ಟಾಟಾ ಪಂಚ್ - ಪಿಕ್ಅಪ್ ಟ್ರಕ್‌ ಮುಖಾಮುಖಿ.. ಪರಿಣಾಮ ಟ್ರಕ್‌ ಪಲ್ಟಿ ಆಯ್ತು: ಸಖತ್ ಸುರಕ್ಷಿತ ಈ ಕಾರು!

ದೇಶದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ (Tata) ಜನಪ್ರಿಯತೆ ಗಳಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಅದರ ಕಾರುಗಳ ನಿರ್ಮಾಣ ಗುಣಮಟ್ಟ ಅತ್ಯುತ್ತಮವಾಗಿದ್ದು, ಬಹುತೇಕರು ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ಟಾಟಾ ಪಂಚ್ - ಪಿಕ್ಅಪ್ ಟ್ರಕ್‌ ಮುಖಾಮುಖಿಯಾಗಿವೆ.

ಅಪಘಾತದ ಫೋಟೋ ಹಾಗೂ ವಿಡಿಯೋವನ್ನು ಸ್ವಾತಿ ಝಾ ಎನ್ನುವವರೂ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 14ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ಸಂಭವಿಸಿದೆ. ಟಾಟಾ ಪಂಚ್ - ಪಿಕ್ಅಪ್ ಟ್ರಕ್‌ ಡಿಕ್ಕಿಯಾಗಿವೆ. ಪರಿಣಾಮ ಟ್ರಕ್‌ ಪಲ್ಟಿಯಾಗಿದ್ದು, ಎರಡು ವಾಹನಗಳಿಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ, ಈ ಅಪಘಾತ ಹೇಗೆ ನಡೆಯಿತು ಎಂಬುದರ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ.

tata-punch-hits-ace-pickup-truck-what-happened-again-proved-punch-safest-car

ಬಹುಶಃ ಪಂಚ್ ಕಾರು, ಟಾಟಾ ಏಸ್‌ ಪಿಕ್ಅಪ್ ಟ್ರಕ್‌ಗೆ ಗುದ್ದಿದ್ದು, ಟ್ರಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿರಬಹುದು. ಪಂಚ್ ಮುಂಭಾಗ ಜಖಂಗೊಂಡಿರುವುದನ್ನು ನೋಡಿ, ಹೀಗೆ ನಡೆದಿರಬಹುದು ಎಂದು ಊಹೆ ಮಾಡಬಹುದಷ್ಟೆ.. ಇದೊಂದು ಪುಟ್ಟ ಅಪಘಾತವಾಗಿರುವುದರಿಂದ ಪಂಚ್ ಹಾಗೂ ಮಿನಿ ಟ್ರಕ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಅಪಘಾತದ ಚಿತ್ರಗಳನ್ನು ಗಮನಿಸಿದಾಗ, ಟಾಟಾ ಪಂಚ್‌ನ ಮುಂಭಾಗದ ಬಂಪರ್ ಬಾನೆಟ್ ಹಾಗೂ ಹೆಡ್‌ಲೈಟ್ ಗೆ ಡ್ಯಾಮೇಜ್ ಆಗಿದ್ದು, ಏರ್ ಬ್ಯಾಗ್ ಕೂಡ ತೆರೆದುಕೊಂಡಿರುವುದನ್ನು ಕಾಣಬಹುದು. ಈ ಕಾರು, ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ ವಯಸ್ಕರ ಸುರಕ್ಷತೆ ವಿಭಾಗದಲ್ಲಿ 5 ಸ್ಟಾರ್, ಮಕ್ಕಳ ಸುರಕ್ಷತೆ ವಿಭಾಗದಲ್ಲಿ 4 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.

tata-punch-hits-ace-pickup-truck-what-happened-again-proved-punch-safest-car

ಸುರಕ್ಷತೆಯ ದೃಷ್ಟಿಯಿಂದ ಟಾಟಾ ಪಂಚ್ ಕಾರು ಅತ್ಯಾಧುನಿಕವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್‌, ರೇರ್ ವ್ಯೂ ಕ್ಯಾಮೆರಾ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು, ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ.

ಟಾಟಾ ಪಂಚ್, ಪೆಟ್ರೋಲ್ ರೂಪಾಂತರ, 1.2-ಲೀಟರ್, 3-ಸಿಲಿಂಡರ್, ಪೆಟ್ರೋಲ್ ಎಂಜಿನ್‌ ಹೊಂದಿದ್ದು, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಸಿಎನ್‌ಜಿ ವೇರಿಯೆಂಟ್ ಅದೇ ಎಂಜಿನ್ ಒಳಗೊಂಡಿದೆ. ಕೊಂಚ ಕಡಿಮೆ ಪವರ್ ಉತ್ಪಾದಿಸುತ್ತದೆ.

ಇದು, 74 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಮೈಲೇಜ್ ವಿಷಯಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರ 18.8 - 20.09 kmpl ಹಾಗೂ ಸಿಎನ್‌ಜಿ ರೂಪಾಂತರ, ದ್ವಿಚಕ್ರ ವಾಹನಕ್ಕೆ ಸರಿ ಸಾಟಿಯಾಗುವಂತೆ 26.9 km/kg ಇಂಧನ ದಕ್ಷತೆ ಹೊಂದಿದೆ.

ವಿನ್ಯಾಸದ ದೃಷ್ಟಿಯಿಂದಲೂ ಟಾಟಾ ಪಂಚ್ ಅತ್ಯಾಧುನಿಕವಾಗಿದ್ದು, ಫ್ರಂಟ್, ಸಿಗ್ನೇಚರ್ ಗ್ರಿಲ್ ಆಕರ್ಷಕ ಹೆಡ್‌ಲೈಟ್ ಹಾಗೂ ಫಾಗ್ ಲೈಟ್ ಹೊಂದಿದೆ. ಇದರೊಟ್ಟಿಗೆ, ಫೋರ್-ಸ್ಪೋಕ್ 16 ಇಂಚಿನ ಅಲಾಯ್ ವೀಲ್ಸ್, ಟರ್ನ್ ಇಂಡಿಕೇಟರ್ ಒಳಗೊಂಡಿದೆ. ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 23, 2023, 13:10 [IST]
English summary
Tata punch hits ace pickup truck what happened again proved punch safest car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+