Tata Harrier: ಟಾಟಾ ಕಾರಿನ ಗುಣಮಟ್ಟಕ್ಕೆ ಬೇಸರ ವ್ಯಕ್ತಪಡಿಸಿದ ಮಾಲೀಕ!

ಹೆಚ್ಚಿನ ವೇಗದಲ್ಲಿ ಕಾರು ಚಾಲನೆ ಮಾಡುವಾಗ ಬಾನೆಟ್ ಇದ್ದಕ್ಕಿಂದೆ ತೆರೆದುಕೊಂಡು ವಿಂಡ್‌ಶೀಲ್ಡ್ ಒಡೆಯುವುದು ಅಥವಾ ಅಪಘಾತಗಳಾಗಿರುವ ಹಲವು ಉದಾಹರಣೆಗಳಿವೆ. ಇಂತಹ ಘಟನೆಗಳು ಹೊಸತೇನಲ್ಲ, ಈ ವೈಫಲ್ಯಗಳಿಗೆ ಹಲವಾರು ಕಾರಣಗಳಿರಬಹುದು. ಇದೀಗ Tata Harrier ಕೂಡ ಇಂತಹದ್ದೇ ಅವಘಡವನ್ನು ಎದುರಿಸಿದ್ದು, ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಪ್ರಕರಣವೊಂದರಲ್ಲಿ ಟಾಟಾ ಹ್ಯಾರಿಯರ್ ಮಾಲೀಕರು ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಬಾನೆಟ್ ತೆರೆದುಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಆದ್ರೆ ಸದ್ಯ ಇದಕ್ಕೆ ನಿಖರ ಕಾರಣ ತಿಳಿದಿಲ್ಲವಾದ್ರೂ ಚಿತ್ರದಲ್ಲಿ ಕಾಣುವಂತೆ, ಬಾನೆಟ್ ತೆರೆದು ಹಾರಿ ವಿಂಡ್‌ಶೀಲ್ಡ್‌ಗೆ ಅಪ್ಪಳಿಸಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ.

tata-harrier-owner-dismay-car-bonnet-open-while-driving

ಈ ಕುರಿತು ವಿಡಿಯೋ ಸಮೇತ ಹಂಚಿಕೊಂಡಿರುವ ಗಿರಿರಾಜ್ ಶರ್ಮ್ ಎಂಬಾತ(ಮಾಲೀಕ ಆಗಿರಬಹುದು) ಮರುಧರ ಮೋಟಾರ್ಸ್ ಟಾಟಾ ಡೀಲರ್‌ನಿಂದ ಕೆಟ್ಟ ಸೇವೆ ಪಡೆದಿದ್ದೇನೆ. ಇಂದು ನನ್ನ ವಾಹನವನ್ನು ಸರ್ವಿಸ್ ಸೆಂಟರ್‌ನಿಂದ ಹಿಂಪಡೆದು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಮುಂಭಾಗದ ಬೋನೆಟ್ ಇದ್ದಕ್ಕಿದ್ದಂತೆ ತೆರೆಕೊಂಡಿದೆ ಎಂದು ಟ್ವಿಟ್ಟರ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಟಾಟಾ ಡೀಲರ್‌ನಿಂದ ಕೆಟ್ಟ ಸೇವೆ: ಮಾಲೀಕನ ಪ್ರಕಾರ, ಟಾಟಾ ಡೀಲರ್‌ನಿಂದ ಎಸ್‌ಯುವಿ ಸರ್ವಿಸ್ ಆದ ನಂತರ ಅದೇ ದಿನ ಈ ಘಟನೆ ಸಂಭವಿಸಿದೆ. ಅವರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ಬಾನೆಟ್ ಇದ್ದಕ್ಕಿದ್ದಂತೆ ಹಾರಿ ವಿಂಡ್‌ಸ್ಕ್ರೀನ್‌ಗೆ ಅಪ್ಪಳಿಸಿದೆ. ಇದೇ ವೇಳೆ ಹೆದ್ದಾರಿಯಲ್ಲಿ ಮಾಲೀಕ ಎಷ್ಟು ದೂರ ದಾರಿ ಕಾಣದೆ ಓಡಿಸಿದ್ದಾರೆ ಎಂಬುದು ತಿಳಿದಿಲ್ಲ. ಆದ್ರೆ ಸಂಭವನೀಯ ಅಪಘಾತದಿಂದ ತಪ್ಪಿಸಿಕೊಂಡಿದ್ದಾರೆ.

tata-harrier-owner-dismay-car-bonnet-open-while-driving

ಹೀಗೆ ಬಾನೆಟ್ ವಿಂಡ್‌ಶೀಲ್ಡ್‌ಗೆ ಅಪ್ಪಳಿಸಿ ಮುಂದೆ ಏನಾಗುತ್ತಿದೆ ಎಂದು ತಿಳಿಯದೆ ಚಾಲಕ ಗೊಂದಲಕ್ಕೊಳಗಾಗಿ ಭಯದಿಂದ ಓಡಿಸಬೇಕಾಗುತ್ತದೆ. ಅಲ್ಲದೇ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ರು ಹಿಂಬದಿಯಲ್ಲಿ ಬರುವವರು ಡಿಕ್ಕಿ ಹೊಡೆಯುವ ಸಾಧ್ಯತೆಗಳು ಕೂಡ ಹೆಚ್ಚು. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತಮ ಮಾರ್ಗವೆಂದರೆ 'ಹಜಾರ್ಡ್ ಲೈಟ್'‌ಗಳನ್ನು ಹಾಕಿ ನಿಧಾನವಾಗಿ ಕಾರನ್ನು ರಸ್ತೆ ಬದಿಗೆ ಓಡಿಸುವುದು.

