ಆಗರ್ಭ ಶ್ರೀಮಂತನಾದ ಬಸ್‌ ಕಂಡಕ್ಟರ್: 50 ಕೋಟಿ ಮೌಲ್ಯದ ಕಾರುಗಳಿದ್ದರೂ ತುಂಬಾ ಸಿಂಪಲ್!

ಬಸ್ ಕಂಡಕ್ಟರ್ ಆಗಿ ಜೀವನ ಪ್ರಾರಂಭಿಸಿ ಇಂದು ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್‌ನಲ್ಲಿ ಓಡಾಡುವವರೆಗೆ ನಟ ರಜನಿಕಾಂತ್ ಕಾರು ಸಂಗ್ರಹವು ಅವರ ಜೀವನವನ್ನು ಪ್ರತಿಬಿಂಬಿಸುತ್ತದೆ. ಅವರ ಗ್ಯಾರೇಜ್‌ನಲ್ಲಿ ಹಳೆಯ ಪ್ರೀಮಿಯರ್ ಪದ್ಮಿನಿಯಿಂದ ಹಿಡಿದು ಹೈಪರ್ - ಆಧುನಿಕ ಪರ್ಫಾಮೆನ್ಸ್ ಕಾರುಗಳವರಗೆ ಎಲ್ಲಾ ಮಾದರಿಗಳು ಇವೆ. ಹೆಚ್ಚಿನ ಸೆಲೆಬ್ರಿಟಿಗಳು ತಮ್ಮ ಇತ್ತೀಚಿನ ಕಾರುಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೆ, ರಜನಿ ಮಾತ್ರ ಪಿಸುಮಾತು ಇಲ್ಲದೆ ಮೌನವಾಗಿ ಬಂದುಹೋಗಿದ್ದು ಗೊತ್ತಿಲ್ಲದಂತೆ ವ್ಯವಹರಿಸುತ್ತಾರೆ. ಸೂಪರ್‌ಸ್ಟಾರ್‌ ಜೀವನದಲ್ಲಿ ಇಲ್ಲಿಯವರೆಗೆ ಖರೀದಿಸಿದ ಹಾಗೂ ಯಾರಿಗೂ ಗೊತ್ತಿರದ ಕಾರುಗಳ ಪಟ್ಟಿ ಇಲ್ಲಿದೆ.

ರಜನೀಕಾಂತ್ ಅವರ ಕಾರು ಸಂಗ್ರಹವು ಕೇವಲ ಐಷಾರಾಮಿ ವಾಹನಗಳ ಪಟ್ಟಿಯಲ್ಲ - ಇದು ಅವರ ಜೀವನ ವಿಕಾಸದ ನಿರೂಪಣೆಯಾಗಿದೆ. ಅವರ ಆರಂಭಿಕ ದಿನಗಳಲ್ಲಿ ಅವರನ್ನು ಕಂಡ ಪ್ರೀಮಿಯರ್ ಪದ್ಮಿನಿಯಿಂದ ಹಿಡಿದು ಸೂಪರ್‌ಸ್ಟಾರ್‌ಡಮ್ ಬಳಿಕ ಬಂದ ಬೆಂಟ್ಲಿ ಲಿಮೋವರೆಗೆ, ಪ್ರತಿ ಕಾರು ತನ್ನದೇ ಆದ ಕಥೆಯನ್ನು ಹೊಂದಿದೆ. ರಜನಿ ಅವರು ದುಬಾರಿ ಕಾರುಗಳ ಒಡೆಯನಾಗಿದ್ದರು ಇಂದಿಗೂ ಸಾಮಾನ್ಯ ಕಾರುಗಳಲ್ಲಿ ಕಾಣಿಸಿಕೊಂಡ ಉದಾಹರಣೆಗಳಿವೆ.

