ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ವಾಹನಗಳನ್ನು ಅತಿಯಾಗಿ ಚಾಲನೆ ಮಾಡುವುದರಿಂದ ವಾಹನಗಳಲ್ಲಿರುವವರ ಜೀವಕ್ಕೆ ಮಾತ್ರವಲ್ಲದೇ ಇತರರ ಜೀವಕ್ಕೂ ಅಪಾಯವುಂಟಾಗುತ್ತದೆ. ಕೆಲವೊಮ್ಮೆ ವಾಹನಗಳ ಅತಿಯಾದ ವೇಗದಿಂದಾಗಿ ಪ್ರಾಣಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತವೆ.

ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ಇದೇ ರೀತಿಯ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದೆ. ಮಾಹಿತಿಗಳ ಪ್ರಕಾರ ಈ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಜನವರಿ 6ರ ರಾತ್ರಿ ಸಂಭವಿಸಿದೆ. ವೇಗವಾಗಿ ಬಂದ ಕಾರು 12 ವರ್ಷದ ಹುಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಈ ಘಟನೆಯಲ್ಲಿ ಹುಲಿ ಪ್ರಾಣ ಕಳೆದುಕೊಂಡಿದೆ.

ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ಹುಲಿಗೆ ಡಿಕ್ಕಿ ಹೊಡೆದಿರುವ ವಾಹನವು ರಾಮ್‌ನಗರ-ನೈನಿತಾಲ್ ಹೈವೇಯಿಂದ ಕಾರ್ಬೆಟ್ ಟೈಗರ್ ರಿಸರ್ವ್ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ಅಪಘಾತ ಸಂಭವಿಸಿದ 150 ಮೀಟರ್ ದೂರದಲ್ಲಿ ಹುಲಿಯ ಮೃತ ದೇಹವು ಪತ್ತೆಯಾಗಿದೆ. ಘಟನೆಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಲಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ಪೊಲೀಸರು ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕನ ವಿರುದ್ಧ ಅರಣ್ಯ ಜೀವ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಜೊತೆಗೆ ಈ ಘಟನೆಯಲ್ಲಿ ಭಾಗಿಯಾಗಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ಈ ಬಗ್ಗೆ ಮಾಹಿತಿ ನೀಡಿರುವ ಫತೇಪುರ ಅರಣ್ಯ ಶ್ರೇಣಿಯ ಅಧಿಕಾರಿ ಖಯಾಲಿ ರಾಮ್ ಆರ್ಯರವರು ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ರಾಮ್‌ನಗರ-ನೈನಿತಾಲ್ ಹೆದ್ದಾರಿಯ ಭಕ್ರ ಸೇತುವೆ ಬಳಿ ಎಸ್‌ಯುವಿಯು ಹುಲಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದರು.

ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಇಲಾಖೆಯ 2020ರ ಜುಲೈ ತಿಂಗಳ ವರದಿಯ ಪ್ರಕಾರ, ಕಾರ್ಬೆಟ್ ರಿಸರ್ವ್ ಭಾರತದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಹುಲಿಗಳನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅತಿ ವೇಗದಲ್ಲಿ ಚಲಿಸಿ ಹುಲಿಯ ಸಾವಿಗೆ ಕಾರಣನಾದ ಕಾರು ಚಾಲಕ

ಕಾರ್ಬೆಟ್ ರಿಸರ್ವ್‌ನಲ್ಲಿ ಈ ಹಿಂದೆಯೂ ಈ ರೀತಿಯ ಘಟನೆಗಳು ನಡೆದಿದ್ದವು. ಆಗ ಸಹ ಹುಲಿಗಳು ಬಲಿಯಾಗಿದ್ದವು. ಈ ಹಿಂದೆ ಹುಲಿಗಳು ಮನುಷ್ಯರ ಮೇಲೆ ದಾಳಿ ಮಾಡಿದ್ದ ಅನೇಕ ಪ್ರಕರಣಗಳು ವರದಿಯಾಗಿದ್ದವು.

Most Read Articles

Kannada
English summary
SUV with over speed kills Tiger in Corbett Tiger Reserve. Read in Kannada.
Story first published: Saturday, January 9, 2021, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X