ಮೆಟ್ರೋ ಬದಲಿಗೆ ಬರಲಿದೆ ಲೈಟ್ ರೈಲ್ ಟ್ರಾನ್ಸಿಟ್
ತಮಿಳುನಾಡಿದ ರಾಜಧಾನಿ ಚೆನ್ನೈನಲ್ಲಿ ಟ್ರಾಫಿಕ್ ಜಾಮ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಹೋಗಿ ಪುನಃ ಮನೆ ತಲುಪುವುದು ಯುದ್ದವನ್ನು ಗೆದ್ದಂತಹ ಅನುಭವವನ್ನು ನೀಡುತ್ತಿದೆ. ತಮಿಳುನಾಡು ಸರ್ಕಾರವು ಟ್ರಾಫಿಕ್ ಜಾಮ್ ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಚೆನ್ನೈನಲ್ಲಿ ಸಬ್ ಅರ್ಬನ್ ರೈಲು, ಮೆಟ್ರೋ ರೈಲು ಸೇರಿದಂತೆ ಹಲವು ರೈಲು ಸೇವೆಗಳಿವೆ. ಈ ರೈಲುಗಳ ಜೊತೆಗೆ ಅಲ್ಲಿನ ಸರ್ಕಾರವು ಹೊಸ ರೈಲು ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಬಗ್ಗೆ ಚೆನ್ನೈನಲ್ಲಿನ ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲಿ ಘೋಷಿಸಲಾಗಿದೆ.

ಲಘು ರೈಲು ವ್ಯವಸ್ಥೆ ಅಂದರೆ ಎಲ್‍ಆರ್‍ಟಿ ಎಂದು ಕರೆಯಲಾಗುವ ಈ ವ್ಯವಸ್ಥೆಯನ್ನು ಚೆನ್ನೈನಲ್ಲಿ ಜಾರಿಗೊಳಿಸಲಾಗುವುದು. ಎಲ್‍ಆರ್‍ಟಿಯನ್ನು ಪ್ರಪಂಚದ ಹಲವು ದೇಶಗಳಲ್ಲಿ ಜಾರಿಗೊಳಿಸಲಾಗಿದೆ. ಎಲ್‍ಆರ್‍ಟಿ ರೈಲುಗಳು ಸದ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿ, ಕೆನಡಾದ ಒಟ್ಟವಾ, ಅಮೇರಿಕಾ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕಾರ್ಯಾಚರಿಸುತ್ತಿವೆ.

ಇದರ ಜೊತೆಗೆ ಸಿಂಗಾಪೂರ್, ತೈವಾನ್ ಹಾಗೂ ಫಿಲಿಪೈನ್ಸ್ ನಲ್ಲಿಯೂ ಸಹ ಈ ರೈಲುಗಳನ್ನು ಜನರ ಬಳಕೆಗೆ ಬಳಸಲಾಗುತ್ತಿದೆ. ಈಗ ಇದೇ ರೀತಿಯ ರೈಲುಗಳನ್ನು ಚೆನ್ನೈನಲ್ಲಿಯೂ ಜಾರಿಗೊಳಿಸಲಾಗುವುದು.

ಈ ರೈಲುಗಳು ವಿದ್ಯುತ್ ಬಂಡಿಗಳಂತೆ ಕಾಣುತ್ತವೆಯಾದರೂ, ಅವುಗಳಿಗಿಂತ ಹೆಚ್ಚಿನ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುತ್ತವೆ. ಈ ರೈಲುಗಳು ರಸ್ತೆಯ ಮೇಲೆ ಕಾರ್ಯಾಚರಣೆ ನಡೆಸುತ್ತವೆ. ಸರ್ಕಾರಗಳು ಮೆಟ್ರೋ ರೈಲುಗಳಿಗಾಗಿ ಮಾಡುತ್ತಿರುವ ವೆಚ್ಚವು ಹೆಚ್ಚಾಗಿದೆ.

