Just In
Don't Miss!
- News
ಶ್ವಾನಗಳಿಂದ ಕೊರೊನಾ ಸೋಂಕು ನಿಖರ ಪತ್ತೆ: ಅಧ್ಯಯನ ವರದಿ
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Movies
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೈಕ್ ಸ್ಟಂಟ್ ಮಾಡಿದ ಯುವತಿ ವಿರುದ್ಧ ಕ್ರಮ ಕೈಗೊಂಡ ಪೊಲೀಸರು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊದ ಆಧಾರದ ಮೇಲೆ ಸೂರತ್ ನಗರ ಪೊಲೀಸರು ಯುವತಿಯೊಬ್ಬಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸೂರತ್‌ನ ಬಾರ್ಡೋಲಿ ಬಳಿಯ ಬಾಬೆನ್ ಎಂಬ ಸಣ್ಣ ಹಳ್ಳಿಯ ಸಂಜನಾ (ಹೆಸರನ್ನು ಬದಲಿಸಲಾಗಿದೆ) ಎಂಬಾಕೆಯ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

ಆಕೆಯನ್ನು ಸ್ನೇಹಿತರು ಪಿಂಚಿ ಪ್ರಸಾದ್ ಎಂದು ಕರೆಯುತ್ತಾರೆ ಎಂದು ತಿಳಿದು ಬಂದಿದೆ. ಪೊಲೀಸರು ಆಕೆಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ದ್ವಿಚಕ್ರ ವಾಹನಗಳ ಗೀಳು ಹೊಂದಿರುವ ಪಿಂಚಿ ಪ್ರಸಾದ್ ಇತ್ತೀಚೆಗೆ ಕೆಟಿಎಂ ಆರ್‌ಸಿ ಹಾಗೂ ಕೆಟಿಎಂ ಡ್ಯೂಕ್ ಬೈಕ್‌ಗಳೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದಳು.

ಬೈಕ್ ಚಾಲನೆ ವೇಳೆ ಕೈಗಳನ್ನು ಮೇಲಕ್ಕೆತ್ತಿರುವುದು ಹಾಗೂ ಅತಿ ವೇಗದಲ್ಲಿ ಸಾಗುವಾಗ ಶರ್ಟ್ ಕಾಲರ್ ಎತ್ತುವುದು ಸೇರಿದಂತೆ ವಿವಿಧ ರೀತಿಯ ಸ್ಟಂಟ್'ಗಳನ್ನು ಮಾಡಿದ್ದಾಳೆ. ಆಕೆಯ ಈ ಘನ ಕಾರ್ಯಗಳಿಗಾಗಿ ಪೊಲೀಸರು ಆಕೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪಿಂಚಿ ಪ್ರಸಾದ್ ಅವರು ತಾನು ಮಾಡುವ ಸ್ಟಂಟ್'ಗಳ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾಳೆ. ಅದರಂತೆ ತನ್ನ ಇತ್ತೀಚಿನ ವೀಡಿಯೊವನ್ನು ಸಹ ಇನ್ಸ್ಟಾಗ್ರಾಮ್'ನಲ್ಲಿ ಶೇರ್ ಮಾಡಿದ್ದಾಳೆ.

ಈ ವೀಡಿಯೊ ಮೂಲಕವೇ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪಿಂಚಿ ಪ್ರಸಾದ್ ಹಲವಾರು ಫಾಲೋವರ್'ಗಳನ್ನು ಹೊಂದಿದ್ದಾಳೆ. ವಿಶೇಷವೆಂದರೆ ಪಿಂಚಿ ಪ್ರಸಾದ್ ಯುವಕರು ಸಹ ಮಾಡಲು ಸಾಧ್ಯವಾಗದ ಸ್ಟಂಟ್'ಗಳನ್ನು ಮಾಡುತ್ತಾಳೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಕೆಯ ಫಾಲೋವರ್'ಗಳು ಆಕೆ ಮಾಡಿರುವ ಸ್ಟಂಟ್ ವೀಡಿಯೊಗಳನ್ನು ಟ್ರೆಂಡ್ ಮಾಡಿದ್ದಾರೆ. ಸೂರತ್ ಪೊಲೀಸರು ಪಿಂಚಿ ಪ್ರಸಾದ್ ವಿರುದ್ಧ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿರುವುದು, ಇತರರ ಜೀವಕ್ಕೆ ಅಪಾಯವುಂಟು ಮಾಡುವುದು, ಹೆಲ್ಮೆಟ್ ಧರಿಸದೇ ಇರುವುದು, ಫೇಸ್ ಮಾಸ್ಕ್ ಧರಿಸದೇ ಇರುವುದು, ವೇಗವಾಗಿ ವಾಹನ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಹಿಂದೆಯೂ ಸಹ ಪಿಂಚಿ ಪ್ರಸಾದ್ ಹಲವು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ತಿಳಿದು ಬಂದಿದೆ. ಈ ಕಾರಣಕ್ಕೆ ಸೂರತ್ ಪೊಲೀಸರು ಪಿಂಚಿ ಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವೀಡಿಯೊಗಳ ಆಧಾರದ ಮೇಲೆ ಪೊಲೀಸರು ಇದುವರೆಗೂ ಹಲವಾರು ಜನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ರೀತಿಯ ಹಲವು ಘಟನೆಗಳು ಕೇರಳದಲ್ಲಿ ನಡೆದಿವೆ.

ಕೆಲವು ತಿಂಗಳುಗಳ ಹಿಂದೆ ಇದೇ ರೀತಿಯ ಯುವಕನೊಬ್ಬ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆದ ನಂತರ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಚಿತ್ರಕೃಪೆ: ಕನೆಕ್ಟ್ ಗುಜರಾತ್ ಟಿವಿ