ಟಾಟಾಗಿಲ್ಲ ಸಾಟಿ: ರೈಲಿನ ಡಿಕ್ಕಿಯನ್ನು ತಡೆದು ಚಾಲಕನ ಜೀವ ಉಳಿಸಿದ ಹೊಚ್ಚ ಹೊಸ ನೆಕ್ಸಾನ್
ಇತ್ತೀಚಿನ ಅಪಘಾತವೊಂದರಲ್ಲಿ ಹೊಸ tata nexon ಗೆ ರೈಲ್ವೇ ಕ್ರಾಸಿಂಗ್‌ನಲ್ಲಿ ರೈಲು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ, ಆದ್ರೆ ಕಾರಿನ ಬದಿಯು ಜಖಂಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಫೋಟೊಗಳು ವೈರಲ್ ಆಗಿದ್ದು, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.
ಮೂಲಗಳ ಪ್ರಕಾರ ಇದು ಶೋರೂಂನಿಂದ ಹೊರಬಂದಿದ್ದ ಹೊಸ ಕಾರು ಎನ್ನಲಾಗಿದೆ. ರೈಲು ಬರುತ್ತಿದ್ದಂತೆಯೇ tata nexon ಚಾಲಕ ನಿರಾತಂಕವಾಗಿ ರೈಲು ಹಳಿ ದಾಟಲು ಯತ್ನಿಸಿದ್ದಾನೆ. ತನ್ನ ತಪ್ಪು ನಿರ್ಣಯದಿಂದಾಗಿ ರೈಲು ಬದಿಯಿಂದ ಕಾಂಪ್ಯಾಕ್ಟ್ SUV ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ, ಇದು ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಚಾಲಕನ ಬದಿಯ ಬಾಗಿಲು ನಜ್ಜುಗುಜ್ಜಾದರೂ ಒಳಗೆ ಹಾನಿಯಾಗಿಲ್ಲ.

ರೈಲಿನ ಲೊಕೊಪೈಲೆಟ್ ವೇಗವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದ್ದನಂತೆ. ಪರಿಣಾಮ ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಉಳಿದಂತೆ ನೆಕ್ಸಾನ್‌ನ ಇತರ ಭಾಗಗಳು ಪರಿಪೂರ್ಣ ಸ್ಥಿತಿಯಲ್ಲಿವೆ. ಸೈಡ್ ಪ್ರೊಫೈಲ್ ಮಾತ್ರ ಪರಿಣಾಮ ಬೀರಿದೆ. ಆದರೂ, ಇದನ್ನು ಅಷ್ಟು ಸುಲಭವಾಗಿ ನೋಡಲು ಸಾಧ್ಯವೇ ಇಲ್ಲ. ರೈಲಿನ ವಿರುದ್ಧ ಇಂತಹ ಡಿಕ್ಕಿಯಿಂದ ಪಾರಾಗುವುದು ಅಷ್ಟು ಸುಲಭವಲ್ಲ.
ಹೆಚ್ಚಿನ ಕಾರುಗಳು ರೈಲಿನ ಡಿಕ್ಕಿಯನ್ನು ತಡೆಯುವುದೇ ಇಲ್ಲ. ಈ ಹಿಂದೆಯೂ ಇಂತಹ ಹಲವು ಘಟನೆಗಳಲ್ಲಿ ಕಾರಿನಲ್ಲದ್ದ ಪ್ರಯಾಣಿಕರು ಜೀವ ಕಳೆದುಕೊಂಡ ಉದಾಹರಣೆಗಳು ಕೂಡ ಇವೆ. ಇಲ್ಲಿ ರೈಲಿನ ವೇಗ ತೀರಾ ಕಡಿಮೆಯಲ್ಲವೇ ಎಂದು ಕೇಳಬಹುದು, ಆದ್ರೆ ರೈಲಿನ ಮುಂಭಾಗದ ಆ ಕಬ್ಬಿಣದ ಹೊಡೆತಕ್ಕೆ ಸಣ್ಣ ವೇಗದಲ್ಲೂ ನಜ್ಜುಗುಜ್ಜುಗೊಳಿಸುವ ಸಾಮರ್ಥ್ಯವಿರುತ್ತದೆ.

ಗರಿಷ್ಟ ಗುಣಮಟ್ಟದ ಸ್ವದೇಶಿ ಕಾರು: ಕಾಂಪ್ಯಾಕ್ಟ್ SUV ವಿಭಾಗದಲ್ಲಿ ನೆಕ್ಸಾನ್ ಪ್ರಮುಖ ಸ್ಪರ್ಧಿಯಾಗಿ ಮಿಂಚುತ್ತಲೇ ಇದೆ. ಅದರ ಸ್ಥಿರವಾದ ಪ್ರಭಾವಶಾಲಿ ಮಾರಾಟವು ಅದಕ್ಕಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಆಕರ್ಷಕ ವಿನ್ಯಾಸ, ದೃಢವಾದ ನಿರ್ಮಾಣ, ಗಮನಾರ್ಹವಾದ ಸುರಕ್ಷತೆ ಮತ್ತು ನವೀಕೃತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಅತ್ಯತ್ತಮವಾಗಿ ಮಾರಾಟವನ್ನು ಕಾಣುತ್ತಿದೆ.
ಹಳೆಯ ಜನ್ ಟಾಟಾ ನೆಕ್ಸಾನ್ ಮಾದರಿಯು ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಪ್ರಸ್ತುತ ಮಾದರಿಯು ಇನ್ನೂ ಸುರಕ್ಷತಾ ಪರೀಕ್ಷೆಗೆ ಒಳಪಡದಿದ್ದರೂ, ಅದರ ಪ್ಲಾಟ್‌ಫಾರ್ಮ್ ಅನ್ನು ಅದರ ಹಳೆಯ ಮಾದರಿಯೊಂದಿಗೆ ಹಂಚಿಕೊಳ್ಳುವುದರಿಂದ ಮತ್ತೊಂದು ಬಲವಾದ ಸುರಕ್ಷತಾ ರೇಟಿಂಗ್ ಪಡೆಯುವುದು ಖಚಿತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೈಲಿನೊಂದಿಗೆ ಎಚ್ಚರ: ಭಾರತದಲ್ಲಿ ಇನ್ನೂ ಕೂಡ ಜನರು ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದನ್ನು ನೋಡುತ್ತಲೇ ಇದ್ದೇವೆ. ರೈಲುಗಳ ಕ್ರಾಸಿಂಗ್ ವೇಳೆ ಗೇಟ್‌ಗಳನ್ನು ಹಾಕುತ್ತಿರುವುದರಿಂದ ಅದೆಷ್ಟೋ ಜೀವಗಳನ್ನು ಉಳಿಸಿದಂತಾಗಿದೆ. ಒಂದು ವೇಳೆ ಈ ರೈಲ್ವೇ ಗೇಟ್‌ಗಳನ್ನು ಹಾಕದಿದ್ದರೇ ತಾಳ್ಮೆಯಿಲ್ಲದ ನಮ್ಮ ಜನ ರೈಲು ಬರುತ್ತಿದ್ದರೂ ಆತುರದಲ್ಲಿ ಹಳಿ ದಾಟಲು ಪ್ರಯತ್ನಿಸಿ ಸಾವನ್ನಪ್ಪುತ್ತಿದ್ದರು.
ನಮ್ಮ ದೇಶದಲ್ಲಿ ಸಾವಿರಾರು ತಡೆರಹಿತ ರೈಲ್ವೇ ಕ್ರಾಸಿಂಗ್‌ಗಳನ್ನು ಹೊಂದಿದ್ದೇವೆ. ತುಂಬಾ ಜನರು ರೈಲನ್ನು ತಪ್ಪಾದ ಲೆಕ್ಕಾಚಾರದಿಂದ ಹಳಿದಾಟಲು ಪ್ರಯತ್ನಿಸುತ್ತಿದ್ದಾರೆ, ರೈಲಿನ ವೇಗವು ನಮ್ಮ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುತ್ತದೆ. ಅದರ ಬೃಹತ್ ಗಾತ್ರದಿಂದ ದೂರದಲ್ಲಿ ಬರುವಂತೆ ಕಂಡರೂ ಅದರ ವೇಗವನ್ನು ನಾವು ಗ್ರಹಸಿಲು ಆಗುವುದಿಲ್ಲ. ಹಾಗಾಗಿ ರೈಲು ಹಳಿಗಳನ್ನು ದಾಟುವಾಗ ತುಂಬಾ ಎಚ್ಚರಿಕೆ ವಹಿಸಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications