Tata: ಟಾಟಾದಿಂದ ದೊಡ್ಡ ಘೋಷಣೆ: ಆಂಗ್ಲರ ನಾಡಲ್ಲಿ ಪಾರುಪತ್ಯ ಶುರು

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿರುವ ಟಾಟಾ (Tata) ದೇಶೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿದ್ದು, ಸೇಲ್ಸ್ ನಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಕಂಪನಿಗೆ ಈ ಪರಿಪ್ರಮಾಣದಲ್ಲಿ ಯಶಸ್ಸು ತಂದುಕೊಡಲು ಟಿಯಾಗೊ ಇವಿ, ಟಿಗೊರ್ ಇವಿ ಹಾಗೂ ನೆಕ್ಸಾನ್ ಇವಿಗಳು ಪ್ರಮುಖ ಕಾರಣವಾಗಿವೆ.

ಇದೀಗ, ಟಾಟಾ ಆಂಗ್ಲರ ನಾಡು ಬ್ರಿಟನ್ ನಲ್ಲಿ ಪಾರುಪತ್ಯ ಸಾಧಿಸಲು ಮುಂದಾಗಿದ್ದು, ಎಲೆಕ್ಟ್ರಿಕ್ ವಾಹನ (ಇವಿ)ಗಳಲ್ಲಿ ಬಳಕೆ ಮಾಡುವ ಬ್ಯಾಟರಿ ತಯಾರಿಕೆಗೆ ಉತ್ಪಾದನಾ ಘಟಕ (Gigafactory) ಸ್ಥಾಪಿಸಲು 4 ಶತಕೋಟಿ ಪೌಂಡ್‌ (ಸುಮಾರು ರೂ.42,500 ಕೋಟಿ) ಹೂಡಿಕೆ ಮಾಡುವುದಾಗಿ ಬುಧವಾರ ಘೋಷಣೆ ಮಾಡಿದೆ. ನೂತನ ಫ್ಯಾಕ್ಟರಿ ಇಂಗ್ಲೆಂಡ್‌ನ ಸೋಮರ್‌ಸೆಟ್‌ನಲ್ಲಿರುವ ಬ್ರಿಡ್ಜ್‌ವಾಟರ್ ನಲ್ಲಿ ತಲೆ ಎತ್ತಲಿದೆ.

Tata: ಟಾಟಾದಿಂದ ದೊಡ್ಡ ಘೋಷಣೆ: ಆಂಗ್ಲರ ನಾಡಲ್ಲಿ ಪಾರುಪತ್ಯ ಶುರು

ಈ ಉತ್ಪಾದನಾ ಘಟಕದಿಂದ ಟಾಟಾ, ತನ್ನ ಮಾಲೀಕತ್ವದ ಜಾಗ್ವಾರ್ ಲ್ಯಾಂಡ್ ರೋವರ್ ಹಾಗೂ ಇತರೆ ಕಾರು ತಯಾರಿಕೆಗೆ ಬ್ಯಾಟರಿಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿದೆ. ಟಾಟಾದ ಬೃಹತ್ ಹೂಡಿಕೆಯಿಂದ ಹೊಸ ಗಿಗಾಫ್ಯಾಕ್ಟರಿ 2026ರಿಂದ ಕಾರ್ಯಾರಂಭ ಮಾಡಲಿದೆ. ಇದು, ಭಾರತ ಹೊರಗೆ ಟಾಟಾ ನಿರ್ಮಿಸುತ್ತಿರುವ ಮೊದಲ ಉತ್ಪಾದನಾ ಘಟಕವಾಗಿದ್ದು, ಯುರೋಪ್‌ನಲ್ಲಿಯೇ ಅತಿದೊಡ್ಡದು ಎಂಬ ಹೆಗ್ಗಳಿಗೆ ಪಾತ್ರವಾಗುತ್ತಿದೆ.

