ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ವಲೈಮೈ ಚಿತ್ರದ ಅಪ್‌ಡೇಟ್‌ಗಾಗಿ ಒತ್ತಾಯಿಸುತ್ತಿದ್ದ ನಟ ತಲಾ ಅಜಿತ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಹೊರ ಬಂದಿದೆ. ತಲಾ ಅಜಿತ್ ಬೈಕಿನಲ್ಲಿ ಪ್ರವಾಸಕ್ಕೆ ತೆರಳುತ್ತಿರುವ ಚಿತ್ರಗಳು ಲಭ್ಯವಾಗಿವೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಬೃಹತ್ ಗಾತ್ರದ ಬೈಕಿನಲ್ಲಿ ತಲಾ ಅಜಿತ್ ಕುಳಿತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ವರದಿಗಳ ಪ್ರಕಾರ ತಲಾ ಅಜಿತ್ ಸಿಕ್ಕಿಂ ಪ್ರವಾಸಕ್ಕೆ ಹೋದಾಗ ಈ ಫೋಟೋಗಳನ್ನು ತೆಗೆಯಲಾಗಿದೆ. ನಟ ಅಜಿತ್ ಬೈಕಿನಲ್ಲಿ ಈ ರೀತಿ ಪ್ರವಾಸಕ್ಕೆ ತೆರಳುತ್ತಿರುವುದು ಇದೇ ಮೊದಲ ಬಾರಿಯಲ್ಲ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಈ ಹಿಂದೆಯೂ ಅವರು ಹಲವು ಬಾರಿ ಬೈಕಿನಲ್ಲಿ ಪ್ರವಾಸ ಕೈಗೊಂಡಿದ್ದರು. ಆದರೆ ಈ ಬಾರಿ ತಲಾ ಅಜಿತ್ ಬಳಸಿದ ಬೈಕ್ ಅವರ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈಗ ಬಿಡುಗಡೆಯಾಗಿರುವ ಫೋಟೋದಲ್ಲಿ ಅಜಿತ್ ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡಿದ್ದಾರೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಈ ಬೈಕ್ ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿಲ್ಲ. ಬಿಎಂಡಬ್ಲ್ಯು ಕಂಪನಿಯು 2020ರ ಏಪ್ರಿಲ್'ನಲ್ಲಿ ಈ ಬೈಕಿನ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿತು.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್, ಪ್ರೊ ಹಾಗೂ ಡೈನಾಮಿಕ್ ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಈ ಎಲ್ಲಾ ಮೂರು ಮಾದರಿಗಳಲ್ಲಿ 1170 ಸಿಸಿ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 125 ಬಿ‌ಹೆಚ್‌ಪಿ ಪವರ್ ಹಾಗೂ 125 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 16 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಈ ಬೈಕಿನ ಸ್ಟ್ಯಾಂಡರ್ಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.17.25 ಲಕ್ಷಗಳಾಗಿದೆ. ಪ್ರೊ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.20.95 ಲಕ್ಷಗಳಾದರೆ, ಡೈನಾಮಿಕ್ ಪ್ಲಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.21.30 ಲಕ್ಷಗಳಾಗಿದೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ತಲಾ ಅಜಿತ್ ದುಬಾರಿ ಬೆಲೆಯ ಈ ಬೈಕ್ ಅನ್ನು ಚಾಲನೆ ಮಾಡಿದ್ದಾರೆ. ಆದರೆ ಅವರು ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನ ಯಾವ ಮಾದರಿಯನ್ನು ಚಾಲನೆ ಮಾಡಿದರು ಎಂಬ ಮಾಹಿತಿ ಲಭ್ಯವಾಗಿಲ್ಲ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಈ ಬೈಕ್‌ 30 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಇದರಿಂದ ದೂರದ ಪ್ರಯಾಣಕ್ಕೆ ಅನುಕೂಲವಾಗುತ್ತದೆ. ಈ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸಲಾಗಿದೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್ ಗಂಟೆಗೆ ಗರಿಷ್ಠ 200 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಈ ಬೈಕ್ ಕೇವಲ 3.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗೆ ಕಾಣಿಸಿಕೊಂಡ ನಟ ಅಜಿತ್

ಈ ಬೈಕಿನಲ್ಲಿ ಡ್ಯುಪ್ಲೆಕ್ಸ್ ಟಯರ್‌ಗಳನ್ನು ಒದಗಿಸಲಾಗಿದ್ದು, ಮುಂಭಾಗದಲ್ಲಿ 19 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿ 17 ಇಂಚಿನ ವ್ಹೀಲ್'ಗಳನ್ನು ಅಳವಡಿಸಲಾಗಿದೆ. ತಲಾ ಅಜಿತ್'ರವರು ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್ ಚಾಲನೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tamil actor Thala Ajith seen with BMW R 1200 GS Adventure bike. Read in Kannada.
Story first published: Thursday, July 22, 2021, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X