ಕಾರಿನಲ್ಲಿ ದೋಷ: ಗ್ರಾಹಕನಿಗೆ ರೂ.42 ಲಕ್ಷ ಪರಿಹಾರ ನೀಡಲು ಕಂಪನಿಗೆ ಸುಪ್ರೀಂ ಕೋರ್ಟ್ ಅದೇಶ

ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ನಷ್ಟದ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಕೂಡ ಸ್ಥಗಿತಗೊಳಿಸಿತ್ತು. ಈ ಫೋರ್ಡ್ (Ford) ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ (Supreme Court) ಫೋರ್ಡ್ ಇಂಡಿಯಾ ಲಿಮಿಟೆಡ್‌ಗೆ ಉತ್ಪಾದನಾ ದೋಷಗಳಿರುವ ಕಾರನ್ನು ಮಾರಾಟ ಮಾಡಿರುವುದಕ್ಕೆ ಗ್ರಾಹಕರಿಗೆ ಪರಿಹಾರವಾಗಿ 42 ಲಕ್ಷ ರೂ. ನೀಡಲು ಆದೇಶಿಸಿದೆ. ಗ್ರಾಹಕರ ಮಾಲೀಕತ್ವದ ಫೋರ್ಡ್ ಎಂಡೀವರ್ ಟೈಟಾನಿಯಂ ರೂಪಾಂತರದ 3.4 ಲೀಟರ್ ಎಂಜಿನ್ ಸಂಬಂಧಿಸಿದ ಸಮಸ್ಯೆಯಾಗಿದೆ. ಇದೊಂದು ಗಂಭೀರವಾದ ಸಮಸ್ಯೆಯಾಗಿದೆ.

Ford

ಕಾರು ಬಳಕೆಯ ಆರಂಭದಿಂದಲೂ ತೈಲ ಸೋರಿಕೆ ಸೇರಿದಂತೆ ವಿವಿಧ ದೋಷಗಳನ್ನು ತೋರಿಸಿ ಮಾಲೀಕರು ಪಂಜಾಬ್ ರಾಜ್ಯ ಗ್ರಾಹಕ ಆಯೋಗದ ಮುಂದೆ ಗ್ರಾಹಕ ದೂರು ದಾಖಲಿಸಿದ್ದರು. ರಾಜ್ಯ ಆಯೋಗವು ಇಂಜಿನ್ ಅನ್ನು ಉಚಿತವಾಗಿ ಬದಲಾಯಿಸಲು ಮತ್ತು ದಿನಕ್ಕೆ 2,000 ರೂಪಾಯಿಗಳನ್ನು ಪಾವತಿಸಲು ಕಂಪನಿಗೆ ಆದೇಶಿಸಿತು.

ರಾಷ್ಟ್ರೀಯ ಆಯೋಗವೂ ಈ ಆದೇಶವನ್ನು ದೃಢಪಡಿಸಿತು. ನಂತರ ಫೋರ್ಡ್ ಇಂಡಿಯಾ ಕಂಪನಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿಯಿರುವಾಗ, ಫೋರ್ಡ್ ಕಾರಿನ ಎಂಜಿನ್ ಅನ್ನು ಬದಲಾಯಿಸಿತು. ಆದರೆ, ಇಂಜಿನ್ ಬದಲಾಯಿಸಿದ ನಂತರವೂ ಕಾರು ಸಂಚಾರಕ್ಕೆ ಯೋಗ್ಯವಾಗಿಲ್ಲ. ವಾಹನದಲ್ಲಿ ನಾನಾ ಸಮಸ್ಯೆಗಳಿದ್ದು, ಸುಗಮ ಚಾಲನೆಗೆ ತೊಂದರೆಯಾಗಿದೆ ಎನ್ನುತ್ತಾರೆ ಮಾಲೀಕರು.

Ford

ಈ ಸಂಗತಿಗಳನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಫೋರ್ಡ್ ಮಾಲೀಕರಿಗೆ 42 ಲಕ್ಷ ರೂ ಪಾವತಿಸಲು ಆದೇಶಿಸಿದೆ. ರಾಜ್ಯ ಆಯೋಗದ ಆದೇಶದ ಮೇರೆಗೆ ಕಂಪನಿಯು ಈಗಾಗಲೇ ರೂ.6 ಲಕ್ಷಗಳನ್ನು ಪಾವತಿಸಿದ್ದರಿಂದ, ಉಳಿದ ರೂ.36 ಲಕ್ಷಗಳನ್ನು ಫೋರ್ಡ್ ಪಾವತಿಸಬೇಕಾಗಿದೆ. ಇದಲ್ಲದೆ, ವಾಹನದ ವಿಮೆಗೆ 87,000 ರೂಪಾಯಿಗಳನ್ನು ಪಾವತಿಸುವಂತೆ ಸೂಚಿಸಲಾಗಿದೆ.

ಇನ್ನು ಫೋರ್ಡ್ ದೇಶದಲ್ಲಿ ಉತ್ಪಾದನೆಯನ್ನು ನಿಲ್ಲಿಸಿದಾಗ ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 2 ಕ್ಕಿಂತ ಕಡಿಮೆಯಿತ್ತು, ಎರಡು ದಶಕಗಳಿಗೂ ಹೆಚ್ಚು ಕಾಲ ಲಾಭ ಗಳಿಸಲು ಹೆಣಗಾಡಿತು. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಫೋರ್ಡ್ ಟಾರಸ್ ಹೊರಹೋಗುವ ನ್ಯೂ ಜನರೇಷನ್ ಮಧ್ಯಪ್ರಾಚ್ಯದಲ್ಲಿ ನಂಬಲಾಗದಷ್ಟು ಜನಪ್ರಿಯವಾದ ವಾಹನವಾಗುತ್ತಿದೆ.

ಯುಎಇ, ಸೌದಿ ಅರೇಬಿಯಾ, ಓಮನ್ ಮತ್ತು ಬಹ್ರೇನ್‌ನಲ್ಲಿ ಬಲವಾದ ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ. ಭಾರತದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿ ನಿರ್ಗಮಿಸಲು ಫೋರ್ಡ್ ಘೋಷಿಸಿತ್ತು. ಫೋರ್ಡ್ ಮೋಟಾರ್ ಕಂಪನಿಯು ಭಾರತದಲ್ಲಿ ಕಾರು ಮಾರಾಟವನ್ನು ಮಾಡುವುದಿಲ್ಲ. ಭವಿಷ್ಯದಲ್ಲಿ ಈ ನಿರ್ಧಾರ ಬದಲಾಗುವ ಸಾಧ್ಯತೆಗಳು ಕೂಡ ಇದೆ ಎಂಡು ಕೂಡ ಹೇಳಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.

Article Published On: Sunday, July 9, 2023, 11:30 [IST]
English summary
Supreme court directs ford india to pay rs 42 lakhs compensation to car owner details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+