1980ರ ದಶಕದಲ್ಲಿ ಪ್ರಮುಖ ವಾಹನ ತಯಾರಕ ನಿಸ್ಸಾನ್ ಯುಕೆಯಲ್ಲಿ ಬಂಡವಾಳ ಹೂಡಿಕೆ ಮಾಡಿದ ಬಳಿಕ, ಇದು ಅಲ್ಲಿನ ಆಟೋಮೊಬೈಲ್ ಇತಿಹಾಸದಲ್ಲಿ ಅತಿದೊಡ್ಡ ಹೂಡಿಕೆಯಾಗಿದೆ ಎಂದು ಹೇಳಲಾಗಿದೆ. ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಿರುವುದರಿಂದ ಟಾಟಾಗೆ ಹೆಚ್ಚಿನ ಪ್ರಮಾಣದಲ್ಲಿ ಸಬ್ಸಿಡಿ ದೊರೆಯಬಹುದು ಎಂದು ವರದಿಯಾಗಿದೆ. ಈ ಬಗ್ಗೆ ಟಾಟಾ ಅಥವಾ ಬ್ರಿಟನ್ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

Tata: ಟಾಟಾದಿಂದ ದೊಡ್ಡ ಘೋಷಣೆ: ಆಂಗ್ಲರ ನಾಡಲ್ಲಿ ಪಾರುಪತ್ಯ ಶುರು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್‌ನ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಅವರು, 'ಟಾಟಾ ಗ್ರೂಪ್, ಇಂಗ್ಲೆಂಡ್‌ನಲ್ಲಿ ಯುರೋಪ್‌ನ ಅತಿದೊಡ್ಡ ಬ್ಯಾಟರಿ ಸೆಲ್ ಉತ್ಪಾದನಾ ಘಟಕ ಸ್ಥಾಪಿಸಲಿದೆ ಎಂಬುದನ್ನು ಘೋಷಿಸಲು ಸಂತೋಷಪಡುತ್ತೇನೆ. ನಮ್ಮ ಬೃಹತ್ ಹೂಡಿಕೆಯು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವಂತೆ ಆಟೋಮೊಬೈಲ್ ಕ್ಷೇತ್ರದ ಪರಿವರ್ತನೆಗೆ ಶಕ್ತಿ ತುಂಬಲು ನೆರೆವಾಗುತ್ತದೆ' ಎಂದು ಹೇಳಿದ್ದಾರೆ.

ಟಾಟಾದ ಬಂಡವಾಳ ಹೂಡಿಕೆ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್, 'ಇದು, ಯುಕೆ ಆಟೋಮೊಬೈಲ್ ವಲಯದಲ್ಲಿ ಇದುವರೆಗಿನ ಅತಿದೊಡ್ಡ ಹೂಡಿಕೆಯಾಗಿದೆ. ದೇಶದಲ್ಲಿ ಕೌಶಲ್ಯ ಹೊಂದಿರುವ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸುತ್ತದೆ. ಜಾಗತಿಕವಾಗಿ ಬ್ರಿಟನ್ ಸಹ ಶೂನ್ಯ ಹೊರಸೂಸುವಿಕೆಯತ್ತ ಮುನ್ನಡೆಯುವುದನ್ನು ಬಲಪಡಿಸುತ್ತದೆ. ಜೊತೆಗೆ ದೇಶದ ಆರ್ಥಿಕತೆಯ ಬೆಳವಣಿಗೆ ನೆರವಾಗುತ್ತದೆ' ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ಬ್ಯಾಟರಿ ತಯಾರಿಕ ಘಟಕವನ್ನು ಸ್ಪೇನ್ ದೇಶದಲ್ಲಿ ಟಾಟಾ ಆರಂಭಿಸಲು ಒಲವನ್ನು ಹೊಂದಿತ್ತು. ಆದರೆ, ಬ್ರಿಟನ್ ಸರ್ಕಾರದೊಂದಿಗೆ ಮಾತುಕತೆಗಳು ಫಲಪ್ರದವಾದ ಹಿನ್ನೆಲೆ, ಯುಕೆಯಲ್ಲಿ ಗಿಗಾಫ್ಯಾಕ್ಟರಿಗಾಗಿ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರಿಂದ ಯುರೋಪ್ ಮಾರುಕಟ್ಟೆ ಟಾಟಾದ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಬರಬಹುದು. ಈ ತಯಾರಕ ಘಟಕದಿಂದ 4 ಸಾವಿರ ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 19, 2023, 18:37 [IST]
English summary
Tata invest rs 42500 crore ev battery plant uk details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+