ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಸಾಮಾನ್ಯವಾಗಿ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿದರೆ ಒಂದು ಕ್ಷಣ ವಾಹನ ಸವಾರರು ಗಾಬರಿಯಾಗುವುದು ನಿಜ. ಆದರೆ ತಮಿಳುನಾಡಿನ ಪೊಲೀಸ್ ಅಧಿಕಾರಿಯೊಬ್ಬರು ವಿಭಿನ್ನ ಕಾರಣಕ್ಕಾಗಿ ಬೈಕ್ ಅನ್ನು ಅಡ್ಡಗಟ್ಟಿದ್ದಾರೆ.

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ತಮಿಳುನಾಡಿನ ಪೊಲೀಸ್ ಅಧಿಕಾರಿ ಅಡ್ಡಗಟ್ಟಿದ್ದು ಕರ್ನಾಟಕದ ಬೈಕ್ ಸವಾರನನ್ನು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಅನ್ನಿ ಅರುಣ್ ಯೂಟ್ಯೂಬ್ ಚಾನೆಲ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಕರ್ನಾಟಕದ ಬೈಕ್ ಸವಾರ ಪಾಂಡಿಚೆರಿಯಿಂದ ತೆಂಕಸಿಗೆ ತೆರಳುತ್ತಿದ್ದರು.

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಆಗ ಅವರನ್ನು ತಡೆದ ತಮಿಳುನಾಡು ಪೊಲೀಸ್ ಅಧಿಕಾರಿಯೊಬ್ಬರು ನೀವು ಕರ್ನಾಟಕದವರೇ ಎಂದು ಕೇಳುವುದನ್ನು ಹಾಗೂ ಬೈಕ್ ಸವಾರ ಹೌದು ಎಂದುಹೇಳುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಅದೇ ರಸ್ತೆಯಲ್ಲಿ ಮುಂದೆ ಸಾಗಿದ ಬಸ್ಸಿನಲ್ಲಿದ್ದ ವೃದ್ಧೆಯೊಬ್ಬರು ಔಷಧಿ ಬಾಟಲಿಯನ್ನು ಬೀಳಿಸಿ ಕೊಂಡಿದ್ದರು. ಕೆಳಗೆ ಬಿದ್ದಿದ್ದ ಔಷಧಿ ಬಾಟಲಿ ಆ ಪೊಲೀಸ್ ಅಧಿಕಾರಿ ಕೈಗೆ ಸಿಕ್ಕಿದೆ.

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಆ ಪೊಲೀಸ್ ಅಧಿಕಾರಿ ತಮಗೆ ಸಿಕ್ಕ ಔಷಧಿ ಬಾಟಲಿಯನ್ನು ಬಸ್ಸಿನಲ್ಲಿರುವ ಅಜ್ಜಿಗೆ ನೀಡುವಂತೆ ಬೈಕ್ ಸವಾರನಿಗೆ ತಿಳಿಸುತ್ತಾರೆ. ಬೇಗ ಹೋಗಿ ಬಸ್ಸಿನಲ್ಲಿರುವ ಅಜ್ಜಿಗೆ ಔಷಧಿ ಬಾಟಲಿ ನೀಡುವಂತೆ ಬೈಕ್ ಸವಾರನಿಗೆ ಹೇಳುತ್ತಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ವೇಗವಾಗಿ ಸಾಗುವ ಬೈಕ್ ಸವಾರ ಬಸ್ ನಿಲ್ಲಿಸಿ ಬಸ್ಸಿನಲ್ಲಿದ್ದವರಿಗೆ ಔಷಧಿ ಬಾಟಲಿಯನ್ನು ಹಸ್ತಾಂತರಿಸಿದರು. ಈ ವೀಡಿಯೊ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಈ ವೀಡಿಯೊ ವೀಕ್ಷಿಸಿದವರು ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಹಾಗೂ ಬೈಕ್ ಸವಾರರನ್ನು ಶ್ಲಾಘಿಸಿದ್ದಾರೆ. ಮಾನವೀಯತೆ ಇನ್ನೂ ಸತ್ತಿಲ್ಲ ಎಂಬುದು ಈ ವೀಡಿಯೊದಿಂದ ತಿಳಿಯುತ್ತದೆ ಎಂದು ಹಲವಾರು ಜನರು ಕಾಮೆಂಟ್ ಮಾಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಇನ್ನೂ ಕೆಲವರು ಬಸ್ ನಿಲ್ಲಿಸಿದ ಬಸ್ಸಿನ ಚಾಲಕನನ್ನು ಸಹ ಹೊಗಳಿದ್ದಾರೆ. ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ.

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲವೊಮ್ಮೆ ಪೊಲೀಸರು ವಾಹನ ಸವಾರರನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕೆಲವು ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಂದ ಹಣ ಪಡೆದು ಅವರನ್ನು ದಂಡಿಸದೇ ಹಾಗೆಯೇ ಬಿಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತವೆ. ಈ ಕಾರಣಕ್ಕೆ ಪೊಲೀಸರು ವಾಹನವನ್ನು ನಿಲ್ಲಿಸಿದಾಗ ವಾಹನ ಸವಾರರು ಉದ್ವಿಗ್ನರಾಗುತ್ತಾರೆ.

ಬೈಕ್ ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಆದರೆ ಈಗ ವೈರಲ್ ಆಗಿರುವ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿ ಒಳ್ಳೆಯ ಕಾರಣಕ್ಕಾಗಿ ಬೈಕ್ ನಿಲ್ಲಿಸಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೊರ ರಾಜ್ಯದ ವಾಹನ ಸವಾರರು ಸಿಕ್ಕಿಬಿದ್ದರೆ ಪೊಲೀಸರು ವಿಪರಿತವಾಗಿ ದಂಡ ವಿಧಿಸುತ್ತಾರೆ ಎಂಬ ದೂರುಗಳಿವೆ. ಆದರೆ ಈ ಅಧಿಕಾರಿ ಮಾನವೀಯ ಕಾರ್ಯಕ್ಕಾಗಿ ಬೈಕ್ ನಿಲ್ಲಿಸಿದ್ದಾರೆ.

ಚಿತ್ರಕೃಪೆ: ಅನ್ನಿಅರುಣ್

Most Read Articles

Kannada
English summary
Tamilnadu cop stops Karnataka bike rider for humanity cause. Read in Kannada.
Story first published: Thursday, March 25, 2021, 20:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X