ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದಿಂದ ಟಾಟಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಟಾಟಾ ಕಾರುಗಳು ಹೆಚ್ಚಿನ ಸುರಕ್ಷತೆಗೆ ಜನಪ್ರಿಯವಾಗಿದ್ದು, ಇದರ ನಿರ್ಮಾಣ ಗುಣಮಟ್ಟ ಅತ್ತ್ಯುತ್ತಮವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಟಾಟಾ ಕಾರುಗಳಿನಲ್ಲಿ ಅಪಘಾತಗೊಂಡಾಗ ಮೃತಪಟ್ಟವರ ಸಂಖ್ಯೆಯು ವಿರಳ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಭೀಕರವಾದ ಅಪಘಾತ ಸಂಭವಿಸಿದರೂ ಪ್ರಯಾಣಿಸಿಕರು ಸೇಫ್ ಆಗಿರುವ ಹಲವು ಪ್ರಕರಣಗಳು ವರದಿಗಳಾಗಿವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೇ, ಇತ್ತೀಚೆಗೆ ಕೇರಳದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ನಿಖಿಲ್ ರಾಣಾ ಚಾನೆಲ್‌ನಲ್ಲಿನ ವೀಡಿಯೊದಲ್ಲಿ ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯು ನಿಯಂತ್ರಣ ತಪ್ಪಿ ಎತ್ತರದಿಂದ ಉರುಳಿ ಬಿದ್ದಿರುವ ಬಗ್ಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ಟಾಟಾ ನೆಕ್ಸಾನ್‌ನ ಮಾಲೀಕರು ಕೇರಳದ ಶ್ರೀ ವಿಶಾಕ್ ಎನ್.ಸಿ ಆಗಿದ್ದಾರೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ವಿಶಾಕ್ ಮತ್ತು ಆತನ ಇಬ್ಬರು ಸ್ನೇಹಿತರು ಇಡುಕ್ಕಿಯಲ್ಲಿ ಕೆಲಸ ಮುಗಿಸಿ ಕೊಚ್ಚಿನ್‌ಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಮುಂದಿನ ಡ್ರೈವಿಂಗ್ ಸೀಟಿನಲ್ಲಿ ವಿಶಾಕ್ ಮತ್ತು ಇಬ್ಬರು ಸ್ನೇಹಿತರು ಹಿಂಬದಿಯಲ್ಲಿ ಕುಳಿತಿದ್ದರು. ಇಅವರು ಬರುವ ವೇಳೆ ಭಾರೀ ಮಳೆಯಾಗುತ್ತಿತ್ತು.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಈ ವೇಳೆ ಭಾರೀ ಮಳೆಯಿಂದ ಕೇರಳ ಸರ್ಕಾರವು ರಾಜ್ಯದ್ಯಾಂತ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿತ್ತು. ಭಾರೀ ಮಳೆಯ ನಡುವೆ ಗೋಚರತೆ ಕಡಿಮೆಯಾದಾಗ, ನೆಕ್ಸಾನ್ ಚಾಲಕ ರಸ್ತೆಯ ಸಣ್ನ ಚರಂಡಿ ಬೀಳುವುದನ್ನು ತಪ್ಪಿಸಲು ಹೋಗಿ ಸುಮಾರು 20-30 ಅಡಿಗಳಷ್ಟು ಆಳದಲ್ಲಿ ಕಾರು ಉರುಳಿ ಬಿದ್ದಿದೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಈ ಕಾರು ಪಲ್ಟಿಯಾಗಿ ನೆಲಕ್ಕೆ ಅಪ್ಪಳಿಸಿದೆ. ಮಗುಚಿ ಬಿದ್ದ ಕಾರು ನಜ್ಜುಗುಜ್ಜಾಗಿದೆ. ನಂತರ ಕಾರಿನ ಪ್ರಯಾಣಿಕರು ಜೀವಂತವಾಗಿದ್ದಾರೆ ಎಂದು ಭಾವಿಸಿರಲಿಲ್ಲ ಎಂದು ಅಲ್ಲಿಯ ಸ್ಥಳೀಯರು ಹೇಳಿದರು. ಅಲ್ಲದೇ ಕಾರಿನ ಪ್ರಯಾಣಿಕರು ಕೂಡ ನಾವು ಬದುಕುವುದಿಲ್ಲವೆಂದು ಭಾವಿಸಿದರು.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಒಳಗಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಆದರೆ ಬ್ಬ ವ್ಯಕ್ತಿಗೆ ಬೆನ್ನಿಗೆ ಗಾಯಗಳಾಗಿವೆ. ಇದನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಾರಿನಲ್ಲಿ ಸುರಕ್ಷಿತವಾಗಿದ್ದರು. ಕಾರಣ ಟಾಟಾದ 5 ಸ್ಟಾರ್ ಸೇಫ್ಟಿ ಕಾರು ಇದಾಗಿದೆ. ಗರಿಷ್ಠ ಸುರಕ್ಷತೆಯ ಕಾರಾಗಿರುವ ಕಾರಣ ಪ್ರಯಾಣಿಕರು ಸೇಫ್ ಆಗಿದ್ದಾರೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಟಾಟಾ ನೆಕ್ಸಾನ್(Tata Nexon) ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ಹಲವಾರು ಕಾರಣಗಳಿಂದಾಗಿ ನೆಕ್ಸಾನ್ ಅನ್ನು ದೀರ್ಘಕಾಲದಿಂದಲೂ ಹೆಚ್ಚು ಮಾರಾಟವಾಗುತ್ತಿರುವ ಮಾದರಿಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದ ಮಾದರಿಯಾಗಿದೆ. 2017ರ ಕೊನೆಯಲ್ಲಿ ಬಿಡುಗಡೆಯಾದ ನಂತರ ಸಬ್-ಫೋರ್-ಮೀಟರ್ ಎಸ್‍ಯುವಿಯು ಗ್ರಾಹಕರ ಗಮನ ಸೆಳೆಯಿತು.

