BMTC: ಬಿಎಂಟಿಸಿ ಸೇರಿದ 100 ಟಾಟಾ ಎಲೆಕ್ಟ್ರಿಕ್ ಬಸ್‌ಗಳು, ಪರಿಸರ ಕಾಳಜಿಯು ಉಂಟು.. ಸಂಪೂರ್ಣ ಸುರಕ್ಷಿತ!
ಬೆಂಗಳೂರು ನಗರ ಜೀವನಾಡಿಯಾಗಿ ಬಿಎಂಟಿಸಿ ಬಸ್‌ಗಳು ಜನಪ್ರಿಯತೆಯನ್ನು ಗಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ - BMTC) 100 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಕೇಂದ್ರ ಸರ್ಕಾರದ 'ಫಾಸ್ಟ್ ಅಡಾಪ್ಷನ್ & ಎಲೆಕ್ಟ್ರಿಕ್ ವೆಹಿಕಲ್ಸ್' (FAME-II) ಯೋಜನೆ ಭಾಗವಾಗಿ ಬಿಎಂಟಿಸಿ ಪರಿಚಯಿಸುತ್ತಿರುವ 921 ಬಸ್‌ಗಳ ಮೊದಲ ಬ್ಯಾಚ್‌ನಲ್ಲಿ ಈ 100 ಎಲೆಕ್ಟ್ರಿಕ್ ಬಸ್‌ಗಳು ಸೇರ್ಪಡೆಗೊಂಡಿವೆ. ಟಾಟಾ ಮೋಟಾರ್ಸ್ ಲಿಮಿಟೆಡ್ (Tata Motors Ltd) ಅಂಗಸಂಸ್ಥೆಯಾಗಿರುವ ಟಿಎಂಎಲ್ ಸ್ಮಾರ್ಟ್ ಮೊಬಿಲಿಟಿ ಲಿಮಿಟೆಡ್ (TML Smart Mobility Ltd) ಈ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು 12 ವರ್ಷಗಳ ಅವಧಿಗೆ ಗುತ್ತಿಗೆ ನೀಡುತ್ತಿದೆ.

ಬಿಎಂಟಿಸಿಗೆ ಟಾಟಾ ನೀಡಿರುವ ಈ ಎಲೆಕ್ಟ್ರಿಕ್ ಬಸ್‌ಗಳು ಸಾಕಷ್ಟು ಅತ್ಯಾಧುನಿಕವಾಗಿದ್ದು, ಸಂಪೂರ್ಣ ಪರಿಸರ ಸ್ನೇಹಿಯಾಗಿವೆ. 35 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 12 ಮೀಟರ್ ಉದ್ದವಿರುವ ನೂತನ ಎಲೆಕ್ಟ್ರಿಕ್ ಬಸ್‌ಗಳು, 400 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 200 ಕಿಲೋಮೀಟರ್ ಕ್ರಮಿಸಲಿವೆ. ಜೊತೆಗೆ ಸ್ವಯಂ ಚಾಲಿತ ಬಾಗಿಲು, ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್ ಅನ್ನು ಪಡೆದಿವೆ.
ಈ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಚಾಲಕರಿಗೆ ನೆರವಾಗಲು 3 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಶೇಷಚೇತನರು ಕೂಡ ಸುಲಭವಾಗಿ ಬಸ್ ಏರಬಹುದು. ಮಹಿಳೆಯರ ಸುರಕ್ಷತೆಗೆ ಹೊಚ್ಚ ಹೊಸ ಬಸ್‌ಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 'ಪ್ಯಾನಿಕ್ ಬಟನ್'ಗಳನ್ನು ಅಳವಡಿಸಲಾಗಿದೆ. ಜೊತೆಗೆ 'ಫೈರ್ ಡಿಟೆಕ್ಷನ್ & ಅಲಾರ್ಮ್ ಸಿಸ್ಟಮ್ (FDAS) ಅನ್ನು ಹೊಂದಿದೆ.

ಹೊಸ ಟಾಟಾ ನಾನ್ - ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಶಾಂತಿನಗರ, ಕೆಆರ್ ಪುರಂ ಸೇರಿದಂತೆ ಬಿಎಂಟಿಸಿಯ 8 ಡಿಪೋಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇವು ಚಂದಾಪುರ, ಎಲೆಕ್ಟ್ರಾನಿಕ್ಸ್ ಸಿಟಿ ಒಳಗೊಂಡಂತೆ ವಿವಿಧ ಮಾರ್ಗದಲ್ಲಿ ಸಂಚಾರಿಸಲಿವೆ. ಸದ್ಯ, ಬಿಎಂಟಿಸಿ ಸ್ವಿಚ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಹಾಗೂ ಜೆಬಿಎಂ ಆಟೋದಿಂದ ಗುತ್ತಿಗೆ ಪಡೆದಿರುವ 390 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುತ್ತಿದೆ.
ಈ ಬಸ್‌ಗಳು ಪ್ರತಿ ಚಾರ್ಜ್‌ಗೆ 140 ಕಿ.ಮೀ ವರೆಗೆ ಚಲಿಸುತ್ತಿವೆ. ಕಳೆದ ಕೆಲವು ತಿಂಗಳ ಹಿಂದೆ, ಪ್ರತಿನಿತ್ಯ ವಾಯು ವಜ್ರ ಬಸ್‌ಗಳಲ್ಲಿ 13,000 ಮಂದಿ ಪ್ರಯಾಣಿಸುತ್ತಿದ್ದು, ನಿಗಮಕ್ಕೆ ರೂ.32 ಲಕ್ಷ ಆದಾಯ ಬರುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದರಲ್ಲೂ ವಿಮಾನ ನಿಲ್ದಾಣ ಹಾಗೂ ಐಟಿ ಕಂಪನಿಗಳು ಇರುವ ಏರಿಯಾಗಳಿಗೆ ಹೆಚ್ಚಿನ ವಾಯವಜ್ರ ಬಸ್‌ಗಳು ಸಂಚರಿಸುತ್ತಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ - KSRTC) ಕೂಡ ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಬೆಂಗಳೂರಿನಿಂದ ಹತ್ತಿರದ ಜಿಲ್ಲೆಗಳ ಪ್ರಯಾಣಕ್ಕಾಗಿ 300 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲು ಚಿಂತನೆ ನಡೆಸುತ್ತಿದೆ. ಮುಂಬರಲಿರುವ ಹೊಸ ಎಲೆಕ್ಟ್ರಿಕ್ ಬಸ್‌ಗಳು, ಸಂಪೂರ್ಣ ಚಾರ್ಜ್ ನಲ್ಲಿ 180 ಕಿಲೋಮೀಟರ್ ವರೆಗೆ ಕ್ರಮಿಸಲಿವೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications