Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2024ರ ವೇಳೆಗೆ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ ePlane ಕಂಪನಿಯ ಫ್ಲೈಯಿಂಗ್ ಟ್ಯಾಕ್ಸಿ
ವಾಹನ ದಟ್ಟಣೆಯಲ್ಲಿ ಪ್ರಯಾಣಿಸುವಾಗ ಅದೆಷ್ಟೋ ಜನ ಒಮ್ಮೆಯಾದರೂ ಹಾರುವ ಕಾರುಗಳಲ್ಲಿ ಪ್ರಯಾಣಿಸುವ ಕನಸನ್ನು ಹೊಂದಿರುತ್ತಾರೆ. ಹಾಲಿವುಡ್ ಸಿನಿಮಾಗಳಲ್ಲಂತೂ ಹಾರುವ ಟ್ಯಾಕ್ಸಿಗಳನ್ನು ಪ್ರೇಕ್ಷಕನಿಗೆ ತೋರಿಸುತ್ತಾ ಹಲವು ದಶಕಗಳೇ ಕಳೆದಿವೆ. ನ್ಯೂಸ್ ಚಾನಲ್‌ಗಳಲ್ಲೂ ಹಾರುವ ಟ್ಯಾಕ್ಸಿ ಪರೀಕ್ಷಾ ಹಾರಾಟದ ಸುದ್ದಿಯನ್ನು ಆಗಾಗ ನೋಡಿರುತ್ತೀರಿ.

ಇದೀಗ ಈ ಹಾರುವ ಟ್ಯಾಕ್ಸಿ ಕನಸನ್ನು ನನಸು ಮಾಡಲು ತಮಿಳುನಾಡು ಮೂಲದ ಸ್ಟಾರ್ಟಪ್ ಕಂಪನಿ ePlane ಮುಂದಾಗಿದೆ. ಮುಂದಿನ ವರ್ಷ ಹಾರುವ ವಾಣಿಜ್ಯ ಟ್ಯಾಕ್ಸಿ ಪ್ರಾರಂಭಿಸಲು ಯೋಜಿಸುತ್ತಿದೆ. ಕಂಪನಿಯು ಪ್ರಸ್ತುತ ತನ್ನ ಮೊದಲ ಫ್ಲೈಯಿಂಗ್ ಟ್ಯಾಕ್ಸಿ ಮಾದರಿ E200 ಅನ್ನು ಸಜ್ಜುಗೊಳಿಸುತ್ತಿದೆ, ಇದು 2024ರ ವೇಳೆಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದ್ದು, ಎಲ್ಲಾ ಅಂದುಕೊಂಡತೆ ಆದರೆ ಭಾರತದ ಮೊದಲ ಸಣ್ಣ ಪ್ರಮಾಣದ ಫ್ಲೈಯಿಂಗ್ ಟ್ಯಾಕ್ಸಿ ಎಂಬ ಪ್ರಶಂಸೆಗೆ ಪಾತ್ರವಾಗಲಿದೆ.

e200 ಎರಡು ಆಸನಗಳ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ಆಗಿದ್ದು, ಪೂರ್ಣ ಚಾರ್ಜ್‌ನಲ್ಲಿ 200 ಕಿ.ಮೀ.ವರೆಗೆ ಮೈಲೇಜ್ ನೀಡಲಿದೆ. ಇದು 200 ಕೆ.ಜಿ ತೂಕವನ್ನು ಹೊತ್ತು ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ಹಾರುವ ಕ್ಯಾಬ್ ನಾಲ್ಕು ಫ್ಯಾನ್‌ಗಳನ್ನು (ಪ್ರೊಪೆಲ್ಲರ್‌ಗಳು) ಹೊಂದಿದ್ದು, ಅವುಗಳಲ್ಲಿ ಎರಡು ಟೇಕ್ ಆಫ್ ಮತ್ತು ಲ್ಯಾಂಡ್‌ಗೆ ಸಹಾಯ ಮಾಡುತ್ತವೆ.