ಆದರೆ ಎಲ್‍ಆರ್‍ಟಿಗಳಿಗೆ ಮಾಡುವ ಖರ್ಚು ಮೆಟ್ರೋ ರೈಲುಗಳಿಗಿಂತ ಕಡಿಮೆಯಾಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಎಲ್‍ಆರ್‍ಟಿಗಳನ್ನು ನಿರ್ಮಿಸಬಹುದು. ಮೆಟ್ರೋ ರೈಲುಗಳ ಕಾಮಗಾರಿ ಮುಗಿಯಲು ಹೆಚ್ಚು ಸಮಯ ಬೇಕಾಗುತ್ತದೆ.

ಎಲ್‍ಆರ್‍ಟಿಗಳ ಕಾಮಗಾರಿಗಳನ್ನು ಕಡಿಮೆ ಅವಧಿಯಲ್ಲಿ ನಿರ್ಮಿಸಬಹುದು. ಎಲ್‍ಆರ್‍ಟಿ ಹಳಿಗಳನ್ನು ಚಿಕ್ಕ ರಸ್ತೆಯಲ್ಲಿಯೂ ಅಳವಡಿಸಬಹುದು. ಎಲ್‍ಆರ್‍ಟಿಗಳನ್ನು ಚಿಕ್ಕ ಚಿಕ್ಕ ರಸ್ತೆಗಳನ್ನು ಹೊಂದಿರುವ ಚೆನ್ನೈನಂತಹ ನಗರಗಳಲ್ಲಿ ಸುಲಭವಾಗಿ ಅಳವಡಿಸಬಹುದು.

ಎಲ್‍ಆರ್‍ಟಿಗಳಿಗೆ ನಿಲ್ದಾಣಗಳನ್ನು ಸುಲಭವಾಗಿ ನಿರ್ಮಿಸುವುದರ ಜೊತೆಗೆ, ಎಲ್‍ಆರ್‍ಟಿಗಳ ಕಾಮಗಾರಿಯನ್ನು ವೇಗವಾಗಿ ಮುಗಿಸಬಹುದು. ಎಲ್‍ಆರ್‍ಟಿ ವ್ಯವಸ್ಥೆಯನ್ನು ಮೊದಲ ಬಾರಿಗೆ ಚೆನ್ನೈನಲ್ಲಿರುವ ತಂಬರಂ - ವೆಲಚೇರಿ ಮಾರ್ಗದಲ್ಲಿ ನಿರ್ಮಿಸಲಾಗುವುದು.

ಈ ಮಾರ್ಗದಲ್ಲಿ ಎಲ್‍ಆರ್‍ಟಿ ಸಾರಿಗೆಗಾಗಿ ಸುಮಾರು 15.5 ಕಿ.ಮೀನ ರಸ್ತೆಯನ್ನು ನಿರ್ಮಿಸಲಾಗುವುದು. ಈ ಮಾರ್ಗದಲ್ಲಿನ ಅನುಕೂಲಗಳ ಬಗ್ಗೆ ಸದ್ಯಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸುದ್ದಿಯು ಟ್ರಾಫಿಕ್ ಜಾಮ್‍ನಿಂದ ರೋಸಿ ಹೋಗಿರುವ ಚೆನ್ನೈ ನಿವಾಸಿಗಳಿಗೆ ಸಂತಸವನ್ನುಂಟು ಮಾಡಿದೆ.

ಮೊದಲು ಚೆನ್ನೈನಲ್ಲಿ ಎಲ್‍ಆರ್‍ಟಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಇದರ ಯಶಸ್ಸನ್ನು ತಿಳಿದ ನಂತರ ತಮಿಳುನಾಡಿನಲ್ಲಿರುವ ಇತರ ನಗರಗಳಿಗೂ ವಿಸ್ತರಿಸಲಾಗುತ್ತದೆ.


Click it and Unblock the Notifications