ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಭಾರತದಲ್ಲಿ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಫೈಗೊಳಿಸಲಾಗುತ್ತದೆ. ಕಾರು ಹಾಗೂ ಬೈಕ್‌ ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ವಿಭಿನ್ನ ರೀತಿಯಲ್ಲಿ ಮಾಡಿಫೈಗೊಳಿಸಲಾಗುತ್ತದೆ. ತಮ್ಮ ವಾಹನಗಳಿಗೆ ಗ್ಲಾಮರ್ ಲುಕ್ ನೀಡುವ ಉದ್ದೇಶದಿಂದ ಜನರು ವಾಹನಗಳನ್ನು ಮಾಡಿಫೈಗೊಳಿಸುತ್ತಾರೆ.

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಇನ್ನೂ ಕೆಲವರು ವಾಹನಗಳು ಹೆಚ್ಚು ಆರಾಮದಾಯಕವಾಗಿರಲೆಂದು ಮಾಡಿಫೈಗೊಳಿಸುತ್ತಾರೆ. ಆದರೆ ವೃತ್ತಿಪರ ಕಾರಣಗಳಿಗಾಗಿ ವಾಹನಗಳನ್ನು ಮಾಡಿಫೈ ಮಾಡಿಸುವವರು ಅಪರೂಪ. ಅಬ್ದುಲ್ ಹಕೀಮ್ ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಅವರು ತಮಿಳುನಾಡಿನ ತಿರುಪುರ ಜಿಲ್ಲೆಯ ಉದುಮಲೈಪೆಟ್ಟೈ ಮೂಲದವರು. ಅಬ್ದುಲ್ ಹಕೀಮ್ ತಮ್ಮ ಲಾರಿಯನ್ನು ಮಾಡಿಫೈಗೊಳಿಸಿದ್ದಾರೆ.

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಈ ಮಾಡಿಫಿಕೇಶನ್ ಎಲ್ಲರ ಗಮನ ಸೆಳೆಯುತ್ತಿದೆ. ಕರೋನಾ ವೈರಸ್ ಕಾರಣದಿಂದಾಗಿ ಸರ್ಕಾರವು ಈಗ ಮದುವೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ. ಸಭಾಂಗಣಗಳಲ್ಲಿ ಭವ್ಯವಾಗಿ ನಡೆಯುತ್ತಿದ್ದ ಮದುವೆಗಳು ಈಗ ಮನೆಗಳಲ್ಲಿಯೇ ಸರಳವಾಗಿ ನಡೆಯುತ್ತಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಈ ಹಿಂದೆ ನಡೆಯುತ್ತಿದ್ದ ಮದುವೆಗಳಿಗೆ ಹೋಲಿಸಿದರೆ ಈಗ ನಡೆಯುತ್ತಿರುವ ಮದುವೆಗಳಲ್ಲಿ ಅನೇಕ ವಿಷಯಗಳು ತಪ್ಪಿಹೋಗಿವೆ. ಜೀವನದಲ್ಲಿ ಮದುವೆ ಎಂಬುದು ಮಹತ್ವದ ಘಟ್ಟವಾಗಿದೆ. ಜನ ಮದುವೆ ಮನೆಯ ಶೃಂಗಾರಕ್ಕಾಗಿಯೇ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದರು.

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಆದರೆ ಕರೋನಾ ವೈರಸ್ ಎಲ್ಲಾ ರೀತಿಯ ಮದುವೆ ಆಡಂಬರಗಳಿಗೆ ಬ್ರೇಕ್ ಹಾಕಿದೆ. ಇದರಿಂದ ಅದ್ದೂರಿಯಾಗಿ ಮದುವೆಯಾಗಲು ಬಯಸಿದ್ದವರು ನಿರಾಶಾರಾಗಿರುವುದು ಸುಳ್ಳಲ್ಲ. ಮೂಲತಃ ವರ್ಣಚಿತ್ರಕಾರರಾದ ಅಬ್ದುಲ್ ಹಕೀಮ್ ಸ್ಟೇಜ್ ಡೆಕೋರೇಶನ್ ವ್ಯವಹಾರವನ್ನು ನಡೆಸುತ್ತಿದ್ದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಆದರೆ ಕರೋನಾ ವೈರಸ್ ಹಾಗೂ ಲಾಕ್ ಡೌನ್ ಗಳು ಅವರ ವೃತ್ತಿಜೀವನವನ್ನು ಹಾಳುಗೆಡವಿದವು. ಆದರೆ ಅಬ್ದುಲ್ ಹಕೀಮ್ ಅವುಗಳಿಂದ ಧೃತಿಗೆಡಲಿಲ್ಲ. ಇವುಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಲು ಮುಂದಾದರು.

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಅಬ್ದುಲ್ ಹಕೀಮ್ ಲಾರಿಯನ್ನು ಹೊಂದಿದ್ದಾರೆ. ಈ ಲಾರಿಯನ್ನೇ ಏಕೆ ಮದುವೆ ಮನೆಯಂತೆ ಮಾಡಬಾರದೆಂದು ಆಲೋಚನೆ ಮಾಡಿದ್ದಾರೆ. ಈ ಆಲೋಚನೆ ಮನಸ್ಸಿಗೆ ಬಂದ ತಕ್ಷಣವೇ ಅದನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ತಮ್ಮ ಲಾರಿಯ ಹಿಂಭಾಗವನ್ನು ಮದುವೆ ವೇದಿಕೆಯನ್ನಾಗಿ ಮಾಡಿದ್ದಾರೆ. ಈ ವೇದಿಕೆಯಲ್ಲಿ ವಧು-ವರರಿಗೆ ಸೋಫಾ, ಏರ್ ಕೂಲರ್ ಹಾಗೂ ಎರಡೂ ಬದಿಗಳಲ್ಲಿ ಹೂವಿನ ಮಡಕೆಗಳನ್ನು ನೀಡಲಾಗಿದೆ. ಲಘು ಸಂಗೀತಕ್ಕಾಗಿ ಸ್ಪೀಕರ್‌ಗಳನ್ನು ಸಹ ನೀಡಲಾಗಿದೆ.

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ವಧು-ವರರು ಹಾಗೂ ಅತಿಥಿಗಳು ಮೇಲಕ್ಕೆ ಏರಲು ಮೆಟ್ಟಿಲುಗಳಿವೆ.ಇದರಲ್ಲಿರುವ ರೆಡ್ ಕಾರ್ಪೆಟ್ ಎಲ್ಲರ ಗಮನ ಸೆಳೆಯುತ್ತದೆ. ಈ ಮದುವೆ ವೇದಿಕೆಯ ಕೆಳಗೆ ಕುರ್ಚಿಗಳನ್ನು ಹಾಕಿದರೆ ಥೇಟ್ ಮದುವೆ ಮನೆಯಂತೆಯೇ ಕಾಣುತ್ತದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಈ ಕಾರಣಕ್ಕೆ ಈ ಟ್ರಕ್ ಅನ್ನು ಮಿನಿ ವೆಡ್ಡಿಂಗ್ ಹಾಲ್ ಎಂದು ಕರೆಯಲು ಅಡ್ಡಿಯಿಲ್ಲ. ಅಬ್ದುಲ್ ಹಕೀಮ್ 17 ಅಡಿ ಉದ್ದದ ಟ್ರಕ್‌ನ ಹಿಂಭಾಗವನ್ನು ಮದುವೆ ವೇದಿಕೆಯಂತೆ ಸಿದ್ಧಪಡಿಸಿದ್ದಾರೆ. ಈ ಮೊಬೈಲ್ ವೆಡ್ಡಿಂಗ್ ಹಾಲ್ ಪ್ರಸ್ತುತ ಎಲ್ಲರ ಗಮನ ಸೆಳೆಯುತ್ತಿದೆ.

ಮದುವೆ ಮನೆಯಂತೆ ಮಾಡಿಫೈಗೊಂಡ ಲಾರಿ

ಮದುವೆಗೆ ಹಾಜರಾಗುವವರಿಗೆ ಫೇಸ್ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ನೀಡಲಾಗುವುದು. ಈ ಮೊಬೈಲ್ ವೆಡ್ಡಿಂಗ್ ಹಾಲ್ ಗೆ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದರೆ ಖರ್ಚಾಗುವುದಕ್ಕಿಂತ ಕಡಿಮೆ ಖರ್ಚಾಗುತ್ತದೆ. ಅಬ್ದುಲ್ ಹಕೀಮ್ ರವರ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Article Published On: Thursday, July 16, 2020, 18:05 [IST]
English summary
Tamilnadu lorry owner modifies his lorry as mobile marriage hall. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+