Viral Video! ಲ್ಯಾಂಡ್‌ ಕ್ರೂಸರ್‌ ಸನ್‌ರೂಫ್‌ನಿಂದ ಕೈ ಬೀಸಿದ ರಜನಿಕಾಂತ್‌: ಇದಕ್ಕೆ ಕೇಸ್‌ ಹಾಕಬಲ್ಲರಾ ಟ್ರಾಫಿಕ್‌‌ ಪೊಲೀಸ್‌?

ಭಾರತದಲ್ಲಿ ಸನ್‌ರೂಫ್‌ ಇರುವ ಕಾರುಗಳಿಗೆ ಡಿಮ್ಯಾಂಡ್‌ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಈ ಕಾರುಗಳಲ್ಲಿನ ಸನ್‌ರೂಫ್‌ ಅವರ ನೆಚ್ಚಿನ ಫೀಚರ್‌ಗಳಲ್ಲಿ ಒಂದು ಎಂದು ಹಲವಾರು ಸಮೀಕ್ಷೆಗಳು ತಿಳಿಸಿವೆ. ಆದರೆ ಭಾರತದಲ್ಲಿರುವ ಹವಾಮಾನಕ್ಕೆ ಇದು ಯಾವಾಗಲೂ ಬಳಸುತ್ತಿರಲು ಸಾಧ್ಯವಿಲ್ಲ ಎಂದೇ ಹೇಳಬಹುದು.

ಇನ್ನು ಅಪರಾಧವಾಗಿದ್ದರೂ ರಸ್ತೆಯಲ್ಲಿ ಓಪನ್‌ ಆಗಿರುವ ಸನ್‌ ರೂಫ್‌ನಲ್ಲಿ ವ್ಯಕ್ತಿಗಳು ಹೊರಗೆ ನಿಲ್ಲುವುದು ಸಾಮಾನ್ಯ ವಿಚಾರ. ಈ ರೀತಿ ಚಲಿಸುತ್ತಿರುವ ಕಾರಿನ ಸನ್‌ರೂಫ್‌ನಲ್ಲಿ ತಲೆ ಹೊರಗೆ ಹಾಕಿ ನಿಲ್ಲುವುದನ್ನು ಪೊಲೀಸ್ ಕಂಡರೆ ಅಂತಹ ವಾಹನದ ಮಾಲೀಕರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬಹುದಾಗಿದೆ.

Land Cruiser Sunroof

ನೆರೆದಿದ್ದ ಅಭಿಮಾನಿಗಳನ್ನು ಹಾರೈಸಲು ಚಲಿಸುತ್ತಿದ್ದ ಟೋಯೋಟಾ ಲ್ಯಾಂಡ್‌ ಕ್ರೂಸರ್‌ (Land Cruiser) ವಾಹನದಲ್ಲಿದ್ದ ಸೂಪರ್‌ಸ್ಟಾರ್‌‌ ರಜನಿಕಾಂತ್ ಅವರು ಆ ಕಾರಿನ ಸನ್‌ರೂಫ್‌ ಓಪನ್‌ ಮಾಡಿ ಅದರ ಮೂಲಕ ಹೊರಗೆ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿ ಹಾರೈಸಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ಕುರಿತು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನು ಇದು ಬರೀ ಸೂಪರ್‌ ಸ್ಟಾರ್‌ ರಜನಿ ಕಾಂತ್‌ ಮಾತ್ರವಲ್ಲ. ಹಲವಾರು ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಈ ರೀತಿಯಲ್ಲಿ ನಡೆದುಕೊಂಡಿರುವುದನ್ನು ನಾವು ಕಂಡಿದ್ದೇವೆ. ಅಷ್ಟೇ ಏಕೆ, ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರೂ ಸಹ ಕೆಲವೊಂದು ಸಮಾರಂಭಗಳಲ್ಲಿ ರೋಡ್ ಶೋ ಮಾಡುವ ಸಂಧರ್ಭದಲ್ಲಿ ಈ ರೀತಿಯಲ್ಲಿ ಮಾಡಿರುವುದನ್ನು ನಾವು ಕಂಡಿದ್ದೇವೆ.

ಸೆಲೆಬ್ರಿಟಿಗಳು ಈ ರೀತಿ ಮಾಡುವುದರಿಂದಲೇ ಸಾಮನ್ಯ ಜನರೂ ಸಹ ಸನ್‌ ರೂಫ್‌ ಓಪನ್‌ ಮಾಡಿ ಅದರ ಮೂಲಕ ಹೊರ ಬಂದು ನಾನಾ ಚೇಷ್ಟೆಗಳನ್ನು ಮಾಡುತ್ತಿರುತ್ತಾರೆ, ಅದೂ ಸಹ ಕಾರು ವೇಗವಾಗಿ ಚಲಿಸುತ್ತಿರುವ ಸಂಧರ್ಭದಲ್ಲಿ. ಇಂತಹ ಸಂಧರ್ಭಗಳಲ್ಲಿ ಈ ರೀತಿಯಾಗಿ ವರ್ತಿಸುವುದು ತುಂಬಾನೇ ಅಪಾಯಕಾರಿ.

ಸನ್‌ರೂಫ್‌ನಂತಹ ಫೀಚರ್‌ಗಳು ಪ್ರಾರಂಭದಲ್ಲಿ ಲಕ್ಷುರಿ ಕಾರ್‌ಗಳಲ್ಲಿ ಕಂಡುಬರುತ್ತಿದ್ದು, ಬರ ಬರುತ್ತಾ ಸಾಮಾನ್ಯ ಕಾರುಗಳಲ್ಲಿಯೂ ಸಹ ನಾವು ಈ ಫೀಚರ್‌ ಅನ್ನು ಕಾಣಬಹುದಾಗಿದೆ. ಸನ್‌ ರೂಫ್‌ ನ ಸಹಾಯದಿಂದ ಕಾರಿನೊಳಗೆ ಹೆಚ್ಚಿನ ಬೆಳಕು ಮತ್ತು ಹೊರಗಿನ ವಾತಾವರಣದ ಹೆಚ್ಚಿನ ನೋಟ ಸಿಗುತ್ತದೆ. ಆದರೆ ಇವುಗಳನ್ನು ಹೇಗೆ ಬಳಸಬೇಕು ಎಂಬುದು ತುಂಬಾ ಮುಖ್ಯವಾಗಿರುತ್ತದೆ.

ಸನ್‌ರೂಫ್‌ ಅನ್ನು ಓಪನ್‌ ಮಾಡಿಕೊಂಡು ವೇಗವಾಗಿ ಕಾರು ಡ್ರೈವ್‌ ಮಾಡುವಾಗ ವೇಗವಾಗಿ ಗಾಳಿ ಒಳಗೆ ಬರುತ್ತದೆ. ಈ ಸಂಧರ್ಭದಲ್ಲಿ ತಲೆ ಹೊರಗೆ ಹಾಕಿ ನಿಂತರೆ ಕಣ್ಣಿಗೆ ಧೂಳು ಮತ್ತು ಇತರ ಸೂಕ್ಷ್ಮಾಣು ಜೀವಿಗಳು ಹೋಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸಣ್ಣ ಮಕ್ಕಳಿಗೆ ಇದು ಹೆಚ್ಚು ಅಪಾಯಕಾರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 3, 2023, 10:05 [IST]
English summary
Superstar rajinikanth waves to fans from a moving land cruiser sunroof
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+