2020ರ ಆರಂಭದಲ್ಲಿ ಫೇಸ್ ಲಿಫ್ಟ್ ನೆಕ್ಸಾನ್ ಆಗಮನವು ಮಾರಾಟವನ್ನು ಮತ್ತಷ್ಟು ಹೆಚ್ಚಿಸಿತು. ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯ ಬೇಡಿಕೆಯು ಹೆಚ್ಚಾಗುತ್ತಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಗೆ ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಈ ಕಾರನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಳಿಸಲಾಗಿತ್ತು

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಈ ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯಪ್ಯೂರ್ ಸಿಲ್ವರ್ ಬಣ್ಣದ ಆಯ್ಜೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಿದೆ. ಇದು ಎಲ್ಲಾ ರೂಪಾಂತರಗಳೊಂದಿಗೆ ಲಭ್ಯವಿತ್ತು. ಇನ್ನು ಈ ಬಣ್ಣವನ್ನು ಹೊರತುಪಡಿಸಿ ಟಾಟಾ ನೆಕ್ಸಾನ್ ಅಟ್ಲಾಸ್ ಬ್ಲ್ಯಾಕ್, ಪೊಲಿಜ್ ಗ್ರೀನ್, ಕ್ಯಾಲ್ಗರಿ ವೈಟ್, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಎಂಬ ಐದು ಬಣ್ಣಗಳಲ್ಲಿ ಲಭ್ಯವಿರಲಿದೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಭಾರತೀಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಜನಪ್ರಿಯ ಮಾದರಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಇದರಿಂದ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಹೊಸ ಅಪ್‌ಡೇಟ್ ಗಳನ್ನು ಮಾಡಲಾಗಿತ್ತು. ಟಾಟಾ ನೆಕ್ಸಾನ್ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಇದರ ಜೊತೆಗೆ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೂಡ ಹೊಂದಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಪೈಪೋಟಿ ಇರುವುದರಿಂದ ಟಾಟಾ ತನ್ನ ನೆಕ್ಸಾನ್ ಕಾರಿನ ಇಂಟಿರಿಯರ್ ಅನ್ನು ಇತ್ತೀಚೆಗೆ ನವೀಕರಿಸಿತು. ಇದರ ಇಂಟಿರಿಯರ್ ಅಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನಿಯಂತ್ರಿಸಲು ಬಳಸಲಾಗಿದ್ದ ಎಸಿ ವೆಂಟ್ ಗಳ ಅಡಿಯಲ್ಲಿ ಇರಿಸಲಾಗಿರುವ ಫಿಸಿಕಲ್ ಬಟನ್ ಗಳನ್ನು ತೆಗೆದುಹಾಕಿದೆ. ಬದಲಾಗಿ ಟಾಟಾ ಅಲ್ಲಿ ನೆಕ್ಸಾನ್ ಲೋಗೊ ಇರಿಸಿದೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಇನ್ನು ರೆಡಿಯೋವನ್ನು ನಿಯಂತ್ರಿಸಲು ಇದ್ದ ರೋಟರಿ ಡಯಲ್‌ಗಳನ್ನು ಸಹ ತೆಗೆದುಹಾಕಲಾಗಿದೆ, ಇನ್ಫೋಟೈನ್‌ಮೆಂಟ್ ಯುನಿಟ್ಗೆ ಸಂಯೋಜಿಸಲಾಗಿದೆ. ವಾಲ್ಯೂಮ್ ನಾಬ್ ಅನ್ನು ಮ್ಯೂಟ್ ಮತ್ತು ಪವರ್ ಆಫ್ ಕಾರ್ಯಗಳಿಗೆ ಸಹ ಬಳಸಬಹುದು.ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಒಳಗೊಂಡಿದೆ.

ಪಲ್ಟಿಯಾದರೂ ಪ್ರಾಣ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ಹೇಳಿದ ಮಾಲೀಕ

ಇದರೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಹಿಂಭಾಗದ ಎಸಿ ವೆಂಟ್ಸ್ ಗಳನ್ನು ಒಳಗೊಂಡಿದೆ.ಉಳಿದಂತ ಯಾವುದೇ ಬದಲಾವಣೆಯನ್ನು ಪಡೆದುಕೊಂಡಿಲ್ಲ. ಈ ಟಾಟಾ ನೆಕ್ಸಾನ್ ಮಾದರಿಯಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಸೇರ್ಪಡೆಯ ಹೊರತಾಗಿ, ನೆಕ್ಸಾನ್ ಎಕ್ಸ್‌ಎಂ(ಎಸ್) ವರಿಯೆಂಟ್‌ನಲ್ಲಿ ಹಲವು ಪ್ರೀಮಿಯಂ ಫೀಚರ್ ಗಳನ್ನು ಹೊಂದಿದೆ. ಈ ಎಕ್ಸ್‌ಎಂ(ಎಸ್) ವೆರಿಯೆಂಟ್‌ನಲ್ಲಿ ಹೆಡ್‌ಲ್ಯಾಂಪ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಸ್ಟೀಯರಿಂಗ್-ಮೌಂಟಡ್ ಕಂಟ್ರೋಲ್ ಗಳನ್ನು ಒಳಗೊಂಡಿವೆ.

Article Published On: Monday, November 8, 2021, 17:24 [IST]
English summary
Tata nexon owner appreciate build quality after massive crash details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+