗಿನ ಹಸಿರು ಹಾಗೂ ಕೆಂಪು ಸೀಟುಗಳ ಹೊರತಾಗಿ ಹೊಸತಾದ ನೇರಳೆ ಬಣ್ಣವು ಐಷಾರಾಮಿ ಅನುಭವವನ್ನು ನೀಡಲಿದೆ.

ಹೆಚ್ಚು ಸ್ಥಳಾವಕಾಶಯುಕ್ತ ಕೋಚ್, ಬದಿಯಲ್ಲಿ ವಿಶಾಲವಾದ ಮಲಗುದಾಣ (side berth), ಎಲ್‌ಇಡಿ ರೀಡಿಂಗ್ ಲೈಟ್ಸ್, ಸ್ನ್ಯಾಕ್ ಟೇಬಲ್, ಜೈವಿಕ ಶೌಚಾಲಯ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಇನ್ನು ಮೊಬೈಲ್ ಹಾಗೂ ಲ್ಯಾಪ್ ಟ್ಯಾಪ್ ಚಾರ್ಜ್ ಮಾಡಲು ಚಾರ್ಚಿಂಗ್ ಪಾಯಿಂಟ್ ಗಳನ್ನು ಏರ್ಪಡಿಸಲಾಗಿದ್ದು, ಆರಾಮದಾಯಕವಾಗಿ ಪಯಣ ಬೆಳೆಸಬಹುದಾಗಿದೆ.

2011ನೇ ಸಾಲಿನಲ್ಲೇ ತನ್ನ ಮಹತ್ತರ ಆಧುನಿಕ ಸೌಲಭ್ಯದ ರೈಲ್ವೇ ಒಳಮೈಯನ್ನು ಮಾರ್ಪಾಡುಗೊಳಿಸಲು ಇಂಡಿಯನ್ ರೈಲ್ವೇ ಆರಂಭಿಸಿತ್ತು. ರೈಲ್ವೇ ಪಯಣದ ವೇಳೆ ಯಾತ್ರಿಕರಿಗೆ ಹೆಚ್ಚು ಮನೆತನದ (homely) ಅನುಭವ ನೀಡುವುದು ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ಸದ್ಯದ ಯೋಜನೆಯ ಪ್ರಕಾರ ಭೋಪಾಲ ಕೋಚ್ ಪುನಶ್ಚೈತನ್ಯ ಕಾರ್ಯಾಗಾರದಲ್ಲಿ ಒಟ್ಟು 111 ಆಧುನಿಕ ರೈಲ್ವೇ ಕೋಚ್ ಗಳು ನಿರ್ಮಾಣವಾಗಲಿದೆ. ಇದರಲ್ಲಿ 87 ನಾನ್ ಎಸಿ, 17 ಎಸಿ 3 ಟೈರ್, 5 ಎಸಿ 2 ಟೈರ್ ಮತ್ತು ತಲಾ ಒಂದು ಎಸಿ 1 ಹಾಗೂ ಚೈರ್ ಕಾರು ಕೋಚ್ ಗಳಿರಲಿದೆ.

ಈ ಮಹತ್ತರ ಯೋಜನೆಯಂತೆ ಎಸಿ ಕೋಚ್ ಗಳನ್ನು ನಿರ್ಮಿಸಲು 70 ಲಕ್ಷ ರು. ಹಾಗೂ ಎಸಿ ರಹಿತ ಸ್ಲೀಪರ್ ಕೋಚ್ ಗಳ ನಿರ್ಮಾಣಕ್ಕೆ 49 ಲಕ್ಷ ರು. ವೆಚ್ಚ ತಗುಲಿದೆ.

ಅಂದ ಹಾಗೆ ಸದ್ಯ ರೈಲ್ವೇ ಇಲಾಖೆಯಿಂದ ಮಾನ್ಯತೆ ಪಡೆಯುವ ತವಕದಲ್ಲಿರುವ ನೂತನ ಕೋಚ್ ಗಳು ಮೊದಲ ಬಾರಿಗೆ ಐಎಸ್‌ಒ ಪ್ರಮಾಣೀಕೃತ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಆಳವಡಿಸುವ ಸಾಧ್ಯತೆಯಿದೆ. ತದಾ ಬಳಿಕ ಎರಡನೇ ಹಂತದ ಲಗ್ಷುರಿ ಕೋಚ್ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ.

ವಿಶಿಷ್ಟತೆಗಳು
- ಎಲ್‌ಇಡಿ ರೀಡಿಂಗ್ ಲೈಟ್ಸ್,
- ಸ್ನ್ಯಾಕ್ ಟೇಬಲ್,
- ಸ್ಥಳಾವಕಾಶಯುಕ್ತ ಸೈಡ್ ಬರ್ತ್,
- ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್,
- ಕೋಚ್‌ನ ಎರಡು ಬದಿಗಳಲ್ಲೂ ಅಗ್ನಿ ಶಾಮಕ ಉಪಕರಣ,
- ಪ್ರತಿ ಸೀಟಿನಲ್ಲಿ ನೀರು ಬಾಟಲಿ ಹೋಲ್ಡರ್,
- ಹಸಿರು ಶೌಚಾಲಯ ವ್ಯವಸ್ಥೆ ಜೊತೆಗೆ ಸೋಪ್ ಮತ್ತು ಡಸ್ಟ್ ಬಿನ್,
- ಅಗ್ನಿನಿರೋಧಕ ಸೀಟು ( poly vinyl),
- ಕಾರ್ಪೆಟ್ ತರಹನೇ ಕಾಣಿಸುವ ಫ್ಲೋರ್‌ಗೆ ವಿಶೇಷ ಬಣ್ಣ,
- ಮಧ್ಯದ ಬರ್ತ್‌ಗೂ ಸೈಡ್ ಸಪೋರ್ಟ್

ವಿಶಿಷ್ಟತೆಗಳು

ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು ಮಹಾರಾಜಾ ಎಕ್ಸ್ ಪ್ರೆಸ್


Click it and Unblock the Notifications








