ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ವಾಹನ ಸವಾರರಿಗೆ ತಲೆನೋವು ತರುವ ಹಲವು ಸಂಗತಿಗಳಲ್ಲಿ ಟೋಲ್ ಶುಲ್ಕಗಳು ಸಹ ಸೇರಿವೆ. ದೇಶದಲ್ಲಿರುವ ಹಲವಾರು ಟೋಲ್‌ಗೇಟ್‌ಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ವಾಹನ ಸವಾರರು ದೂರುತ್ತಲೇ ಇರುತ್ತಾರೆ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ವಾಗ್ವಾದಗಳು ನಡೆದಿವೆ. ವಾಹನ ಸವಾರರ ನೆರವಿಗೆ ಧಾವಿಸುತ್ತಿರುವ ತಮಿಳುನಾಡು ಸರ್ಕಾರವು ಕೆಲವು ಟೋಲ್‌ಗೇಟ್‌ಗಳನ್ನು ತೆಗೆದುಹಾಕಲಿದೆ ಎಂದು ವರದಿಯಾಗಿದೆ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ತಮಿಳುನಾಡು ಸರ್ಕಾರವು ಈ ಕುರಿತು ಅಧ್ಯಯನ ನಡೆಸಿದೆ ಎಂದು ಸಚಿವ ಇ.ವಿ. ವೇಲು ಹೇಳಿದ್ದಾರೆ. ತಮಿಳುನಾಡು ಸರ್ಕಾರವು ಚೆನ್ನೈ ಮಹಾನಗರದ ಗಡಿಯೊಳಗಿರುವ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲು ಚಿಂತನೆ ನಡೆಸುತ್ತಿದೆ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ಈಗಾಗಲೇ ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಿ ಮುಖ್ಯ ಕಾರ್ಯದರ್ಶಿಗೆ ಹಸ್ತಾಂತರಿಸಲಾಗಿದೆ. ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಸಚಿವ ವೇಲು ಹೇಳಿದ್ದಾರೆ. ಇದರಿಂದ ಚೆನ್ನೈ ನಿವಾಸಿಗಳಿಗೆ ಶೀಘ್ರದಲ್ಲಿಯೇ ಶುಭ ಸುದ್ದಿ ಹೊರ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ಹಳೆ ಡಿಎಂಕೆ ಸರ್ಕಾರದ ಅಡಿಯಲ್ಲಿ ಜಾರಿಗೆ ತರಲಾದ ಹಾಗೂ ಎಐಎಡಿಎಂಕೆ ಸರ್ಕಾರದ ಆಡಳಿತದ ಅವಧಿಯಲ್ಲಿ ಕಾರ್ಯಗತಗೊಳಿಸಲು ಸಾಧ್ಯವಾಗದ ಯೋಜನೆಗಳನ್ನು ಮರು ಅನುಷ್ಠಾನಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಚೆನ್ನೈ ಮಹಾನಗರದಲ್ಲಿರುವ ನಾಲ್ಕು ಟೋಲ್ ಪ್ಲಾಜಾಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದೆ. ಈ ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವುದರಿಂದ ಉಂಟಾಗುವ ಆರ್ಥಿಕ ನಷ್ಟ ಹಾಗೂ ಸಿಬ್ಬಂದಿ ನಷ್ಟವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ವೇಲು ಹೇಳಿದ್ದಾರೆ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ಚೆನ್ನೈ ಮಹಾನಗರದ ಗಡಿಯೊಳಗಿರುವ ಟೋಲ್ ಪ್ಲಾಜಾಗಳನ್ನು ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂಬ ನಿರೀಕ್ಷೆಯಲ್ಲಿ ಚೆನ್ನೈ ನಿವಾಸಿಗಳು ಹಾಗೂ ವಾಹನ ಸವಾರರು ಕುತೂಹಲದಿಂದ ಕಾಯುತ್ತಿದ್ದಾರೆ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ವಾಹನ ಸವಾರರಿಗೆ ಭಾರ ಎನಿಸುವ ಈ ಟೋಲ್ ಪ್ಲಾಜಾಗಳನ್ನು ತೆಗೆದು ಹಾಕಬೇಕೆಂದು ಈ ಹಿಂದೆಯೇ ವಾಹನ ಸವಾರರು ಹಲವು ಭಾರಿ ಪ್ರತಿಭಟನೆ ನಡೆಸಿದ್ದರು. ಆಗ ವಾಹನ ಸವಾರರ ಪ್ರತಿಭಟನೆಗೆ ಮನ್ನಣೆ ದೊರೆತಿರಲಿಲ್ಲ.

ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಮುಂದಾದ ಸರ್ಕಾರ

ಈಗಿರುವ ತಮಿಳುನಾಡು ಸರ್ಕಾರವು ಚೆನ್ನೈ ಸುತ್ತಮುತ್ತಲಿನ ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಇದರ ಜೊತೆಗೆ ಚೆನ್ನೈನ ಮಧ್ಯ ಕೈಲಾಶ್ ಪ್ರದೇಶದಿಂದ ಸಿರುಸೇರಿಯವರೆಗೆ 5 ಹೊಸ ಫ್ಲೈಓವರ್‌ಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ ಎಂದು ಸಚಿವ ವೇಲು ತಿಳಿಸಿದ್ದಾರೆ.

Most Read Articles

Kannada
English summary
Tamilnadu government plans to remove four toll plazas in Chennai. Read in Kannada.
Story first published: Thursday, July 1, 2021, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X