ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ ನಂತರ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜನಪ್ರಿಯರಾದರು. ಈ ಒಂದೇ ಒಂದು ಚಿತ್ರದಿಂದ ಅವರು ರಾತ್ರೋರಾತ್ರಿ ಸ್ಟಾರ್ ಆದರು.

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಿಂಗ್ ರಜಪೂತ್ ರವರ ತಂದೆ, ಸುಶಾಂತ್ ರವರದು ಆತ್ಮಹತ್ಯೆಯಲ್ಲ ಯಾರೋ ಆತನನ್ನು ಕೊಂದಿದ್ದಾರೆ ಎಂದು ಬಿಹಾರ ರಾಜ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿರುವ ಬಿಹಾರದ ಪಾಟ್ನಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ಸುಶಾಂತ್ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಆದೇಶ ನೀಡಿದೆ. ಇದರ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ರವರು ಬಳಸುತ್ತಿದ್ದ ಐಷಾರಾಮಿ ಕಾರುಗಳನ್ನು ಅವರ ತಂದೆಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಎರಡು ದಿನಗಳ ಹಿಂದೆ ಸುಶಾಂತ್ ಸಿಂಗ್ ರವರು ಬಳಸುತ್ತಿದ್ದ ಎರಡು ರೇಂಜ್ ರೋವರ್ ಇವೊಕ್ ಹಾಗೂ ಮಾಸೆರೋಟಿ ಕ್ವಾಟ್ರೋಪೋರ್ಟ್ ಕಾರುಗಳನ್ನು ಅವರ ತಂದೆಗೆ ಹಸ್ತಾಂತರಿಸಲಾಯಿತು.

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಈ ಎರಡು ಕಾರುಗಳೊಂದಿಗೆ ಸುಶಾಂತ್ ರವರು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇವುಗಳು ಸುಶಾಂತ್ ರವರ ನೆಚ್ಚಿನ ಕಾರುಗಳು ಎಂದು ಅವರ ಸ್ನೇಹಿತರು ಹಾಗೂ ಸಂಬಂಧಿಕರು ನೆನಪಿಸಿಕೊಳ್ಳುತ್ತಾರೆ. ಈ ಕಾರುಗಳನ್ನು ಸ್ವೀಕರಿಸಿದ ನಂತರ ಸುಶಾಂತ್ ಅವರ ಅಗಲಿಕೆಯು ಅವರ ಆತ್ಮೀಯರನ್ನು ತೀವ್ರವಾಗಿ ಕಾಡುತ್ತಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಈ ಎರಡೂ ಕಾರುಗಳು ದುಬಾರಿ ಬೆಲೆಯನ್ನು ಹೊಂದಿವೆ. ರೇಂಜ್ ರೋವರ್ ಇವೊಕ್ ಕಾರಿನ ಬೆಲೆ ರೂ.54.94 ಲಕ್ಷಗಳಾದರೆ, ಮಾಸೆರೋಟಿ ಕ್ವಾಟ್ರೋಪೋರ್ಟ್ ಕಾರಿನ ಬೆಲೆ ರೂ.1.74 ಕೋಟಿಗಳಾಗಿದೆ.

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಈ ಕಾರುಗಳು ಸುಶಾಂತ್ ಅವರ ಕುಟುಂಬಕ್ಕೆ ನೆನಪುಗಳಾಗಿ ಉಳಿದಿವೆ. ಸುಶಾಂತ್ ಅವರು ಸಿನಿಮಾ ಜೊತೆಗೆ ಕಾರುಗಳ ಬಗೆಯೂ ಕ್ರೇಜ್ ಹೊಂದಿದ್ದರು. ಅವರು ದುಬಾರಿ ಬೆಲೆಯ ಕಾರು ಹಾಗೂ ಬೈಕುಗಳನ್ನು ಖರೀದಿಸಿದ್ದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ರೇಂಜ್ ರೋವರ್ ಇವೊಕ್ ಫೋರ್ ವ್ಹೀಲ್ ಡ್ರೈವ್ ಹೊಂದಿದೆ. ಈ ಕಾರು ಎಲ್ಲಾ ರೀತಿಯ ರಸ್ತೆಗಳಲ್ಲಿ ಸರಾಗವಾಗಿ ಚಲಿಸುತ್ತದೆ. ಈ ಕಾರಿನಲ್ಲಿರುವ 2.0 ಲೀಟರಿನ ಎಂಜಿನ್ 247 ಬಿಹೆಚ್ ಪಿ ಪವರ್ ಹಾಗೂ 365 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಮಾಸೆರೋಟಿ ಕ್ವಾಟ್ರೋಪೋರ್ಟ್ ಕಾರಿನಲ್ಲಿ 3.0-ಲೀಟರಿನ ವಿ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 275 ಬಿಹೆಚ್ ಪಿ ಪವರ್ ಹಾಗೂ 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 6.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಗನ ಕಾರುಗಳನ್ನು ಪಡೆದ ಸುಶಾಂತ್ ಸಿಂಗ್ ರಜಪೂತ್ ತಂದೆ

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 250 ಕಿ.ಮೀಗಳಾಗಿದೆ. ಸುಶಾಂತ್ ಸಿಂಗ್ ರಜಪೂತ್ ರವರು ತಮ್ಮ ದಿನ ನಿತ್ಯದ ಸಂಚಾರಕ್ಕಾಗಿ ಈ ವಿಶೇಷ ಕಾರನ್ನು ಬಳಸುತ್ತಿದ್ದರು. ಅವರು ಸಾಯುವ ಮುನ್ನ ದಿನದವರೆಗೂ ಈ ಕಾರುಗಳು ಅವರ ಬಳಿಯಿದ್ದವು.

Most Read Articles

Kannada
English summary
Sushant Singh Rajput's cars handed over to his father. Read in Kannada.
Story first published: Friday, August 21, 2020, 9:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X