ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಸಾರ್ವಜನಿಕ ರಸ್ತೆಗಳಲ್ಲಿ ಬುಲೆಟ್‌ನಲ್ಲಿ ಸ್ಟಂಟ್ ಮಾಡಿದ್ದಕ್ಕಾಗಿ ಇಬ್ಬರು ಮಹಿಳೆಯರಿಗೆ ಗಾಜಿಯಾಬಾದ್ ಪೊಲೀಸರು 11,000 ರೂ. ದಂಡವನ್ನು ವಿಧಿಸಿದ್ದರು. ಇದೀಗ ಅವರಿಬ್ಬರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Recommended Video

Alto K10 vs Renault Kwid | Detailed Comparison | Specs Features And Design

ಬಂಧನಕ್ಕೊಳಗಾಗಿರುವ ಯುವತಿಯು ತನ್ನನ್ನು ತಾನು ಬುಲೆಟ್ ರಾಣಿ ಎಂದು ಕರೆದುಕೊಳ್ಳುತ್ತಾಳೆ. ಆಗಾಗ್ಗೆ ಸಾರ್ವಜನಿಕ ರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸ್ಟಂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾಳೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಈ ಯುವತಿಗೆ ಕಳೆದ ಬಾರಿ ದಂಡ ವಿಧಿಸಿ ಸ್ಟಂಟ್ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಈಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಪದೆ ಪದೆ ಸ್ಟಂಟ್ ಮಾಡುತ್ತಿದ್ದಳು. ಇದೀಗ ಪೊಲೀಸ್‌ ಸಿಬ್ಬಂದಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಅವರ ಮೇಲೆ ಹಲ್ಲೆ ಮಾಡಿದ್ದಾಗಿ ತಿಳಿದುಬಂದಿದೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಮಾಹಿತಿ ಪ್ರಕಾರ ಬುಲೆಟ್ ರಾಣಿ ಎಂದು ಕರೆಯಲ್ಪಡುವ ಶಿವಂಗಿ ದಾಬಾಸ್ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತಿದ್ದ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಮಹಿಳಾ ಕಾನಿಸ್ಟೆಬಲ್ ಜ್ಯೋತಿ ಶರ್ಮಾ ಮತ್ತು ಸೀಮಾ ಅವರಿಗೆ ಡಿಕ್ಕಿ ಹೊಡೆದಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಅಪಘಾತದ ನಂತರ, ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಕಾರು ಚಾಲಕರನ್ನು ಡ್ರೈವಿಂಗ್ ವೇಳೆ ಎಚ್ಚರವಿರಲಿ ಎಂದು ಹೇಳಿದ್ದಾರೆ. ಆದರೆ, ಘಟನೆಯ ನಂತರ ಶಿವಾಂಗಿ ದಾಬಾಸ್ ಕೋಪಗೊಂಡು ಪೊಲೀಸ್ ಸಿಬ್ಬಂದಿಯನ್ನು ಏಕ ವಚನದಲ್ಲಿ ಮಾತನಾಡಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾಳೆ. ಈ ವೇಳೆ ವಾಗ್ವಾದ ಹೆಚ್ಚಾಗಿದೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಈ ರೀತಿ ಕಾರು ಓಡಿಸುತ್ತಿರುವುದು ಏಕೆ ಎಂದು ಪೊಲೀಸ್ ಸಿಬ್ಬಂದಿ ಜ್ಯೋತಿ ಕೇಳಿದಾಗ, ಶಿವಾಂಗಿ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಸೀಮಾ ಠಾಣೆಗೆ ಮಾಹಿತಿ ನೀಡಿದ್ದಾರೆ, ಈ ಪರಿಸ್ಥಿತಿಯನ್ನು ನಿಭಾಯಿಸಲು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆ ವೇಳೆ ಪೊಲೀಸರೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಿವಂಗಿ ದಾಬಸ್‌ನ ಪರಿಚಯಸ್ಥರು ಆರೋಪಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಆದರೆ ಘಟನೆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ವಿಡಿಯೋ ಮಾಡಿದ್ದರು. ಹಾಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಡಿಯೋ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಶಿವಾಂಗಿ ಹಲ್ಲೆ ಮಾಡಿರುವುದು ಸಾಭಿತಾಗಿದ್ದು, ಆಕೆಯನ್ನು ಬಂಧಿಸಿದ್ದಾರೆ. ಪೊಲೀಸರು ಶಿವಾಂಗಿಯನ್ನು ಯಾವ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಘಾಜಿಯಾಬಾದ್‌ನಲ್ಲಿ ಪೊಲೀಸರು ಈಗ ಸ್ಟಂಟ್ ಮಾಡುವವರಿಗೆ ಚಲನ್‌ಗಳನ್ನು ನೀಡುವ ವೀಡಿಯೊಗಳು ವೈರಲ್ ಆಗುತ್ತಿವೆ. ಘಜಿಯಾಬಾದ್‌ನಲ್ಲಿ ವೈರಲ್ ಆಗುವ ಸ್ಟಂಟ್ ಮಾಡುವವರ ವೀಡಿಯೊ ದೃಶ್ಯಾವಳಿಗಳನ್ನು ಬಳಸಿಕೊಂಡು ಅಪರಾಧಿಗಳನ್ನು ಪತ್ತೆಹಚ್ಚಿ ದಂಡ ವಿಧಿಸಲಾಗುತ್ತಿದೆ. ಈ ಹಿಂದೆಯೂ ವೀಡಿಯೊ ಸಾಕ್ಷ್ಯಗಳ ಆಧಾರದ ಮೇಲೆ ಹಲವರಿಗೆ ದಂಡ ವಿಧಿಸಲಾಗಿದೆ. ಆದರೂ ಸ್ಟಂಟ್ ಮಾಡುವವರು ಹೆಚ್ಚಾಗುತ್ತಲೇ ಇದ್ದಾರೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಸ್ಟಂಟ್ ಮಡುವುದು ಕಾನೂನು ಬಾಹಿರ

ಸಾರ್ವಜನಿಕ ರಸ್ತೆಗಳಲ್ಲಿ ಸಾಹಸಗಳನ್ನು ಮಾಡುವುದು ಕಾನೂನುಬಾಹಿರವಾಗಿದೆ, ಅದಕ್ಕೆ ಉತ್ತಮ ಕಾರಣಗಳಿವೆ. ಸ್ಟಂಟ್ ಮಾಡುವುದರಿಂದ ವಾಹನ ಸವಾರರ ಗಮನ ಬೇರೆಡೆಗೆ ಬಂದು ಅಪಘಾತಗಳು ಸಂಭವಿಸುತ್ತವೆ. ಅಲ್ಲದೆ ಕೆಲವೊಮ್ಮ ಸ್ಟಂಟ್ ಮಿಸ್ ಆಗಿ ಜೀವ ಕಳೆದುಕೊಂಡ ಉದಾಹರಣೆಗಳು ಇವೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಸ್ಟಂಟ್ ಅಭ್ಯಾಸ ಮಾಡಲು ಖಾಲಿ ಸ್ಥಳವನ್ನು ಹುಡುಕಿಕೊಳ್ಳುವುದು ಒಳ್ಳೆಯದು. ಸರಿಯಾದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನೋಡಿಕೊಳ್ಳಬೇಕು. ಯುವಕರು ಯಾವಾಗಲೂ ತಜ್ಞರ ಸಹಾಯವನ್ನು ತೆಗೆದುಕೊಂಡು ಸಾಹಸ ಮತ್ತು ರೇಸಿಂಗ್‌ನ ಸುರಕ್ಷಿತ ಅಭ್ಯಾಸಗಳಿಗಾಗಿ ಸ್ಟಂಟ್ ಅಕಾಡೆಮಿಗೆ ಸೇರಿಕೊಳ್ಳಬಹುದು.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಸಾರ್ವಜನಿಕ ರಸ್ತೆಗಳು ಅನಿರೀಕ್ಷಿತವಾಗಿರುವುದರಿಂದ ಅಪಘಾತಗಳಿಗೂ ಕಾರಣವಾಗಬಹುದು. ಒಂದು ವೇಳೆ ಮೋಟಾರು ಸೈಕಲ್‌ಗಳಿಂದ ಕೆಳಗೆ ಬೀಳುವ ಹೆಚ್ಚಿನ ಅಪಾಯದ ಅರಿವಿದ್ದರೆ ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು ಉತ್ತಮ, ವಿಶೇಷವಾಗಿ ಹೆಲ್ಮೆಟ್, ರೈಡಿಂಗ್ ಬೂಟ್‌ಗಳು, ಮೊಣಕಾಲು ಗಾರ್ಡ್‌ಗಳು, ಕೈಗವಸುಗಳನ್ನು ಧರಿಸುವುದು ಉತ್ತಮ. ಈ ವಸ್ತುಗಳು ಬಹಳಷ್ಟು ಗಾಯಗಳಿಂದ ನಿಮ್ಮನ್ನು ಉಳಿಸುತ್ತದೆ.

ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಸ್ಟಂಟ್ ರೈಡರ್ 'ಬುಲೆಟ್ ರಾಣಿ' ಬಂಧನ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಾರ್ವಜನಿಕ ರಸ್ತೆಗಳಲ್ಲಿ ಸಾಹಸಗಳನ್ನು ಮಾಡುವುದು ಕಾನೂನುಬಾಹಿರವಾಗಿದೆ. ಉಲ್ಲಂಘಿಸುವವರು ಭಾರಿ ದಂಡವನ್ನು ಪಾವತಿಸುವುದರ ಜೊತೆಗೆ ಜೈಲಿಗೂ ಹೋಗಬಹುದು. ಯಾರಾದರೂ ಸ್ಟಂಟಿಂಗ್ ಅಭ್ಯಾಸ ಮಾಡಲು ಬಯಸಿದರೆ ಅಥವಾ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಬಯಸಿದರೆ, ಅದನ್ನು ರೇಸ್ ಟ್ರ್ಯಾಕ್‌ಗಳು ಮತ್ತು ಫಾರ್ಮ್‌ಹೌಸ್‌ಗಳಂತಹ ಖಾಸಗಿ ಆಸ್ತಿಯಲ್ಲಿ ಮಾಡಬೇಕು.

Article Published On: Wednesday, August 31, 2022, 10:18 [IST]
English summary
Stunt rider Bullet Rani arrested for slapping police personnel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+