superstar-rajinikanths-car-collection-bmw-benz-and-rolls-royce

1. ಪ್ರೀಮಿಯರ್ ಪದ್ಮಿನಿ: ರೋಲ್ಸ್ ರಾಯ್ಸ್ ಮತ್ತು ಲಂಬೋರ್ಘಿನಿ ಕಾರುಗಳಿಗಿಂತ ಮೊದಲು, ಪ್ರೀಮಿಯರ್ ಪದ್ಮಿನಿ ರಜಿನಿ ಬಳಿ ಇತ್ತು. ರಜನಿಕಾಂತ್ ಅವರ ಮೊದಲ ಕಾರು ಇದಾಗಿದ್ದು, 80 ರ ದಶಕದ ಭಾರತೀಯ ರಸ್ತೆಗಳ ಪ್ರಧಾನ ಕಾರು ಮತ್ತು ಒಮ್ಮೆ "ಬಡವರ ಫಿಯೆಟ್" ಎಂದು ಕರೆಯಲ್ಪಟ್ಟ ಕಾರಿದು. ತಲೈವಾಗೆ ತುಂಬಾ ಇಷ್ಟವಾದ ಕಾರಾಗಿದೆ. ಅವರು ಇನ್ನೂ ಅದನ್ನು ಹೊಂದಿದ್ದಾರೆ ಎನ್ನಲಾಗಿದೆ.

2. BMW X5: ರೂ. 1.09 ಕೋಟಿ ಬೆಲೆಯ BMW X5 SUV ಅನ್ನು 2017 ರಲ್ಲಿ ರಜನಿಕಾಂತ್ ಅವರು ಖರೀದಿಸಿದ್ದರು ಎನ್ನಲಾಗಿದೆ. 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೋ, ಪನೋರಮಿಕ್ ಸನ್‌ರೂಫ್ ಮತ್ತು ಆಕರ್ಷಕವಾದ ಕಾಕ್‌ಪಿಟ್ ಕಾರನ್ನು ಐಷರಾಮಿಯಾಗಿ ಮಾಡುತ್ತದೆ. ಇದು ಕೂಡ ರಜಿನಿಕಾಂತ್ ಅವರ ಫೇವರೆಟ್ ಕಾರಾಗಿದೆ.

superstar-rajinikanths-car-collection-bmw-benz-and-rolls-royce

3. BMW X7: ರೂ. 1.33 ಕೋಟಿ ಬೆಲೆಯ BMW X7 ಅನ್ನು ಉಡುಗೊರೆಯಾಗಿ ರಜಿನಿಕಾಂತ್ ಅವರಿಗೆ ನೀಡಲಾಗಿದೆ. ಇತ್ತೀಚೆಗೆ ಜೈಲರ್‌ ಸಿನಿಮಾ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ, ಸನ್ ಗ್ರೂಪ್‌ನ ಕಲಾನಿಧಿ ಮಾರನ್ ರಜನಿಕಾಂತ್‌ಗೆ BMW X7 ಅನ್ನು ಉಡುಗೊರೆಯಾಗಿ ನೀಡಿದ್ದರು. ಹರ್ಮನ್ ಕಾರ್ಡನ್ ಸರೌಂಡ್ ಸಿಸ್ಟಮ್ ಮತ್ತು ದೊಡ್ಡದಾದ ಟಚ್‌ಸ್ಕ್ರೀನ್ ಹಾಗೂ ತುಂಬಾ ಐಷಾರಾಮಿ ಇಂಟೀರಿಯರ್ ಹೊಂದಿರುವ ಕಾರು ಇದಾಗಿದೆ.

4. ಮರ್ಸಿಡಿಸ್-ಬೆನ್ಜ್ ಜಿ-ವ್ಯಾಗನ್: ರೂ. 2.55 ಕೋಟಿಯಿಂದ ರೂ. 4 ಕೋಟಿ ಬೆಲೆಯಲ್ಲಿ ಲಭ್ಯವಿರುವ ಮರ್ಸಿಡಿಸ್ - ಬೆನ್ಜ್ ಜಿ - ವ್ಯಾಗನ್, ಶ್ರೀಮಂತರ ಫೇವರೆಟ್ ಎಸ್‌ಯುವಿಯಾಗಿದೆ. ರಜಿನಿಕಾಂತ್ ಅವರು ತಮ್ಮ ಸಿನಿಮಾ ಮಾತ್ರವಲ್ಲದೆ ನಿಜ ಜೀವನದಲ್ಲೂ ಸಾಹಸ ಮಾಡಲು ಬಯಸಿದಾಗ ಮರ್ಸಿಡಿಸ್ ಜಿ - ವ್ಯಾಗನ್‌ನಲ್ಲಿ ಸವಾರಿ ಮಾಡಬಹುದು.