ಕಾರಣ ಏನಿರಬಹುದು?: ಸಂಪೂರ್ಣ ವಿವರಗಳು ಲಭ್ಯವಿಲ್ಲದ ಕಾರಣ, ಈ ಘಟನೆಯಲ್ಲಿ ತಪ್ಪು ಯಾರದು ಎಂದು ಹೇಳುವುದು ಕಷ್ಟ. ಆದ್ರೂ ಕೆಲ ಸಮಭವನೀಯತೆಗಳನ್ನು ಇಲ್ಲಿ ನೋಡೋಣ. ಹೇಗೂ ಕಾರನ್ನು ಸರ್ವಿಸ್ ನೀಡಿದ್ದರಿಂದ, ಒಂದು ಬಾನೆಟ್ ಅನ್ನು ಸರಿಯಾಗಿ ಲಾಕ್ ಮಾಡಿಲ್ಲ ಅಥವಾ ಅದನ್ನು ಭಾಗಶಃ ಮುಚ್ಚಿದ್ರೂ ಯಾರೂ ಅದನ್ನು ಗಮನಿಸದಿರಬಹುದು. ಅಲ್ಲದೇ ಹ್ಯಾರಿಯರ್ ಬಾನೆಟ್ ಓಪನ್ ವಾರ್ನಿಂಗ್ ವ್ಯವಸ್ಥೆಯನ್ನು ಹೊಂದಿಲ್ಲ.

tata-harrier-owner-dismay-car-bonnet-open-while-driving

ಮತ್ತೊಂದು ಸಾಧ್ಯತೆಯೆಂದರೆ ಲಾಕಿಂಗ್ ವ್ಯವಸ್ಥೆಯು ಯಾಂತ್ರಿಕವಾಗಿ ವೈಫಲ್ಯವಾಗಿರಬಹುದು. ಲಾಕಿಂಗ್ ಯಾಂತ್ರಿಕತೆಯ ದೋಷಯುಕ್ತ ಫಿಟ್ಟಿಂಗ್‌ನಿಂದ ಇದು ಸಂಭವಿಸಿರಬಹುದು. ಕಾರು ಕಂಪನಿಗಳು ವಿವಿಧ ಮಾರಾಟಗಾರರಿಂದ ಬಿಡಿ ಭಾಗಗಳನ್ನು ಖರೀದಿಸುತ್ತಾರೆ. ಪ್ರತಿಯೊಂದು ಘಟಕದ ಗುಣಮಟ್ಟವನ್ನು ನಿರ್ಧರಿಸುವುದು ಅಸಾಧ್ಯ. ಲೋಹದ ಭಾಗಗಳು ಒಳಗೆ ಆಳವಾದ ಸೂಕ್ಷ್ಮ ಬಿರುಕುಗಳನ್ನು ಹೊಂದಿರಬಹುದು.

ಇದೇ ಬಿರುಕುಗಳು ಕಾಲಾನಂತರದಲ್ಲಿ ವಿಫಲವಾಗಬಹುದು ಎಂಬುದು ನಮ್ಮ ಅಭಿಪ್ರಾಯವಷ್ಟೇ. ಇಲ್ಲಿ ನಿಖರವಾಗಿ ಏನು ತಪ್ಪಾಗಿದೆ ಎಂಬುದನ್ನು ನಿರ್ಧರಿಸಲು ವಿವರವಾದ ತನಿಖೆಯ ಅಗತ್ಯವಿದೆ. ಒಟ್ಟಾರೆ ಮಾಲೀಕ ಹೇಳುವಂತೆ ಬಾನೆಟ್ ಸಾರಿಯಾಗಿ ಮುಚ್ಚದೆ ಕಾರನ್ನು ಓಡಿಸಿದಾಗ ಬಾನೆಟ್ ಸದ್ದು ಮಾಡುವುದಿಲ್ಲವೇ? ಒಂದಷ್ಟು ದೂರ ಬಂದ ಬಳಿಕ ಬಾನೆಟ್ ತೆರೆದುಕೊಡಿಂಡಿದೆ ಎಂದರೆ ಗುಣಮಟ್ಟದಲ್ಲಿ ಲೋಪವಿರಬಹುದು ಎಂಬುದು ಅವರ ವಾದ.

ಆದ್ರೆ ಮಾರುಕಟ್ಟೆಯಲ್ಲಿ ಟಾಟಾ ನಿರ್ಮಾದ ಕಾರುಗಳು ಗುಣಮಟ್ಟದಲ್ಲಿ ಅಗ್ರಸ್ಥಾನದಲ್ಲಿವೆ. ಮಾಲೀಕನ ಆರೋಪಕ್ಕೆ ಮೇಲೆ ತಿಳಿಸಿದ ಕಾರಣಗಳಲ್ಲಿ ಒಂದು ಕಂಡಿತ ಇದ್ದೇ ಇರುತ್ತದೆ. ಈ ಕುರಿತು ಹೆಚ್ಚಿನ ತನಿಖೆಯಾದ ಬಳಿಕವಷ್ಟೇ ವಿವರವಾದ ಮಾಹಿತಿ ಹೊರ ಬರಲಿದೆ. ಈ ಕುರಿತ ಮಾಹಿತಿ ಹೊರಬಿದ್ದಲ್ಲಿ ಕಂಡಿತ ಡ್ರೈವ್‌ಸ್ಪಾರ್ಕ್ ಓದುಗರಿಗೆ ತಿಳಿಸಿಕೊಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, August 7, 2023, 12:15 [IST]
English summary
Tata harrier owner dismay car bonnet open while driving
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+