ಉಳಿದೆರಡು ಈ ವಿಮಾನವನ್ನು ಮುಂದಕ್ಕೆ ಚಲಿಸಲು ವೇಗಗೊಳಿಸಲು ಸಹಕರಿಸುತ್ತವೆ. ಈ ಹಾರುವ ಟ್ಯಾಕ್ಸಿಯನ್ನು ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಕಾರಿನಂತೆ ಚಾರ್ಜ್ ಮಾಡಬಹುದು. ಈ ಟ್ಯಾಕ್ಸಿಯಲ್ಲಿ ನಾರ್ಮಲ್ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನೂ ಕಂಪನಿ ಒದಗಿಸಲಿದೆ. ಕಂಪನಿಯು ಶೀಘ್ರದಲ್ಲೇ ಈ ಹಾರುವ ಟ್ಯಾಕ್ಸಿಯ ಪ್ರಯಾಣಿಕ ಮತ್ತು ಸರಕು ರೂಪಾಂತರಗಳನ್ನು ಭಾರತದಲ್ಲಿ ಪರಿಚಯಿಸಲಿದೆ.

ಮಾಹಿತಿಯ ಪ್ರಕಾರ, ಕಂಪನಿಯು ಡಿಸೆಂಬರ್ 2022 ರಲ್ಲಿ e200 ಕಾರ್ಗೋಗೆ ಪ್ರಮಾಣೀಕರಣ ಪತ್ರವನ್ನು ಪಡೆಯಲಿದೆ, ಆದರೆ ಸೆಪ್ಟೆಂಬರ್ 2024 ರಲ್ಲಿ ಪ್ರಯಾಣಿಕರಿಗೆ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಾಗುವುದು. ಕಂಪನಿಯು 2025ರ ವೇಳೆಗೆ US ಸರ್ಕಾರದ ಫೆಡರಲ್ ಏವಿಯೇಷನ್ ಡಿಪಾರ್ಟ್ಮೆಂಟ್ನಿಂದ ಪ್ರಮಾಣೀಕರಣವನ್ನು ಸಹ ಪಡೆಯುವುದಾಗಿ ತಿಳಿದುಬಂದಿದೆ.

ಪ್ರಸ್ತುತ, ಕಂಪನಿಯು e200ನ ಸುಧಾರಿತ ತಂತ್ರಜ್ಞಾನವನ್ನು ಪರಿಶೀಲಿಸುತ್ತಿದ್ದು, ವಿನ್ಯಾಸವು ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದೆ. ಇ-ಪ್ಲೇನ್ ಕಂಪನಿಯು ಶೀಘ್ರದಲ್ಲೇ ನಿರ್ಮಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಐಐಟಿ ಮದ್ರಾಸ್‌ನ ಪ್ರೊಫೆಸರ್ ಸತ್ಯ ಚಕ್ರವರ್ತಿ ಮತ್ತು ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿ ಪ್ರಾಂಜಲ್ ಮೆಹ್ತಾ ಅವರು ಇ-ಪ್ಲೇನ್ ಕಂಪನಿಯನ್ನು ಸ್ಥಾಪಿಸಿದ್ದಾರೆ.

ಮನೆಯ ಮೇಲ್ಛಾವಣಿಯಿಂದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಂತ ಕಾಂಪ್ಯಾಕ್ಟ್ ಮತ್ತು ಹಗುರವಾದ ಹಾರುವ ಎಲೆಕ್ಟ್ರಿಕ್ ವಾಹನವನ್ನು ತಯಾರಿಸುವ ಹಂಬಲದಿಂದ ಹುಟ್ಟಿಕೊಂಡ ಚಿಂತನೆಯಿಂದ ಇ200 ಅನ್ನು ವಿನ್ಯಾಸಗೊಳಿಸಲಾಗುತ್ತಿದೆ ಎಂದು ಸತ್ಯ ಚಕ್ರವರ್ತಿ ಅವರು ಹೇಳಿದರು.