superstar-rajinikanths-car-collection-bmw-benz-and-rolls-royce

ಈ ಆಫ್ - ರೋಡಿಂಗ್ ಎಸ್‌ಯುವಿ ಐದು-ಸ್ಟಾರ್ ಹೋಟೆಲ್‌ನಂತಹ ಇಂಟೀರಿಯರ್ ಅನ್ನು ಹೊಂದಿದೆ. ಮಸಾಜ್ ಸೀಟುಗಳು, ಬರ್ಮೆಸ್ಟರ್ 3D ಸರೌಂಡ್ ಸೌಂಡ್ ಮತ್ತು ಹಿಂಭಾಗದ ಪ್ರಯಾಣಿಕರ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್ ಮತ್ತು ಆಕರ್ಷಕವಾದ ಕಾಕ್‌ಪಿಟ್ ಈ ಕಾರಿನ ಪ್ರಮುಖಾಂಶಗಳಾಗಿವೆ. ಈ ಕಾರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ.

5. ರೋಲ್ಸ್ ರಾಯ್ಸ್ ಫ್ಯಾಂಟಮ್: ರೂ 8.99 ಕೋಟಿ - ರೂ. 10.48 ಕೋಟಿ ನಡುವೆ ಇರುವ ಸಣ್ಣ ಅರಮನೆಯಂತಹ ಈ ಕಾರು, ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾಗಿದೆ. ನಿಶಬ್ದ ಕ್ಯಾಬಿನ್, ಡಬಲ್-ಲ್ಯಾಮಿನೇಟೆಡ್ ಗ್ಲಾಸ್ ಮತ್ತು ನಿಜವಾದ ರಾಜಮನೆತನಕ್ಕೆ ಸೂಕ್ತವಾದ ವೈಶಿಷ್ಟ್ಯಗಳೊಂದಿಗೆ ಎಂತವರ ಗಮನ ಸೆಳೆಯುವ ಫೀಚರ್ಸ್‌ಗಳನ್ನು ಹೊಂದಿದೆ. ಇದು ಕೂಡ ರಜಿನಿಯವರ ಫೇವರೆಟ್ ಕಾರಾಗಿದೆ.

6. ರೋಲ್ಸ್ ರಾಯ್ಸ್ ಘೋಸ್ಟ್: ರೂ. 6.95 ಕೋಟಿ ನಿಂದ ರೂ. 7.95 ಕೋಟಿ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಈ ಕಾರು, ಐಷಾರಾಮಿ ಅನುಭವ ನೀಡುತ್ತದೆ. ಫ್ಯಾಂಟಮ್ ತುಂಬಾ ಆಕರ್ಷಕವಾಗಿ ಕಾಣುವ ರಜನಿಯವರ ರೋಲ್ಸ್ ರಾಯ್ಸ್ ಘೋಸ್ಟ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಐಷಾರಾಮಿಯಾಗಿರುವ ಇದರ ಡ್ಯಾಶ್‌ಬೋರ್ಡ್ 850 ಕ್ಕೂ ಹೆಚ್ಚು ನಕ್ಷತ್ರಗಳು ಮತ್ತು 90,000 ಲೇಸರ್ - ಕೆತ್ತಿದ ಚುಕ್ಕೆಗಳಿಂದ ಹೊಳೆಯುತ್ತದೆ.

7. ಕಸ್ಟಮ್ - ನಿರ್ಮಿತ ಬೆಂಟ್ಲಿ ಲಿಮೋಸಿನ್: ರೂ. 22 ಕೋಟಿ ಹೊಂದಿರುವ ಈ ಕಾರು, ಕೇವಲ ಕಾರು ಮಾತ್ರವಲ್ಲ - ಇದು ರಜನಿಕಾಂತ್ ಅವರ ಪೌರಾಣಿಕ ಸ್ಥಾನಮಾನಕ್ಕೆ ಒಂದು ಚಲಿಸುವ ಸ್ಮಾರಕವಾಗಿದೆ. ಇದು ಕಸ್ಟಮ್-ನಿರ್ಮಿತ ಒಳಾಂಗಣಗಳು, ವಿಸ್ತೃತ ಬಾಡಿವರ್ಕ್ ಮತ್ತು ಹೆಚ್ಚಿನ ಐಷಾರಾಮಿ ಹೋಟೆಲ್ ಸೂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಸೌಕರ್ಯಗಳನ್ನು ಒಳಗೊಂಡಿದೆ. ಕಸ್ಟಮ್ - ನಿರ್ಮಿತ ಬೆಂಟ್ಲಿ ಲಿಮೋಸಿನ್, ರೂ 22 ಕೋಟಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ.

