ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಇವಿ ಭಾರತದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರನ್ನು ಕೇರಳ ಸರ್ಕಾರವು ಹಲವು ಇಲಾಖೆಗಳ ಬಳಕೆಗಾಗಿ ಖರೀದಿಸಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ 45 ಯೂನಿಟ್'ಗಳನ್ನು ಇತ್ತೀಚಿಗೆ ಕೇರಳ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಈ ಹಸ್ತಾಂತರ ಕಾರ್ಯಕ್ರಮವು ಕಳೆದ ತಿಂಗಳು ತಿರುವನಂತಪುರದಲ್ಲಿ ನಡೆಯಿತು. ಈಗ ನೆಕ್ಸಾನ್ ಇವಿ ಕಾರನ್ನು ಕೇರಳ ರಾಜ್ಯದ ಹಲವು ಅಧಿಕಾರಿಗಳು ಬಳಸುತ್ತಿದ್ದಾರೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಈ ಹಿಂದೆ ಟೊಯೊಟಾ ಇನೋವಾ, ಮಹೀಂದ್ರಾ ಬೊಲೆರೊ, ಸುಜುಕಿ ಜಿಪ್ಸಿ ಕಾರುಗಳನ್ನು ಬಳಸುತ್ತಿದ್ದ ಅಧಿಕಾರಿಗಳು ಈಗ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಬಳಸುತ್ತಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಈ ಎಲೆಕ್ಟ್ರಿಕ್ ಕಾರು ಹೊಸ ತಲೆಮಾರಿನ ಕಾರಿನಲ್ಲಿರಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಈ ಕಾರು ಕೇರಳದ ಸರ್ಕಾರಿ ಅಧಿಕಾರಿಗಳಿಗೆ ಯಾವ ರೀತಿಯ ಅನುಭವವನ್ನು ನೀಡುತ್ತಿದೆ ಎಂಬ ವೀಡಿಯೊವೊಂದನ್ನು ಯೂಟ್ಯೂಬ್'ನಲ್ಲಿ ಪೋಸ್ಟ್ ಮಾಡಲಾಗಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಅಧಿಕಾರಿಗಳು ಈ ಕಾರಿನಲ್ಲಿ ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ಪ್ರಯಾಣಿಸುತ್ತಾರೆ. ಈ ಮೂಲಕ ಅಧಿಕಾರಿಗಳು ಕಚೇರಿಯಲ್ಲಿ ಕೆಲಸ ಮಾಡುವ ಸಮಯಕ್ಕಿಂತ ನೆಕ್ಸಾನ್ ಕಾರಿನಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ನೆಕ್ಸಾನ್ ಇವಿ ಕ್ಲಚ್ ಹೊಂದಿರದ ಆಟೋಮ್ಯಾಟಿಕ್ ಕಾರು. ಆದ್ದರಿಂದ ಈ ಕಾರನ್ನು ಚಾಲನೆ ಮಾಡಲು ಹೆಚ್ಚು ಶ್ರಮ ಪಡಬೇಕಾಗಿಲ್ಲ ಎಂಬುದು ಈ ಕಾರಿನಲ್ಲಿ ಸಂಚರಿಸಿದ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸ್ಟಾಂಡರ್ಡ್ ಕಾರಿನಲ್ಲಿರುವಂತಹ ಫೀಚರ್ ಗಳನ್ನೇ ಹೊಂದಿದೆ. ಅಧಿಕಾರಿಗಳು ಈ ಕಾರಿನಲ್ಲಿ ಪ್ರತಿ ದಿನ ಸರಾಸರಿ 75ರಿಂದ 100 ಕಿ.ಮೀಗಳವರೆಗೆ ಪ್ರಯಾಣಿಸುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಈ ಕಾರಿನಲ್ಲಿ ಸಂಚರಿಸುವುದರಿಂದ ಹೆಚ್ಚು ವೆಚ್ಚವಾಗುತ್ತದೆ ಎಂಬ ಭಯವಿಲ್ಲ. ಈ ಕಾರಿನಲ್ಲಿ 30.2 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್‌ ಆದ ನಂತರ ಕಾರು 312 ಕಿ.ಮೀಗಳವರೆಗೆ ಚಲಿಸುತ್ತದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಈ ಕಾರಿನಲ್ಲಿ ಸಂಚರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಈ ಕಾರು ಜನರ ಗಮನವನ್ನು ಸೆಳೆದಿದೆ. ಈ ಕಾರಣಕ್ಕೆ ನೆಕ್ಸಾನ್ ಇವಿ ಕಾರು ಕಣ್ಣಿಗೆ ಬಿದ್ದ ತಕ್ಷಣ ಜನರು ತಮ್ಮ ವಾಹನಗಳನ್ನು ನಿಧಾನಗೊಳಿಸಿ, ಕಾರನ್ನು ವೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್ 127 ಬಿಹೆಚ್'ಪಿ ಪವರ್ ಹಾಗೂ 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಜಿಪ್ಟ್ರಾನ್ ಟೆಕ್ನಾಲಜಿಯನ್ನು ನೀಡಲಾಗಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್ ಹಾಗೂ ಎಕ್ಸ್‌ಝಡ್ ಪ್ಲಸ್ ಲಕ್ಸ್ ಎಂಬ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.13.99 ಲಕ್ಷಗಳಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಶ್ಲಾಘಿಸಿದ ಪೊಲೀಸ್ ಅಧಿಕಾರಿಗಳು

ಟಾಟಾ ಮೋಟಾರ್ಸ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಝಡ್ಎಸ್ ಹಾಗೂ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata Nexon electric car gets appreciation from Kerala police. Read in Kannada.
Story first published: Wednesday, December 23, 2020, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X