Just In
Don't Miss!
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Movies
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಾಣಕ್ಕೆ ಮಾರಕವಾಗಬಲ್ಲವು ಶೋಕಿಗಾಗಿ ಅಳವಡಿಸಿಕೊಳ್ಳುವ ಬುಲ್ ಬಾರ್‌ಗಳು
ವಾಹನಗಳಲ್ಲಿ ಬುಲ್ ಬಾರ್ ಅಳವಡಿಸುವುದನ್ನು ಭಾರತದಲ್ಲಿ ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಈ ಕಾರಣಕ್ಕೆ ವಿವಿಧ ರಾಜ್ಯಗಳ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಬುಲ್ ಬಾರ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಆದರೂ ಸಹ ಕೆಲವು ವಾಹನಗಳು ಬುಲ್ ಬಾರ್'ನೊಂದಿಗೆ ಸಂಚರಿಸುತ್ತಿವೆ. ತಮಿಳುನಾಡಿನ ಅಧಿಕಾರಿಗಳು ಬುಲ್ ಬಾರ್ ಹೊಂದಿರುವ ವಾಹನಗಳ ವಿರುದ್ಧ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಬುಲ್ ಬಾರ್‌ಗಳನ್ನು ಹೊಂದಿರುವ ವಾಹನಗಳನ್ನು ತಡೆಯುವ ಅಧಿಕಾರಿಗಳು ಸ್ಥಳದಲ್ಲಿಯೇ ಬುಲ್ ಬಾರ್‌ಗಳನ್ನು ತೆಗೆದುಹಾಕಿ ಸಂಬಂಧಪಟ್ಟ ವಾಹನ ಮಾಲೀಕರಿಗೆ ದಂಡ ವಿಧಿಸುತ್ತಿದ್ದಾರೆ.

ದೊಡ್ಡ ಗಾತ್ರದ ಬುಲ್ ಬಾರ್ ಹೊಂದಿದ್ದ ಟೊಯೊಟಾ ಇನೋವಾ ಕಾರಿನ ವಿರುದ್ಧ ತಮಿಳುನಾಡು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವ ವೀಡಿಯೊವೊಂದು ಬಹಿರಂಗಗೊಂಡಿದೆ. ಈ ಘಟನೆಯಲ್ಲಿಯೂ ಸ್ಥಳದಲ್ಲಿಯೇ ಇನೋವಾ ಕಾರಿನಿಂದ ಬುಲ್ ಬಾರ್ ಅನ್ನು ತೆಗೆದುಹಾಕಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಕ್ರಮವಾಗಿ ಬುಲ್ ಬಾರ್ ಅಳವಡಿಸಿಕೊಂಡಿದ್ದ ಕಾರಣಕ್ಕೆ ಈ ಕಾರಿನ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಆದರೆ ಎಷ್ಟು ದಂಡ ವಿಧಿಸಲಾಯಿತು ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಕಾರಿನಿಂದ ತೆಗೆದು ಹಾಕಿದ ಬುಲ್ ಬಾರ್ ಅನ್ನು ಏನು ಮಾಡಲಾಯಿತು ಎಂಬ ಮಾಹಿತಿಯೂ ಸಹ ಲಭ್ಯವಾಗಿಲ್ಲ.

ಅಕ್ರಮವಾಗಿ ಅಳವಡಿಸುವ ಬಿಡಿಭಾಗಗಳನ್ನು ವಾಹನ ಮಾಲೀಕರಿಗೆ ಹಿಂತಿರುಗಿಸಿದರೆ ಅವುಗಳನ್ನು ಮತ್ತೆ ಅಳವಡಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅಧಿಕಾರಿಗಳು ವಾಹನಗಳಿಂದ ತೆಗೆದು ಹಾಕುವ ಬಿಡಿಭಾಗಗಳನ್ನು ತಮ್ಮ ವಶಕ್ಕೆ ಪಡೆಯುತ್ತಾರೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬುಲ್ ಬಾರ್‌ಗಳನ್ನು ಅಳವಡಿಸುವುದರಿಂದ ಏರ್‌ಬ್ಯಾಗ್ ತೆರೆದುಕೊಂಡು ಜೀವಗಳು ಉಳಿಯುತ್ತವೆ ಎಂಬ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಆದರೆ ಇದು ಸಂಪೂರ್ಣ ಸುಳ್ಳು ಮಾಹಿತಿ. ವಾಸ್ತವವಾಗಿ ಕಾರಿನ ಮುಂಭಾಗದಲ್ಲಿ ಬುಲ್ ಬಾರ್‌ಗಳನ್ನು ಅಳವಡಿಸಿದರೆ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದೇ ಇರುವ ಸಾಧ್ಯತೆಗಳೇ ಹೆಚ್ಚು.

ಅಪಘಾತದ ಪರಿಣಾಮವನ್ನು ಪತ್ತೆಹಚ್ಚುವ ಹಾಗೂ ಏರ್‌ಬ್ಯಾಗ್‌ಗಳನ್ನು ತೆರೆಯುವ ಸೆನ್ಸಾರ್'ಗಳನ್ನು ಕಾರಿನ ಮುಂಭಾಗದಲ್ಲಿ ಅಳವಡಿಸಲಾಗಿರುತ್ತದೆ. ಬುಲ್ ಬಾರ್‌ಗಳಿದ್ದರೆ ಸೆನ್ಸಾರ್'ಗಳು ಅಪಘಾತದ ಪರಿಣಾಮವನ್ನು ಪತ್ತೆ ಮಾಡುವುದಿಲ್ಲ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಬುಲ್ ಬಾರ್‌ಗಳು ಸೆನ್ಸಾರ್'ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿರಬಹುದು. ಇದರಿಂದಾಗಿ ಅಪಘಾತದ ಸಂದರ್ಭದಲ್ಲಿ ಕಾರಿನ ಮಾಲೀಕರು ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ. ಜೊತೆಗೆ ಬುಲ್ ಬಾರ್'ಗಳಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತದೆ.

ಬುಲ್ ಬಾರ್'ಗಳನ್ನು ಹೊಂದಿದ ವಾಹನಗಳು ಡಿಕ್ಕಿ ಹೊಡೆದರೆ ಪಾದಚಾರಿಗಳು ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚು. ಈ ಕಾರಣಗಳಿಂದಾಗಿಯೇ ಬುಲ್ ಬಾರ್'ಗಳ ಬಳಕೆಯನ್ನು ನಿಷೇಧಿಸಲಾಗಿದೆ. ನಿಮ್ಮ ಕಾರಿನಲ್ಲಿಯೂ ಬುಲ್ ಬಾರ್'ಗಳಿದ್ದರೆ ತೆಗೆದುಹಾಕಿ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.