8. ಲಂಬೋರ್ಘಿನಿ ಉರುಸ್: ಇದರ ಬೆಲೆಯು ರೂ. 4.18 ಕೋಟಿ ನಿಂದ ರೂ. 4.57 ಕೋಟಿಯಿದೆ. ರಜನಿಕಾಂತ್ ಅವರ ಬಳಿ ಇಂತಹದೊಂದು ಕಾರಿದೆ ಎಂದು ಬಹುತೇಕರಿಗೆ ಗೊತ್ತೇ ಇಲ್ಲ. ಏಕೆಂದರೆ ತಮ್ಮ ಲಂಬೋರ್ಘಿನಿ ಉರುಸ್ ಕಾರಿನಲ್ಲಿ ಓಡಾಡದಿರುವುದು ಇದಕ್ಕೆ ಕಾಣವಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸದೇ ಇರಬಹುದು, ಆದರೆ ಅಭಿಮಾನಿಗಳು ಈ ಕಾರನ್ನು ಹಲವು ಬಾರಿ ರಜಿನಿ ಅವರೊಂದಿಗೆ ಇರುವಾಗ ಗುರುತಿಸಿದ್ದಾರೆ.

ಇದು 4.0 - ಲೀಟರ್ ಟ್ವಿನ್ - ಟರ್ಬೊ V8 ಎಂಜಿನ್ ಹೊಂದಿರುವ ರೇಜಿಂಗ್ ಬುಲ್ ಆಗಿದ್ದು, ಇದು 3.6 ಸೆಕೆಂಡುಗಳಲ್ಲಿ ಗಂಟೆಗೆ 0 - 100 ಕಿ.ಮೀ ವೇಗವನ್ನು ತಲುಪುತ್ತದೆ. ಇದು ರಜಿನಿ ಬಳಿಯಿರುವ ಏಕೈಕ ಸೂಪರ್ ಕಾರ್ ಆಗಿದೆ. ಇದು ಭಾರತೀಯ ರಸ್ತೆಗಳಿಗೆ ಸೂಕ್ತವಾಗಿರದಿದ್ದರೂ ರಜಿನಿಯವರ ಕಾರು ಕ್ರೇಜ್‌ನಿಂದಾಗಿ ಅವರ ಗ್ಯಾರೇಜ್‌ನಲ್ಲಿ ಸಂಗ್ರಹಿಸಿಡಲಾಗಿದೆ.

9. ಹೋಂಡಾ ಸಿವಿಕ್: ಎಲ್ಲಾ ಹೈ - ಆಕ್ಟೇನ್ ಕಾರುಗಳಲ್ಲಿ, ಹೋಂಡಾ ಸಿವಿಕ್ ಪ್ರತ್ಯೇಕ ಸಾಮಾನ್ಯ ಕಾರಾಗಿದೆ. ಈ ಕ್ಲಾಸಿಕ್ ಸೆಡಾನ್ ಒಂದು ಕಾಲದಲ್ಲಿ ಭಾರತದಲ್ಲಿ ಪ್ರೀಮಿಯಂ ಆಯ್ಕೆಯ ಕಾರಾಗಿತ್ತು. ಆದರೆ ತುಂಬಾ ಶ್ರೀಮಂತರಿಗೆ ಇದೊಂದು ಅಗ್ಗದ ಕಾರೆಂದು ಕೂಡ ಹೇಳಬಹುದು. ಈ ಹೋಂಡಾ ಸಿವಿಕ್ ಕಾರಿನಲ್ಲು ಹಲವು ಬಾರಿ ರಜಿನಿಕಾಂತ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಕಾರು ಅವರ ಬಳಿ ಇಲ್ಲ ಎಂದು ಹೇಳಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 8, 2025, 16:06 [IST]
English summary
Superstar rajinikanths car collection bmw benz and rolls royce
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+