Tata Harrier Owner Power: ವಿಡಿಯೋ.. ಮಾರುತಿ ಸುಜುಕಿ ವ್ಯಾಗನ್‌ಆರ್‌ನ್ನು ಎತ್ತಿಟ್ಟ ಟಾಟಾ ಹ್ಯಾರಿಯರ್ 'ಬಲಭೀಮ' ಮಾಲೀಕ

ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಚಾರಗಳು ಭಾರೀ ವೈರಲ್ ಆಗುತ್ತವೆ. ಸದ್ಯ, ಈಗೊಂದು ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಮಾರುತಿ ಸುಜುಕಿ ವ್ಯಾಗನ್‌ಆರ್‌ನ್ನು ಎತ್ತಿಟ್ಟಿದ್ದಾನೆ. ಅದನ್ನು ನೋಡಿದವರೆಲ್ಲರೂ ಏನ್ ಗುರು.. ಇವನು ಆಧುನಿಕ ಬಲಭೀಮನೇ ಇರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಭಾರತದಂತಹ ದೇಶದ ನಗರ ಪ್ರದೇಶದ ರಸ್ತೆಗಳಲ್ಲಿ ಮೊದಲೇ ಸ್ಥಳಾವಕಾಶ ಕಮ್ಮಿ. ಅದರಲ್ಲೂ ಕಾರುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದ್ದು, ಸರಿಯಾಗಿ ಓಡಿಸದವರೇ ಜಾಸ್ತಿ. ಕೆಲವರು ನಿಗದಿತ ಸ್ಥಳದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡದೇ ರಸ್ತೆಯಲ್ಲಿಯೇ ನಿಲ್ಲಿಸಿರುತ್ತಾರೆ. ಇದರಿಂದ ಪಾದಚಾರಿಗಳು ಸೇರಿದಂತೆ ಇತರೆ ದ್ವಿಚಕ್ರ ಹಾಗೂ ಕಾರು ಚಾಲಕರೂ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಹಲವರು ಬಾರಿ ನಿರ್ಮಾಣವಾಗುತ್ತದೆ. ಇದೀಗ, ವೈರಲ್ ಆಗಿರುವ ವಿಡಿಯೋ ಸಹ ಅಂತಹದೇ ಘಟನೆಗೆ ಸಾಕ್ಷಿಯಾಗಿದೆ.

Tata Harrier Owner Power: ವಿಡಿಯೋ.. ಮಾರುತಿ ಸುಜುಕಿ ವ್ಯಾಗನ್‌ಆರ್‌ನ್ನು ಎತ್ತಿಟ್ಟ ಟಾಟಾ ಹ್ಯಾರಿಯರ್ ಬಲಭೀಮ ಮಾಲೀಕ

ನೋಡುವುದಕ್ಕೆ ಅದು ಕಿರಿದಾದ ರಸ್ತೆ.. ಅದರಲ್ಲಿಯೂ ಒಂದು ಬದಿಯಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ವ್ಯಕ್ತಿಯೊಬ್ಬ ಇಲ್ಲಿಯೇ ಟಾಟಾ ಹ್ಯಾರಿಯರ್ ಚಾಲನೆ ಮಾಡಿಕೊಂಡು ಬರುತ್ತನೆ. ಆದರೆ, ಮಾರುತಿ ಸುಜುಕಿ ವ್ಯಾಗನ್‌ಆರ್‌ನ್ನು ನಿಗದಿತ ಸ್ಥಳದಲ್ಲಿ ಪಾರ್ಕ್ ಮಾಡದೆ, ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿರುತ್ತದೆ. ಇದನ್ನು ಕಂಡ ಆ ಚಾಲಕ, ಸೀದಾ ಹ್ಯಾರಿಯರ್ ಎಸ್‌ಯುವಿಯಿಂದ ಇಳಿದು ತನ್ನೆರಡು ಕೈಗಳ ಬಲವನ್ನು ಉಪಯೋಗಿಸಿ, ವ್ಯಾಗನ್‌ಆರ್‌ನ್ನು ಪಕ್ಕಕ್ಕೆ ಸರಿಸುತ್ತಾನೆ.

ನಂತರ, ಪುನಃ ವಾಪಾಸ್ ಬಂದು ತನ್ನ ಜರ್ನಿಯನ್ನು ಮುಂದುವರಿಸುತ್ತಾನೆ. ಆ ವಿಡಿಯೋವನ್ನು ಹ್ಯಾರಿಯರ್ ಕಾರಿನಲ್ಲಿದ್ದ ಸಹ ಪ್ರಯಾಣಿಕ ಸಂಪೂರ್ಣವಾಗಿ ಚಿತ್ರೀಕರಿಸುತ್ತಿರುತ್ತಾನೆ. ಇದೀಗ, ಇನ್ಸ್ಟಾಗ್ರಾಮ್ ನಲ್ಲಿ ಸಖತ್ ಕ್ರೇಜ್ ಸೃಷ್ಟಿಸುತ್ತಿರುವ 'ಬಲಭೀಮ'ನ ವಿಡಿಯೋಗೆ ನೆಟ್ಟಿಗರು, ಸೂಪರ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರನೊಬ್ಬ, 'ನಿನ್ನೆ ನಾನು ಈ ಸಾಹಸವನ್ನು ಆಕ್ಟಿವಾ ಸ್ಕೂಟರ್ ನೊಂದಿಗೆ ಮಾಡಿದೆ' ಎಂದು ತಮಾಷೆಯಾಗಿ ಬರೆದಿದ್ದಾನೆ.

ಮತ್ತೊಬ್ಬ, ಟಾಟಾ ಹ್ಯಾರಿಯರ್ ಮಾಲೀಕನಿಗೆ ಹೋಲಿಸಿದರೆ, 'ಮಾರುತಿ ಕಾರಿನ ನಿರ್ಮಾಣ ಗುಣಮಟ್ಟ ಕಡಿಮೆಯಿದೆ ಎಂಬಂತೆ ತೋರುತ್ತಿದೆ' ಎಂದಿದ್ದಾನೆ. ಇನ್ನೊಬ್ಬರು, 'ಪಂಜಾಬಿ ಪವರ್' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಈ ರೀತಿಯ ಪವರ್ ಇರುವ ವ್ಯಕ್ತಿ ನಮ್ಮ ಪುಣೆಗೂ ಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಭಾರೀ ವೈರಲ್ ಆಗುತ್ತಿರುವ ಈ ವಿಡಿಯೋ ಅಪ್ಲೋಡ್ ಮಾಡಿರುವ ಕೆಲವೇ ದಿನಗಳಲ್ಲಿ 322,061 ಹೆಚ್ಚಿನ ಲೈಕ್ ಪಡೆದುಕೊಂಡಿದೆ.

ಈ ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೂ ಸಿಖ್ ವ್ಯಕ್ತಿಯ ಶಕ್ತಿ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಬೇರೆ ಯಾವುದೇ ವ್ಯಕ್ತಿಗಳಾಗಿದ್ದರೆ, ತಮಗೇಕೆ ಎಂದು ವಾಹನವನ್ನು ರಿವರ್ಸ್ ತೆಗೆದುಕೊಂಡು ವಾಪಾಸ್ ಹೋಗುತ್ತಿದ್ದರು. ಇಲ್ಲವೇ, ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಕಾರಿನ ಮಾಲೀಕ ಅಥವಾ ಪಾರ್ಕಿಂಗ್ ನಿರ್ವಹಣಾ ಸಿಬ್ಬಂದಿಯೊಂದಿಗೆ ಜಗಳಕ್ಕೆ ಇಳಿಯುತ್ತಿದ್ದರು. ಸಿಖ್ ಚಾಲಕ ಅದನ್ನೆಲ್ಲ ಮಾಡದೇ ವ್ಯಾಗನ್‌ಆರ್‌ ಕಾರನ್ನು ಪಕ್ಕಕ್ಕೆ ಸರಿಸಿ, ತನ್ನ ಪಾಡಿಗೆ ತಾನು ಹೊರಟು ಹೋಗಿದ್ದಾನೆ.

ಒಂದೊಮ್ಮೆ ಇಂತಹ ಸನ್ನಿವೇಶವು ನಿಮಗೂ ಎದುರಾದರೆ, ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡಿದ ಕಾರಿನ ಚಿತ್ರವನ್ನು ತೆಗೆದು ಟ್ರಾಫಿಕ್ ಪೊಲೀಸರಿಗೆ ಕಳುಹಿಸಿ. ಆಗ ಅವರು, ಸಂಬಂಧಿಸಿದ ಕಾರಿನ ಮಾಲೀಕರಿಗೆ ನೋಟಿಸ್ ನೀಡುತ್ತಾರೆ. ಇನ್ನೊಂದು ಮಾರ್ಗವೆಂದರೆ, ಯುಟರ್ನ್ ತೆಗೆದುಕೊಳ್ಳಿ. ಅದು ಸಾಧ್ಯವಾಗದಿದ್ದಾಗ ಪೊಲೀಸರನ್ನು ಕರೆ ಮಾಡಿ ತಿಳಿಸಿ, ಅವರು ಸ್ಥಳಕ್ಕೆ ತಕ್ಷಣ ಧಾವಿಸಿ, ಸಮಸ್ಯೆಯನ್ನು ಬಗೆಹರಿಸಿ, ನಿಮ್ಮ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುತ್ತಾರೆ.

ಇನ್ನು, ನಗರ ಪ್ರದೇಶದ ರಸ್ತೆಗಳಲ್ಲಿ ಸ್ಥಳಾವಕಾಶ ಕಡಿಮೆ ಇರುತ್ತದೆ. ಅದರಲ್ಲಿಯೂ ಈ ರೀತಿ ಪಾರ್ಕಿಂಗ್ ಮಾಡಿ, ಇತರೆ ವಾಹನ ಸವಾರರಿಗೆ ತೊಂದರೆ ನೀಡುವುದು ಎಷ್ಟರಮಟ್ಟಿಗೆ ಸರಿ. ವಿಡಿಯೋದಲ್ಲಿರುವ ಆ ರೋಡ್, ಮುಖ್ಯರಸ್ತೆಯಲ್ಲ ಎಂಬುದುದು ಗೊತ್ತಾಗುತ್ತದೆ. ಒಂದೊಮ್ಮೆ ಮುಖ್ಯ ರಸ್ತೆಯಾಗಿ ಈ ರೀತಿ ಮಾಡಿದಾಗ ಅಲ್ಲಿ ಯಾವುದೇ ತುರ್ತು ಅಗತ್ಯ ವಾಹನಗಳು ಬಂದಾಗ ಪರಿಸ್ಥಿತಿ ಏನಾಗಬೇಕಿತ್ತು? ಒಟ್ಟಿನಲ್ಲಿ ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಒಳ್ಳೆ ಚಾಲಕರ ಲಕ್ಷಣ.

Article Published On: Tuesday, April 11, 2023, 15:10 [IST]
English summary
Tata harrier owner moves wrongly parked wagonr details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+