ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ಸಬ್ಸಿಡಿ ಪಟ್ಟಿಯಿಂದ ತೆಗೆದುಹಾಕಿರುವ ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ಟಾಟಾ ಮೋಟಾರ್ಸ್ ದೆಹಲಿ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದೆ.

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಗ್ರಾಹಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ತನ್ನ ಸಬ್ಸಿಡಿ ಪಟ್ಟಿಯಿಂದ ತೆಗೆದುಹಾಕಿತ್ತು. ಟಾಟಾ ಮೋಟಾರ್ಸ್ ಕಂಪನಿ ಹೇಳಿಕೊಂಡಿರುವಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 312 ಕಿ.ಮೀಗಳವರೆಗೆ ಚಲಿಸುತ್ತಿಲ್ಲವೆಂದು ನೆಕ್ಸಾನ್ ಎಲೆಕ್ಟ್ರಿಕ್ ಕಾರು ಗ್ರಾಹಕರು ದೂರು ನೀಡಿದ್ದರು.

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ದೆಹಲಿ ಹೈಕೋರ್ಟ್'ನಿಂದ ತಡೆಯಾಜ್ಞೆ ಪಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್ ವಕ್ತಾರರು ಅರ್ಹ ವಾಹನಗಳ ಪಟ್ಟಿಯಿಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ತೆಗೆದು ಹಾಕಿರುವ ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಈ ಪ್ರಕರಣದಲ್ಲಿ ಅಫಿಡವಿಟ್ ಸಲ್ಲಿಸಲು ಮಾನ್ಯ ಹೈಕೋರ್ಟ್, ದೆಹಲಿ ಸರ್ಕಾರಕ್ಕೆ ಕಾಲಾವಕಾಶ ನೀಡಿದೆ ಎಂದು ಹೇಳಿದ್ದಾರೆ. ಈ ಪ್ರಕರಣದ ಸಂಬಂಧ ತನ್ನ ವಾದ ಮಂಡಿಸಿದ ಟಾಟಾ ಮೋಟಾರ್ಸ್ ದೆಹಲಿ ಸರ್ಕಾರದ ನಿರ್ಧಾರವು ಏಕ ಪಕ್ಷೀಯವಾಗಿದೆ.

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಅಸಮಾಧಾನಗೊಂಡ ಗ್ರಾಹಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರವನ್ನು ನ್ಯಾಯಯುತವೆಂದು ಪರಿಗಣಿಸಬಾರದು ಎಂದು ತಿಳಿಸಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಸೇರಿದಂತೆ ಎಲ್ಲಾ ವಾಹನಗಳ ನೈಜ ವ್ಯಾಪ್ತಿಯು ಕಂಪನಿಗಳು ಹೇಳುವುದಕ್ಕಿಂತ ಭಿನ್ನವಾಗಿರುತ್ತದೆ ಎಂದು ಈ ಮೇಲ್ಮನವಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಏಕೆಂದರೆ ವಾಹನದ ಮೈಲೇಜ್ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಈ ಅಂಶಗಳು ಸಂಚಾರ ಪರಿಸ್ಥಿತಿ, ವಾಹನದಲ್ಲಿರುವ ತೂಕ, ಎಸಿ ಬಳಕೆ, ವಾಹನದ ಸ್ಥಿತಿ, ಚಾಲಕನ ಕೌಶಲ್ಯ ಮುಂತಾದ ಸಂಗತಿಗಳನ್ನು ಒಳಗೊಂಡಿರುತ್ತವೆ. ಈ ಅಂಶಗಳಿಂದ ಪರೀಕ್ಷಿಸಲ್ಪಟ್ಟ ಅನೇಕ ಉತ್ಪನ್ನಗಳು ಇರುವುದರಿಂದ ಟಾಟಾ ಮೋಟಾರ್ಸ್‌ ಹೇಳುತ್ತಿರುವುದು ಮಾನ್ಯವಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ವಾಹನ ಉದ್ಯಮದಲ್ಲಿ ನಿಜವಾದ ರಸ್ತೆ ಪರೀಕ್ಷೆಗಳಲ್ಲಿ ಮಾಡಿದ ಹಕ್ಕುಗಳಿಗೆ ನಿಲ್ಲುವಂತಹ ವಾಹನಗಳನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟಕರವಾಗಿರುತ್ತದೆ.

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಉದ್ಯಮ ಮಾನದಂಡಗಳಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸದ ಹೊರತು ದೆಹಲಿ ಸರ್ಕಾರವು ಈ ಪ್ರಕರಣವನ್ನು ಗೆಲ್ಲುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಈ ಹಿಂದೆ ದೆಹಲಿ ಸರ್ಕಾರಕ್ಕೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವ್ಯಾಪ್ತಿಯನ್ನು ವಾಹನಗಳನ್ನು ಪರೀಕ್ಷಿಸಲು ಸರ್ಕಾರವೇ ಅನುಮೋದಿಸಿರುವ ಎಆರ್‌ಎಐ ಸಂಸ್ಥೆಯೇ ಪರೀಕ್ಷಿಸಿದೆ ಎಂದು ತಿಳಿಸಿತ್ತು.

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ಪರೀಕ್ಷಾ ಪರಿಸ್ಥಿತಿಗಳ ಆಧಾರದ ಮೇಲೆ ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 312 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಎಆರ್‌ಎಐ ಪ್ರಮಾಣೀಕರಿಸಿತ್ತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ತಡೆಯಾಜ್ಞೆ ಪಡೆದ ಟಾಟಾ ಮೋಟಾರ್ಸ್

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಫೇಮ್ 2 ಯೋಜನೆಯಡಿ ಅಗತ್ಯವಿರುವ ಕನಿಷ್ಠ 140 ಕಿ.ಮೀ ಮಿತಿಯನ್ನು ಸುಲಭವಾಗಿ ಪೂರೈಸುತ್ತದೆ ಎಂದು ಟಾಟಾ ಮೋಟಾರ್ಸ್ ಕಂಪನಿ ಹೇಳಿದೆ.

Most Read Articles

Kannada
English summary
Tata Motors gets stay against Delhi government decision. Read in Kannada.
Story first published: Thursday, March 11, 2021, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X