ವರದಿಯ ಪ್ರಕಾರ, ePlane ಕಂಪನಿಯು ಈ ವರ್ಷದ ಆರಂಭದಲ್ಲಿ ಸ್ಪೆಶಲೀ ಇನ್ವೆಸ್ಟ್ ಮತ್ತು Micelio ನೇತೃತ್ವದ ತನ್ನ ಯೋಜನೆಗಾಗಿ $ 5 ಮಿಲಿಯನ್ ಹೂಡಿಕೆಯನ್ನು ಪಡೆದಿದೆ. ಸ್ಟಾರ್ಟ್‌ಅಪ್ e6, ಕಾಂಪ್ಯಾಕ್ಟ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಎಲೆಕ್ಟ್ರಿಕ್ (eTOL) ವಿಮಾನವನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಒಂದು ಬಾರಿಗೆ 6 ಕೆ.ಜಿಯ ಪೇಲೋಡ್ ಅನ್ನು ಸಾಗಿಸಬಹುದು.

ಇದು 80 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, ಸರಕು ಸಾಗಣೆಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗುತ್ತಿದೆ. ePlane ಕಂಪನಿಯು e50 ಎಂಬ ಮೂಲ ಮಾದರಿಯನ್ನು ಸಹ ಅಭಿವೃದ್ಧಿಪಡಿಸುತ್ತಿದೆ, ಇದು 50 ಕೆ.ಜಿ ಪೇಲೋಡ್ ಅನ್ನು ಸಾಗಿಸಬಲ್ಲದು ಮತ್ತು 2023ರ ವೇಳೆಗೆ ವಾಣಿಜ್ಯೀಕರಣಗೊಳ್ಳುವ ನಿರೀಕ್ಷೆಯಿದೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳಂತಹ ವಾಹನಗಳನ್ನು ಇಂದು ಅನೇಕ ದೇಶಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ವರ್ಷ, eVTOL ಎಂಬ ಕಂಪನಿಯು ತನ್ನ ಹಾರುವ ಟ್ಯಾಕ್ಸಿಗೆ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಹಾರುವ ಎಲೆಕ್ಟ್ರಿಕ್ ಟ್ಯಾಕ್ಸಿಗಳು ನಗರದಲ್ಲಿ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸುವುದಲ್ಲದೆ ನಗರಗಳಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಇನ್ನು ಪ್ರಪಂಚದಾದ್ಯಂತ ಕೈಗೆಟುಕುವ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿರುವ ಉಬರ್, ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ - ಎಲೆಕ್ಟ್ರಿಕ್ ಟ್ಯಾಕ್ಸಿಯನ್ನು ವಿನ್ಯಾಸಗೊಳಿಸಲು Hyundai - ಹ್ಯುಂಡೈ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದೆ. ಈ ಯೋಜನೆಯ ಎಲ್ಲಾ ಪ್ರಯೋಗಗಳು ಯಶಸ್ವಿಯಾದ ಬಳಿಕ ಇದನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರುವುದಾಗಿ ಕಂಪನಿಗಳು ತಿಳಿಸಿವೆ.

ಈ ವಿಮಾನದಲ್ಲಿ, 4 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಪಾಲುದಾರಿಕೆ ಅಡಿಯಲ್ಲಿ, ಹ್ಯುಂಡೆ ಗಾಳಿಯಲ್ಲಿ ಹಾರುವ ವಾಹನಗಳನ್ನು ತಯಾರಿಸುತ್ತದೆ ಮತ್ತು ಓಡಿಸುತ್ತದೆ. ಈ ವಾಯು ವಾಹನಗಳನ್ನು ವಾಯುಪ್ರದೇಶದ ಬೆಂಬಲ ಸೇವೆ, ನೆಲದ ಸಾರಿಗೆಯ ಸಂಪರ್ಕ ಮತ್ತು ವೈಮಾನಿಕ ಸವಾರಿ ಹಂಚಿಕೆ ನೆಟ್‌ವರ್ಕ್‌ನೊಂದಿಗೆ ಬೆಂಬಲಿಸಲು ಉಬರ್ ಗ್ರಾಹಕರ ಸಂಪರ್ಕಸಾಧನಗಳಲ್ಲಿ ಕೆಲಸ ಮಾಡುತ್ತದೆ.