ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಸೂಪರ್ ಬೈಕ್‌ಗಳನ್ನು ಲಾರಿಗಳಲ್ಲಿಯೇ ಆಗಲಿ, ಬೇರೆ ವಾಹನಗಳಲ್ಲಿಯೇ ಆಗಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಅವು ಜನರ ಗಮನವನ್ನು ತಮ್ಮತ್ತ ಸೆಳೆಯುತ್ತವೆ. ಇನ್ನು ರಸ್ತೆಯಲ್ಲಿ ಯಾರಾದರೂ ಸೂಪರ್ ಬೈಕ್‌ಗಳನ್ನು ಚಲಾಯಿಸಿಕೊಂಡು ಹೋಗುವಾಗಲೂ ಸಹ ಜನರ ಗಮನವನ್ನು ತಮ್ಮತ್ತ ಸೆಳೆಯುತ್ತವೆ.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಎಕ್ಸಾಸ್ಟ್ ಗಳಲ್ಲಿ ಬರುವ ಶಬ್ದವನ್ನು ಹೆಚ್ಚಿಸುವ ಸಲುವಾಗಿ ಕೆಲವರು ತಮ್ಮ ಬೈಕುಗಳಲ್ಲಿ ಪರ್ಫಾಮೆನ್ಸ್ ಎಕ್ಸಾಸ್ಟ್ ಹಾಗೂ ಇತರ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳನ್ನು ಅಳವಡಿಸಿಕೊಳ್ಳುತ್ತಾರೆ. ಯಾವುದೇ ಬೈಕಿನಲ್ಲಿರುವ ಜೋರಾಗಿ ಶಬ್ದ ಮಾಡುವ ಎಕ್ಸಾಸ್ಟ್ ಗಳು ಜನರ ಗಮನವನ್ನು ತಮ್ಮತ್ತ ಸೆಳೆಯುತ್ತವೆ.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಬೈಕ್ ಸವಾರರ ದುರಾದೃಷ್ಟಕ್ಕೆ ಈ ರೀತಿಯ ಜೋರು ಶಬ್ದವು ಪೊಲೀಸರ ಗಮನವನ್ನು ಕೂಡ ತನ್ನತ್ತ ಸೆಳೆಯುತ್ತದೆ. ಕೋಲ್ಕತ್ತಾದ ಬೈಕ್ ಸವಾರರೊಬ್ಬರು ಜೋರಾಗಿ ಶಬ್ದ ಮಾಡುತ್ತಾ ಬೈಕ್ ಚಾಲನೆ ಮಾಡುತ್ತಿದ್ದರು. ಈ ಶಬ್ದವನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಬೈಕ್ ನಿಲ್ಲಿಸುವಂತೆ ಹೇಳಿದ್ದಾರೆ.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಆದರೆ ಬೈಕ್ ಸವಾರ ಬೈಕ್ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆ ಟ್ರಾಫಿಕ್ ಪೊಲೀಸ್ ತಕ್ಷಣವೇ ಸಿಗ್ನಲ್ ಲೈಟ್ ಬದಲಿಸಿ ಆ ಬೈಕ್ ಸವಾರನನ್ನು ಹಿಡಿದಿದ್ದಾರೆ. ಈ ಘಟನೆಯನ್ನು ಬೈಕರ್ ಬಾಯ್ ಜಹೀರ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‍‍ನಲ್ಲಿ ಅಪ್‍‍ಲೋಡ್ ಮಾಡಿದ್ದಾರೆ.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ರಸ್ತೆಯಲ್ಲಿ ಚಲಿಸುವವರ ಪ್ರತಿಕ್ರಿಯೆಯನ್ನು ಪಡೆಯುವ ಸಲುವಾಗಿ ಹೆಲ್ಮೆಟ್‍‍ನಲ್ಲಿ ಕ್ಯಾಮರಾ ಅಳವಡಿಸಿಕೊಂಡು ಅವರು ತಮ್ಮ ಬೈಕಿನಲ್ಲಿ ಹೊರಟಿದ್ದಾರೆ. ಅಂದ ಹಾಗೆ ಅವರು ಚಲಾಯಿಸುತ್ತಿದ್ದು ಹೋಂಡಾ ಸಿ‍‍ಬಿ‍ಆರ್ 1000 ಆರ್‍ಆರ್ ಫೈರ್‍‍ಬ್ಲೇಡ್ ಬೈಕ್ ಅನ್ನು.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಈ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಸಿಸ್ಟಂ ಅಳವಡಿಸಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಸಿಸ್ಟಂಗಳ ಮಾರಾಟವು ಭಾರತದಲ್ಲಿ ಕಾನೂನುಬದ್ದವಾದರೂ ಅವುಗಳು ಹೆಚ್ಚು ಶಬ್ದವನ್ನುಂಟು ಮಾಡುವುದರಿಂದ ಅವುಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಬಳಸುವಂತಿಲ್ಲ.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಈ ವೀಡಿಯೊದಲ್ಲಿ ಬೈಕ್ ಸವಾರನು ಜನಭರಿತ ಕೊಲ್ಕತ್ತಾದ ರಸ್ತೆಗಳಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಈ ಬೈಕ್ ಅನ್ನು ಕಂಡೊಡನೆ ಟ್ರಾಫಿಕ್ ಪೊಲೀಸ್ ಬೈಕ್ ಅನ್ನು ನಿಲ್ಲಿಸುವಂತೆ ಕೈ ತೋರಿಸುವುದನ್ನು ಸಹ ಕಾಣಬಹುದು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಬೈಕ್ ಸವಾರನು ಇದು ಸೂಪರ್‍‍ಬೈಕ್ ಆಗಿರುವ ಕಾರಣ ಬೈಕಿನಿಂದ ದೂರ ಸರಿಯುವಂತೆ ಟ್ರಾಫಿಕ್ ಪೊಲೀಸ್‍‍ಗೆ ಹೇಳಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಮುಂದಿನ ಸಿಗ್ನಲ್‍‍ನಲ್ಲಿ ಬೈಕ್ ನಿಲ್ಲಿಸುತ್ತಾನೆ. ಅಲ್ಲಿಗೆ ಬರುವ ಟ್ರಾಫಿಕ್ ಪೊಲೀಸ್ ಬೈಕಿನ ಕೀಯನ್ನು ಕಸಿದುಕೊಂಡು, ಟ್ರಾಫಿಕ್ ಲೈಟ್ ಅನ್ನು ಹಸಿರು ಬಣ್ಣಕ್ಕೆ ಬದಲಿಸುವಂತೆ ಹೇಳುವುದನ್ನು ಕಾಣಬಹುದು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಆ ಟ್ರಾಫಿಕ್ ಪೊಲೀಸ್ ಬೈಕ್ ಸವಾರನಿಗೆ ತನ್ನ ಸಹೋದ್ಯೊಗಿಯಿಂದ ವೈರ್‍‍ಲೆಸ್ ಸಂದೇಶವನ್ನು ಪಡೆದು ಬೈಕ್ ಅನ್ನು ನಿಲ್ಲಿಸಲಾಗಿದೆ ಎಂದು ಹೇಳುತ್ತಾರೆ. ನಂತರ ಬೈಕ್ ಸವಾರನಿಗೆ ಹೆಲ್ಮೆಟ್‍‍ನಲ್ಲಿರುವ ಕ್ಯಾಮರಾವನ್ನು ಆಫ್ ಮಾಡುವಂತೆ ಹೇಳುತ್ತಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಕ್ಯಾಮರಾ ಆನ್ ಆಗಿದ್ದ ವೇಳೆಯಲ್ಲಿ ಬೈಕ್ ಸವಾರನು ಸೂಪರ್‍‍ಬೈಕ್‍‍ಗಳು ಟ್ರಾಫಿಕ್‍‍ನಲ್ಲಿ ಹೆಚ್ಚು ಬಿಸಿಯಾಗುವ ಕಾರಣಕ್ಕೆ ಬೈಕ್ ಅನ್ನು ನಿಲ್ಲಿಸಲಿಲ್ಲವೆಂದು ಹೇಳುತ್ತಾನೆ. ಇದರ ಜೊತೆಗೆ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಅಳವಡಿಸಿಕೊಂಡಿರುವ ಕಾರಣಕ್ಕೆ ಪೊಲೀಸರು ದಂಡ ವಿಧಿಸಿರುವುದಾಗಿ ಬೈಕ್ ಸವಾರನು ಹೇಳುತ್ತಾನೆ.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಎಷ್ಟು ಪ್ರಮಾಣದ ದಂಡವನ್ನು ವಿಧಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಈ ಉಲ್ಲಂಘನೆಗಾಗಿ ಕೋರ್ಟಿನಲ್ಲಿ ದಂಡವನ್ನು ಪಾವತಿಸಬೇಕಾಗಿರುವುದರಿಂದ ನಿಯಮ ಉಲ್ಲಂಘಿಸುವ ವ್ಯಕ್ತಿಯು ಕೋರ್ಟಿಗೆ ಹೋಗಿ ದಂಡ ಪಾವತಿಸಬೇಕಾಗುತ್ತದೆ.

ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಸಿಸ್ಟಂಗಳನ್ನು ಅಳವಡಿಸಿಕೊಂಡರೆ ಆರ್‍‍ಟಿ‍ಒ ಅಧಿಕಾರಿಗಳು ಅಂತಹ ವಾಹನವನ್ನು ವಶಪಡಿಸಿಕೊಂಡು ಭಾರೀ ಪ್ರಮಾಣದ ದಂಡವನ್ನು ವಿಧಿಸಬಹುದು. ಪೊಲೀಸರು ತಮ್ಮಿಂದ ತಪ್ಪಿಸಿಕೊಳ್ಳುತ್ತಿರುವವರನ್ನು ಹಿಡಿಯುತ್ತಿರುವುದು ಇದು ಮೊದಲ ಬಾರಿಯಲ್ಲ.

ತಪ್ಪಿಸಿಕೊಂಡ ಬೈಕ್ ಸವಾರನನ್ನು ಕೊನೆಗೂ ಹಿಡಿದ ಟ್ರಾಫಿಕ್ ಪೊಲೀಸ್..!

ಈ ಹಿಂದೆಯೂ ಇಂತಹ ಅನೇಕ ಪ್ರಕರಣಗಳು ನಡೆದಿವೆ. ವಾಹನ ಚಾಲನೆ ಮಾಡುವ ಯಾರೇ ಆಗಲಿ ಪೊಲೀಸರು ಅಡ್ಡಗಟ್ಟಿ ತಪಾಸಣೆ ನಡೆಸುವಾಗ ಅವರಿಗೆ ಸಹಕರಿಸಬೇಕು. ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ತಪ್ಪಿಸಿಕೊಳ್ಳುವವರನ್ನು ಪೊಲೀಸರು ಸಿಸಿಟಿವಿಯ ಸಹಾಯದಿಂದ ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ವಿಧಿಸುವ ಸಾಧ್ಯತೆಗಳೂ ಸಹ ಇರುತ್ತವೆ.

Source: Biker Boy Zahir/YouTube

Article Published On: Monday, December 9, 2019, 16:49 [IST]
English summary
Superbike busted for loud exhaust cop catches rider by turning signal red - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+