Taapsee Pannu: ಗಣೇಶ ಹಬ್ಬ.. ಕೋಟಿ - ಕೋಟಿ ಬೆಲೆಯ ಹೊಸ ಕಾರು ನಟಿ ತಾಪ್ಸಿ ಮನೆಗೆ!
ಬಾಲಿವುಡ್ ಹಾಗೂ ಟಾಲಿವುಡ್ ಸಿನಿರಂಗದಲ್ಲಿ ಜನಪ್ರಿಯವಾಗಿರುವ ನಟಿ ತಾಪ್ಸಿ ಪನ್ನು (Taapsee Pannu) ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟನೆಗಾಗಿ ಹಲವು ಫಿಲಂಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ, ದುಬಾರಿ ಬೆಲೆಯ ಹೊಚ್ಚ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.
ನಟಿ ತಾಪ್ಸಿ ಪನ್ನು ದೇಶದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 (Mercedes Maybach GLS 600) ಎಸ್‌ಯುವಿಯನ್ನು ಕೊಂಡುಕೊಂಡಿದ್ದಾರೆ. ನಿನ್ನೆ (ಸೆಪ್ಟೆಂಬರ್ 17) ಮುಂಬೈನ ತಮ್ಮ ನಿವಾಸದಲ್ಲಿ ನೂತನ ಕಾರನ್ನು ವಿತರಣೆ ಪಡೆದಿದ್ದಾರೆ. ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಎಸ್‌ಯುವಿ, ಪಲ್ಲಾಡಿಯಮ್ ಸಿಲ್ವರ್ ಬಣ್ಣವನ್ನು ಹೊಂದಿದೆ.

ಜರ್ಮನಿಯ ವಾಹನ ತಯಾರಕ ಮರ್ಸಿಡಿಸ್ ತಯಾರಿಸುವ ದುಬಾರಿ ಕಾರುಗಳಲ್ಲಿ ಮೇಬ್ಯಾಕ್ ಜಿಎಲ್ಎಸ್ 600 ಪ್ರಮುಖವಾಗಿದ್ದು, ಭಾರತದಲ್ಲಿ ರೂ.2.92 ಕೋಟಿ ಬೆಲೆಯನ್ನು ಪಡೆದಿದೆ. 2021ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಕಂಪನಿಯು 50 ಯುನಿಟ್ ಮಾತ್ರ ಸೇಲ್ ಮಾಡಲು ತೀರ್ಮಾನಿಸಿತ್ತು. ಅವೆಲ್ಲ ಈಗಾಗಲೇ ಮಾರಾಟವಾಗಿದ್ದು, ಈಗ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಬೇಕೆಂದ್ರೆ ಒಂದಷ್ಟು ತಿಂಗಳು ಕಾಯಬೇಕು.
ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600, ಶಕ್ತಿಯುತ 3982 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 6500 rpmನಲ್ಲಿ 549.81 bhp ಗರಿಷ್ಠ ಪವರ್ ಹಾಗೂ 4500 rpmನಲ್ಲಿ 730 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

4 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಈ ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, ಅಬ್ಸಿಡಿಯನ್ ಬ್ಲ್ಯಾಕ್, ಪೋಲಾರ್ ವೈಟ್, ಕ್ಯಾವನ್‌ಸೈಟ್ ಬ್ಲೂ, ಡಿಸೈನೊ ಡೈಮಂಡ್ ವೈಟ್ ಬ್ರೈಟ್, ಮೊಜಾವೆ ಸಿಲ್ವರ್, ಡಿಸೈನೊ ಹಯಸಿಂತ್ ರೆಡ್, ಸೆಲೆನೈಟ್ ಗ್ರೇ ಸೇರಿದಂತೆ 14 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿದಾರರಿಗೆ ದೊರೆಯುತ್ತದೆ.
ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಮಲ್ಟಿ - ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ರೇರ್ ಮಿರರ್, ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಅಲಾಯ್ ವೀಲ್ಸ್, ಫಾಗ್ ಲೈಟ್ಸ್, ಪವರ್ ವಿಂಡೋಸ್ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದಲ್ಲೂ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600, 8 ಏರ್‌ಬ್ಯಾಗ್ಸ್, TPMS (ಟೈರ್ ಫ್ರೆಶರ್ ಮಾನಿಟರಿಂಗ್ ಸಿಸ್ಟಂ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್, ಆಫ್-ರೋಡ್ ಡ್ರೈವಿಂಗ್ ಮೋಡ್, ಪ್ರಿ-ಸೇಫ್ ಸಿಸ್ಟಮ್, ಕಾರ್ ವಾಶ್ ಮೋಡ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ) ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಅನ್ನು ಹೊಂದಿದೆ.
ಇನ್ನು, ನಟಿ ತಾಪ್ಸಿ ಪನ್ನು ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಗ್ಯಾರೇಜ್ ನಲ್ಲಿ ಮರ್ಸಿಡಿಸ್ ಜಿಎಲ್ಇ 250-ಡಿ (Mercedes GLE 250-D), ಬಿಎಂಡಬ್ಲ್ಯೂ ಎಕ್ಸ್1 (BMW X1), ಜೀಪ್ ಕಂಪಾಸ್ (Jeep Compass), ಆಡಿ ಎ8ಎಲ್ (Audi A8L) ಹಾಗೂ ಬಿಎಂಡಬ್ಲ್ಯೂ 3 ಸೀರಿಯಸ್ ಜಿಟಿ (BMW 3 Series GT) ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications