Tata: ಭೀಕರ ಅಪಘಾತದಲ್ಲಿ ಕಾರು ನಜ್ಜುಗುಜ್ಜು... ಟಾಟಾಗೆ ಕೈಮುಗಿದ ಮಾಲೀಕ

ಭಾರತದಲ್ಲಿ ಈ ಹಿಂದೆ ಕಾರಿದ್ದರೇ ಸಾಕು ಎಂದುಕೊಂಡಿದ್ದ ಜನರು ಈಗ ಸುರಕ್ಷಿತ ಕಾರುಗಳ ಮಹತ್ವವನ್ನು ಅರಿತುಕೊಂಡಿದ್ದಾರೆ. ಭಾರತದಲ್ಲಿ ಕೆಲವೇ ಬ್ರಾಂಡ್‌ಗಳು ಸದ್ಯ ಉತ್ತಮ ಗುಣಮಟ್ಟದ ಕಾರುಗಳನ್ನು ನಿರ್ಮಾಣ ಮಾಡುತ್ತಿವೆ. ಆದರೂ ದೇಶದಲ್ಲಿ ಕಡಿಮೆ ಬೆಲೆ ಹಾಗೂ ಮೈಲೇಜ್ ನೋಡಿ ಸುರಕ್ಷಿತವಲ್ಲದ ಕಾರುಗಳನ್ನು ಖರೀದಿಸುತ್ತಿದ್ದಾರೆ. ಅಂಥವರು ಈ ಸುದ್ದಿ ಓದಲೇಬೇಕು.

ಕಾರುಗಳ ಗುಣಮಟ್ಟವನ್ನು ಪರೀಕ್ಷಿಸುವ ಗ್ಲೋಬಲ್ NCAP ನಲ್ಲಿ Tata Nexon ಗರಿಷ್ಟ 5-ಸ್ಟಾರ್ ರೇಟಿಂಗ್ ಗಳಿಸಿದೆ. ನೋಡಿ ಈ ಸ್ಟಾರ್ ರೇಟಿಂಗ್ ಹೇಗೆ ಕೆಲಸ ಮಾಡಿದೆ ಎಂದು.. ಇಲ್ಲಿ ಟ್ರಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ನೆಕ್ಸಾನ್ ಕಾರನ್ನು ನೋಡಿದ್ರೆ ಪ್ರಯಾಣಿಕರು ಬದುಕುವುದೇ ಅಸಾಧ್ಯ ಎಂಬಂತಿದೆ. ಆದ್ರೆ ಇದರಲ್ಲಿದ್ದವರು ಸೇಫ್ ಆಗಿ ಹೊರಗೆ ಬಂದಿದ್ದಾರೆ. ಖುದ್ದು ಮಾಲೀಕ ಈಗ ತಮ್ಮ ಕಾರಿನೊಂದಿಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.

tata-nexon-truck-collision-near-yamuna-expressway-passengers-safe

ಮಾಲೀಕ ಹಂಚಿಕೊಂಡಿರುವ ಮಾಹಿತಿಯನ್ನು ಯ್ಯೂಟ್ಯೂಬ್ ಚಾನಲ್‌ವೊಂದರಲ್ಲಿ ಹಂಚಿಕೊಳ್ಳಲಾಗಿದೆ. ಮಾಲೀಕರ ಪ್ರಕಾರ, ಟಾಟಾ ನೆಕ್ಸಾನ್ ಹಾಗೂ ಟ್ರಕ್ ನಡುವಿನ ಅಪಘಾತವು ಮಥುರಾದ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಮುಂಜಾನೆ 5 ಘಂಟೆ ಸುಮಾರಿಗೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ನೆಕ್ಸಾನ್ ತನ್ನ ಹಾಗೂ ತನ್ನ ಸಹ ಪ್ರಯಾಣಿಕರ ಜೀವ ಉಳಿಸಿರುವುದಾಗಿ ಮಾಲೀಕರು ಹೇಳಿಕೊಂಡಿದ್ದಾರೆ.

ಅಪಘಾತಕ್ಕೆ ಕಾರಣವೇನು?: ಈ ನಿರ್ಧಿಷ್ಟ ಅಪಘಾತಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋವಿಲ್ಲ, ಏಕೆಂದರೆ ಮಾಲೀಕ ಕಾರಿನಲ್ಲಿ ಡ್ಯಾಷ್‌ಕ್ಯಾಮ್ ಹೊಂದಿರಲಿಲ್ಲ. ಆದ್ರೂ ಮಾಲೀಕರೇ ನೇರವಾಗಿ ಅಪಘಾತವನ್ನು ನೋಡಿದ್ದರಿಂದ ಅವರೇ ಈ ಬಗ್ಗೆ ತಿಳಿಸಿದ್ದಾರೆ. ಟ್ರಕ್‌ನ ಹಿಂಭಾಗವನ್ನು ಟಾಟಾ ನೆಕ್ಸಾನ್ ಹೈ ಸ್ಪೀಡ್‌ನಲ್ಲಿ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ಏಕಾಏಕಿ ನಿಲ್ಲಿಸಿದ್ದರಿಂದ ನೆಕ್ಸಾನ್ ಅನ್ನು ಕೂಡಲೇ ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ ಅಪಘಾತ ಸಂಭವಿಸಿದೆ ಎಂದಿದ್ದಾರೆ.

tata-nexon-truck-collision-near-yamuna-expressway-passengers-safe

ಅದೃಷ್ಟವಶಾತ್ ಇಷ್ಟು ದೊಡ್ಡ ಅಪಘಾತದಲ್ಲೂ ಯಾರಿಗೂ ಗಾಯಗಳಾಗದಿರುವುದು ಆಶ್ಚರ್ಯಗೊಳಿಸಿದೆ. ಟಾಟಾ ಬಗ್ಗೆ ಹೆಮ್ಮೆಯಿದೆ ಎಂದು ಮಾಲೀಕ ಕೃತಜ್ಞತೆ ಸಲ್ಲಿಸಿದರು. ಅಪಘಾತದ ನಂತರ ಕಾರನ್ನು ಹತ್ತಿರದ ಡೀಲರ್‌ಶಿಪ್‌ ಬಳಿ ಕೊಂಡೊಯ್ದಿದ್ದು, ಟಾಟಾ ನೆಕ್ಸಾನ್ ಮುಂಭಾಗದ ಗ್ರಿಲ್, ಹೆಡ್‌ಲೈಟ್, ಬಂಪರ್, ರೇಡಿಯೇಟರ್ ಸೇರಿದಂತೆ ಕೂಲಿಂಗ್ ಸಿಸ್ಟಮ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಈ ಫೀಚರ್ಸ್ ಇರಲಿ: ಒಂದು ವೇಳೆ ಸೇಫ್ಟಿ ರೇಟಿಂಗ್ ಕಡಿಮೆಯಿರುವ ಕಾರುಗಳು ಈ ಅಪಘಾತಕ್ಕೆ ಸಿಲುಕ್ಕಿದ್ದರೇ ಪ್ರಯಾಣಿಕರಿಗೆ ತೀವ್ರ ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿಯೇ ಹೆಚ್ಚಿನ ಸುರಕ್ಷತಾ ರೇಟಿಂಗ್ ಪಡೆದಿರುವ ಕಾರುಗಳನ್ನು ಖರೀದಿಸಿದರೆ, ನಿಮ್ಮ ಜೀವ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಧುನಿಕ ಸೇಫ್ಟಿ ಫೀಚರ್‌ಗಳಾದ ಏರ್‌ಬ್ಯಾಗ್‌ಗಳು, ಅಡ್ವಾನ್ಸ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ನಂತಹ ಫೀಚರ್‌ಗಳು ಅಪಘಾತದ ತೀವ್ರ್ತೆಯನ್ನು ತಗ್ಗಿಸುತ್ತವೆ.

tata-nexon-truck-collision-near-yamuna-expressway-passengers-safe

ಸುರಕ್ಷಿತ ಕಾರುಗಳು ದುಬಾರಿಯಾದ್ರೂ, ನೀವು ಮಾತ್ರವಲ್ಲದೇ ನಿಮ್ಮ ಸಹ ಪ್ರಯಾಣಿಕರು ರಸ್ತೆಯಲ್ಲಿನ ಇತರರನ್ನು ಸುರಕ್ಷಿತವಾಗಿರಿಸುತ್ತವೆ. ಕೊನೆಯದಾಗಿ ಎಲ್ಲಾ ಕಾರು ಪ್ರಯಾಣಿಕರು ತಿಳಿಯಬೇಕಾಗಿರುವುದು ಏನೆಂದರೆ ಸುರಕ್ಷಿತ ಕಾರುಗಳು ಆಗಾಗ್ಗೆ ಕಠಿಣ ಪರೀಕ್ಷೆಗೆ ಒಳಗಾಗುತ್ತವೆ. ನಿಯಂತ್ರಕ ಪ್ರಾಧಿಕಾರಗಳು ನಿಗದಿಪಡಿಸಿದ ಕಠಿಣ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆ. ವಿವಿಧ ಪರೀಕ್ಷೆಗಳಲ್ಲಿ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಭರವಸೆಯನ್ನು ಒದಗಿಸುತ್ತವೆ ಎಂಬುದನ್ನು ಗಮನದಲ್ಲಿಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 28, 2024, 13:36 [IST]
English summary
Tata nexon truck collision near yamuna expressway passengers safe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+