ಈ ವಿಷಯಗಳಲ್ಲಿ ಟಾಟಾ ನೆಕ್ಸಾನ್ ಅನ್ನು ಹೋಲಲಿದೆ ಸ್ಟೈಲಿಶ್ ಟಾಟಾ ಕರ್ವ್: ಟಾಟಾದ ಚಕ್ರವ್ಯೂಹ ಸಿದ್ದ
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಒಂದರ ಹಿಂದೆ ಒಂದರಂತೆ ವಾಹನಗಳನ್ನು ಬಿಟ್ಟು ತನ್ನ ಪಾರುಪತ್ಯವನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಇತ್ತೀಚೆಗಷ್ಟೇ ಟಾಟಾ ತನ್ನ ಮೈಕ್ರೋ ಎಸ್‌ಯುವಿ ಆಗಿರವ ಟಾಟಾ ಪಂಚ್‌ನ ಎಲೆಕ್ಟ್ರಿಕ್ ಮಾದರಿಯನ್ನು ಸಹ ಬಿಡುಗಡೆ ಮಾಡಿ, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಇದೀಗ ಆ ಸಾಲಿಗೆ ಹೊಸ ಕಾರೊಂದು ಸೇರ್ಪಡೆಯಾಗಲಿದೆ.
ಎಲ್ಲರಿಗೂ ತಿಳಿದಿರುವಂತೆ ಟಾಟಾ ಮೋಟಾರ್ಸ್‌ನ ಮುಂಬರಲಿರುವ ಕಾರಾದ ಟಾಟಾ ಕರ್ವ್, ಅನೇಕ ವಿಷಯದಲ್ಲಿ ಟಾಟಾ ನೆಕ್ಸಾನ್ ಅನ್ನು ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಇಂದಿನ ಈ ಲೇಖನದಲ್ಲಿ ಟಾಟಾ ಕರ್ವ್ ಯಾವೆಲ್ಲಾ ವಿಚಾರದಲ್ಲಿ ಟಾಟಾ ನೆಕ್ಸಾನ್ ಅನ್ನು ಹೋಲುತ್ತದೆ ಎಂದು ನೋಡೋಣ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

ಡಿಸೈನ್: ಮಾಹಿತಿಗಳ ಪ್ರಕಾರ ಈ ಕಾರಿನ ಒಳಭಾಗ ಮತ್ತು ಹೊರಭಾಗ ಟಾಟಾ ನೆಕ್ಸಾನ್ ಅನ್ನು ಹೋಲಲಿದೆ. ಮೊದಲ ನೋಟದಲ್ಲಿಯೇ ಜನರನ್ನು ಆಕರ್ಷಿಸುವ ಡಿಸೈನ್ ಹೊಂದಿರುವ ಈ ಕಾರು ಉತ್ತಮ ಪೀಚರ್‌ಗಳನ್ನು ಸಹ ಹೊಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರಿನ ಸಾಕಷ್ಟುಫೋಟೋಗಳು ವೈರಲ್ ಆಗಿದ್ದು ಜನರಿಂದ ಈ ಕಾರಿಗೆ ಭಾರೀ ಪ್ರತಿಕ್ರಿಯೆಗಳು ದೊರಕ್ಕುತ್ತಿದ್ದು, ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಕಾಯುತ್ತಿದ್ದವರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಮಾಹಿತಿಗಳ ಪ್ರಕಾರ ಈ ಕಾರಿನ ಒಳಭಾಗದಲ್ಲಿಯೂ ನೆಕ್ಸಾನ್ ನಲ್ಲಿ ಲಭ್ಯವಾಗುವಂತಹ 10.25 ಇಂಚ್‌ನ ಡ್ರೈವರ್ ಡಿಸ್ಪ್ಲೇ ಮತ್ತು 12.5 ಇಂಚ್ ನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದರಲ್ಲಿ ಸಿಗಲಿದೆ. ಅದೇ ರೀತಿ ಟಾಟಾ ನೆಕ್ಸಾನ್‌ನಲ್ಲಿ ಸಿಗುತ್ತಿರುವ ವೆಂಟಿಲೇಟೆಡ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೈಟ್ ಅಡ್ಜಸ್ಟಬಲ್ ಮುಂಭಾಗದ ಸೀಟ್‌ಗಳು ಟಾಟಾ ಕರ್ವ್ ನಲ್ಲಿ ಸಿಗಲಿದೆ.

ಎಂಜಿನ್: ಈ ಟಾಟಾ ಕರ್ವ್, ನೆಕ್ಸಾನ್ ನ ಅದೇ ಎಂಜಿನ್ ಜೊತೆ ಬರಲಿದೆ. ಹೌದು ನೆಕ್ಸಾನ್‌ನಲ್ಲಿರುವ, 1.5 ಲೀಟರ್‌ನ ಡೀಸೆಲ್ ಎಂಜಿನ್ ಸಹಾಯದಿಂದ ಈಗ ನೆಕ್ಸಾನ್ ಕಾರ್‌ನಲ್ಲಿ ಉತ್ಪತ್ತಿಯಾಗುವ ಅದೇ ಪವರ್ ಮತ್ತು ಪರ್ಫಾಮೆನ್ಸ್ ಅನ್ನು ನಾವು ಮುಂಬರಲಿರುವ ಈ ಹೊಸ ಟಾಟಾ ಕರ್ವ್ ಡೀಸೆಲ್ ಆವೃತ್ತಿಯಲ್ಲಿ ಎದುರು ನೊಡಬಹುದಾಗಿದೆ.
ಮಾಹಿತಿಗಳ ಪ್ರಕಾರ, ಮೊದಲಿಗೆ ಟಾಟಾ ಕರ್ವ್ ಎಲೆಕ್ಟ್ರಿಕ್ ಬಿಡುಗಡೆಯಾಗಲಿದ್ದು, ನಂತರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಬಿಡುಗಡೆಯಾಗಲಿದೆ. ಈ ಕಾರುಗಳು 2024 ರ ಎರಡನೇ ಆರ್ಥಿಕ ವರ್ಷಾರ್ಧದಲ್ಲಿ ಬಿಡುಗಡೆಯಾಗಲಿದೆ. ಅಂದರೆ ಈ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ವರ್ಷದ ಜುಲೈ ಮತ್ತು ಸಪ್ಟೆಂಬರ್ ತಿಂಗಳ ಕಾಲಾವಧಿಯಲ್ಲಿ ನಿರೀಕ್ಷಿಸಬಹುದಾಗಿದೆ.
ಇದರ ಡಿಸೈನ್ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಹೆಡ್‌ಲ್ಯಾಂಪ್‌ಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಟಾಟಾ ಮೋಟಾರ್ಸ್‌ನ Curvv ಕಾನ್ಸೆಪ್ಟ್ ಪೂರ್ಣ-ಅಗಲ LED DRL ಗಳನ್ನು ಉಳಿಸಿಕೊಂಡಿದೆ. ಈ TATA Curvv ಕಾನ್ಸೆಪ್ಟ್ ವಿಶಿಷ್ಟ ಲುಕ್ ಅನ್ನು ಹೊಂದಿದೆ. ಈ ಕಾರು ವಿನ್ಯಾಸದ ಹೈಲೈಟ್ ಅದನ್ನು ಉತ್ಪಾದನೆಗೆ ಮಾಡಿದರೆ, ಎಸ್‍ಯುವಿಗಳು ಬಿ-ವಿಭಾಗದಲ್ಲಿ Curvv ಒಂದು ವಿಶಿಷ್ಟ ಕೊಡುಗೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications