ಅತಿವೇಗದಲ್ಲಿ ಹಸುವಿಗೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್ ಕಾರು: ಮುಂದೆನಾಯ್ತು ಗೊತ್ತಾ?

ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಒಂದು ಸವಾಲ್. ಎಲ್ಲಾರಿಗೂ ಸಮಯ ಇಲ್ಲದ ರೀತಿಯಲ್ಲಿ ದುಡುಕಿ ವೇಗವಾಗಿ ಡ್ರೈವಿಂಗ್ ಮಾಡುತ್ತಾರೆ. ಕಾರ್ ಅನ್ನು ನಿಧಾನ ಮಾಡಲು ಸಿಟ್ಟಿನಿಂದಲೇ ನಿಧಾನ ಮಾಡುತ್ತಾರೆ. ರಸ್ತೆಗಳು ಸ್ಥಿತಿಯು ಸುಧಾರಣೆ ಕಾಣುತ್ತಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅಜಾಗರೂಕ ಅಥವಾ ಅತಿವೇಗದ ಚಾಲನೆಯ ಇಂತಹ ಅಪಘಾತಗಳಿಗೆ ಕಾರಣವಾಗಿವೆ.

ಇನ್ನು ಭಾರತದಲ್ಲಿ ಹೆದ್ದಾರಿಗಳಲ್ಲಿ ಪ್ರಾಣಿಗಳು ಕಾಣ ಸಿಗುವುದು ಸಾಮಾನ್ಯ ದೃಶ್ಯವಾಗಿದೆ. ವಾಹನ ಚಾಲಕರಿಗೆ ಈ ಪ್ತಾಣಿಗಳು ಅಪಾಯವನ್ನುಂಟುಮಾಡುತ್ತದೆ. ಭಾರತದ ರಸ್ತೆಗಳಲ್ಲಿ ಹೆಚ್ಚಾಗಿ ಕುರಿ ಮತ್ತು ಧನಗಳು ಹೆಚ್ಚಾಗಿ ಕಾಣಸಿಸುತ್ತದೆ. ಇನ್ನು ಪ್ರಾಣಿಗಳಿಗೆ ಡಿಕ್ಕಿ ಹೊಡೆದು ವಾಹನಗಳಿಗೆ ಗಣನೀಯ ಹಾನಿಯಾಗಿರುವ ಹಲವಾರು ಘಟನೆಗಳು ನಡೆದಿದೆ. ಅದೇ ರೀತಿ ಇತ್ತೀಚೆಗೆ ಟಾಟಾ ನೆಕ್ಸಾನ್ (Tata Nexon) ಒಂದು ಹಸುವಿಗೆ ಡಿಕ್ಕಿ ಹೊಡೆದಿದೆ. ಹಸು ಅನಿರೀಕ್ಷಿತವಾಗಿ ರಸ್ತೆಗೆ ಹಾರಿದಾಗ ನಿಯಂತ್ರಣ ತಪ್ಪಿ ಕಾರು ಡಿಕ್ಕಿ ಹೊಡಿದಿದೆ.

Tata Nexon

ಈ ಅಪಘಾತದ ದೃಶ್ಯವು ಟಾಟಾ ನೆಕ್ಸಾನ್ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟಾಟಾ ನೆಕ್ಸಾನ್ ಕಾರು ರಾತ್ರಿ ಏಕಪಥ ರಸ್ತೆಯಲ್ಲಿ ಸಂಚತಿಸುತ್ತಿತ್ತು. ಈ ಟಾಟಾ ನೆಕ್ಸಾನ್ ಕಾರು ಮುಂದಕ್ಕೆ ಹೋಗುತ್ತಿದ್ದಂತೆ, ರಸ್ತೆ ಬದಿಯಿಂದ ಒಂದು ಹಸು ಇದ್ದಕ್ಕಿದ್ದಂತೆ ರಸ್ತೆಯ ಮಧ್ಯಕ್ಕೆ ಚಿಮ್ಮಿತು. ಟಾಟಾ ನೆಕ್ಸಾನ್ ಚಾಲಕನಿಗೆ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಅಥವಾ ಡಿಕ್ಕಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಕಾರು 70 ಕಿಮೀ/ಗಂ ವೇಗದಲ್ಲಿತ್ತು ಎಂದು ಸೂಚಿಸುತ್ತದೆ. ಅಷ್ಟು ವೇಗದಲ್ಲಿ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಾಣಿ ಕೆಳಗೆ ಬಿದ್ದಿದೆ. ಆದರೂ ಗೂಳಿಯು ತ್ವರಿತವಾಗಿ ಎದ್ದೇಳಿ ಅಲ್ಲಿಂದ ಓಡಿಹೋಗಿದೆ. ಗೂಳಿಗೆ ಗಾಯಗಳಾಗಿರುತ್ತೆ, ಆದರೆ ಗಂಭೀರ ಗಾಯಗಳು ಆಗಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಇನ್ನು ಗೂಳಿಗೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್ ಕಾರಿನ ಮುಂಭಾಗವು ತೀವ್ರ ಹಾನಿಯನ್ನುಂಟುಮಾಡಿದೆ. ಕಾರಿನ ಹುಡ್ ಸಂಪೂರ್ಣವಾಗಿ ಜಖಂಗೊಂಡಿದೆ.

Tata Nexon

ಕಾರಿನ ಮುಂಭಾಗದ ಭಾಗವು ವ್ಯಾಪಕ ಹಾನಿಯನ್ನು ಅನುಭವಿಸಿದೆ. ಟಾಟಾ ನೆಕ್ಸಾನ್‌ನ ರೇಡಿಯೇಟರ್ ಕೂಡ ಹಾನಿಗೊಳಗಾಗಿದೆ ಎಂದು ತೋರುತ್ತದೆ. ಗಮನಾರ್ಹ ಸಂಗತಿಯೆಂದರೆ, ಕಾರಿನನೊಳಗಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಹೊರಬಂದರು. ಈ ಘಟನೆಯು ಭಾರತೀಯ ಹೆದ್ದಾರಿಗಳಲ್ಲಿ ದಾರಿತಪ್ಪಿ ಪ್ರಾಣಿಗಳಿಂದ ಉಂಟಾಗುವ ಅಪಾಯಗಳಾಗಿವೆ. ಅಂತಹ ಪ್ರದೇಶಗಳಲ್ಲಿ ಚಾಲನೆ ಮಾಡುವಾಗ ಎಚ್ಚರಿಕೆಯ ಅಗತ್ಯವಿದೆ.

ಇನ್ನು ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ರಕ್ಷಣಾತ್ಮಕ ಚಾಲನಾ ವಿಧಾನವನ್ನು ಅಳವಡಿಸಿಕೊಳ್ಳುವುದು ಮತ್ತು ಓವರ್‌ಟೇಕ್ ಮಾಡುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಓವರ್‌ಟೇಕ್ ಮಾಡುವಾಗ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಅಜಾಗರೂಕ ಓವರ್‌ಟೇಕ್ ಮಾಡುವಾಗ ಹೆಚ್ಚು ಅಪಘತಗಳು ಸಂಭವಿಸಿವೆ. ಭಾರೀ ವೇಗದಲ್ಲಿ ಓವರ್‌ಟೇಕ್ ಮಾಡುವಾಗ ಮುಂದೆ ವಾಹನ ಅಥವಾ ಪ್ರಾಣೆಗಳು ಬಂದರೆ ನಿಯಂತ್ರಣ ಮಾಡಲು ಸಾಧ್ಯವಾಗುದಿಲ್ಲ.

ಇನ್ನು ಜನಪ್ರಿಯ ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ 2017ರಲ್ಲಿ ಮೊದಲ ಬಾರಿಗೆ ಈ ನೆಕ್ಸಾನ್ ಮಾದರಿಯನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಳಿಸಿತು. ಟಾಟಾ ನೆಕ್ಸಾನ್ ಬಿಡುಗಡೆಯಾದ ಆರಂಭದಲ್ಲಿ ಇದರ ಮಾರಾಟವು ಮಂಧಗತಿಯಲ್ಲಿತ್ತು. ಆದರೆ 2020ರ ಆರಂಭದಲ್ಲಿ ನೆಕ್ಸಾನ್‌ನ ಹೆಚ್ಚು ನವೀಕರಿಸಿದ ಆವೃತ್ತಿಯನ್ನು ತಂದರು. ಅಂದಿನಿಂದ ನೆಕ್ಸಾನ್ ಎಸ್‍ಯುವಿಗೆ ನಿಜವಾಗಿಯೂ ಮಾರಾಟದಲ್ಲಿ ಭಾರೀ ಏರಿಕೆಯನ್ನು ಪಡೆದುಕೊಂಡಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್, ರಿವ್ಯೂ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ನೀವು ಮರೆಯದಿರಿ.

Article Published On: Friday, June 23, 2023, 12:18 [IST]
English summary
Tata nexon suv hits bull viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+