ಹೊಸ ಟಾಟಾ ಕಾರಿನ ಖುಷಿ, ಬ್ರೇಕ್ ಬದಲು ಆಕ್ಸೀಲಿಟರ್ ಒತ್ತಿದ ಮಹಾನುಭಾವ: ಅಪಘಾತ ಮಾಡೇಬಿಟ್ಟ!

ಇತ್ತೀಚಿನ ದಿನಗಳಲ್ಲಿ ಹೊಸ ಕಾರುಗಳ ಅಪಘಾತಗಳು ಹೆಚ್ಚು ಸಾಮಾನ್ಯವಾಗಿದೆ. ಹಿಂದೆ ಹೊಸ ಕಾರು ಖರೀದಿ ಮಾಡಿದರೆ ಅನುಭವಿ ಡ್ರೈವರ್ ಆದರೂ ನಿಧಾನವಾಗಿ ಡ್ರೈವ್ ಮಾಡುತ್ತಿದ್ದರು. ಈಗ ಒಬ್ಬ ಒಬ್ಬರಿಗೆ ಎರಡೂ ಮೂರು ಕಾರುಗಳಿರುವುದರಿಂದ ಹೊಸ ಕಾರು ಆದರೂ ಶರ ವೇಗದಲ್ಲಿ ಡ್ರೈವ್ ಮಾಡುತ್ತಾರೆ.

ಕೆಲವು ಸಲ ಸರಿಯಾಗಿ ಡ್ರೈವಿಂಗ್ ತಿಳಿದಿಲ್ಲದವರೂ ಹೊಸ ಕಾರು ಖರೀದಿಸಿ ಡ್ರೈವ್ ಅಪಘಾತ ಸಂಭವಿಸುವುದು ಹಲವು ಉದಾಹರಣೆಗಳಿವೆ. ಇತ್ತೀಚೆಗೆ ಹೊಸದಾಗಿ ವಿತರಣೆ ಪಡೆದುಕೊಂಡ ಟಾಟಾ ಪಂಚ್ (Tata Punch) ಮಾದರಿಯು ಅಪಘಾತವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಪ್ರಯಾಣಿಕರನ್ನು ಹತ್ತಲು ಜಂಕ್ಷನ್‌ನಲ್ಲಿಯೇ ಆಟೋರಿಕ್ಷಾ ನಿಲ್ಲಿಸಿದಾಗ ಪಂಚ್ ಕಾರು ಟರ್ನ್ ಆಗುವುದನ್ನು ನೋಡಬಹುದು.ಪಂಚ್ ಎಡಕ್ಕೆ ತಿರುಗುತ್ತಿದ್ದಂತೆ, ಮತ್ತೊಂದು ಆಟೋರಿಕ್ಷಾ ಬಲಕ್ಕೆ ತಿರುಗಿ ಪಂಚ್‌ನ ಪಕ್ಕದಲ್ಲಿ ಬಂದು ನಿಂತಿತು.

Tata Punch

ಈ ವೇಳೆ ಟಾಟಾ ಪಂಚ್ ಚಾಲಕ ಎಡಕ್ಕೆ ತಿರುಗಿಸಿ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಹೊಸ ಚಾಲಕನನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ. ಚಾಲಕ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದ ಕಾರಣ ಪಂಚ್ ಕ್ರ್ಯಾಶ್ ಆಗುವಂತೆ ತೋರುತ್ತಿದೆ. ಆಟೋರಿಕ್ಷಾ ಮೇಲೆ ಕಾರು ಹತ್ತಿದ ನಂತರ ಪಂಚ್ ಚಾಲಕ ನಿಲ್ಲಿಸಲಿಲ್ಲ. ಬದಲಾಗಿ ವಾಹನ ಸಾಗುತ್ತಲೇ ಇತ್ತು. ಟಾಟಾ ಪಂಚ್ ಹತ್ತಿದ ಕಾರಣ ಆಟೋರಿಕ್ಷಾ ಪಕ್ಕಕ್ಕೆ ಬಿದ್ದಿದೆ.

ನಂತರ ಪಂಚ್ ಸ್ಕೂಟರ್‌ನ ಮೇಲೂ ಹತ್ತಿದೆ. ಟಾಟಾ ಪಂಚ್ ಮತ್ತು ಆಟೋರಿಕ್ಷಾದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಪಘಾತದಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ ಆದರೆ ಕಾರಿಗೆ ಸ್ವಲ್ಪ ಹಾನಿಯಾಗಿದೆ. ಸ್ಕೂಟರ್ ಮತ್ತು ಆಟೋರಿಕ್ಷಾ ಕೂಡ ಹಾನಿಯಾಗಿದೆ. ಟಾಟಾ ಪಂಚ್ ಕಾರಿನಲ್ಲಿ ಇದ್ದ ಪ್ರಯಾಣಿಕರಿಗೂ ಯಾವುದೇ ಗಾಯಗಳು ಆಗಿಲ್ಲ.

Tata Punch

ಸುರಕ್ಷತೆಯ ದೃಷ್ಟಿಯಿಂದ, ಈ ಜನಪ್ರಿಯ ಟಾಟಾ ಪಂಚ್ ಎಸ್‌ಯುವಿ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPಯಿಂದ ಒಳ್ಳೆಯ ರೇಟಿಂಗ್ ಪಡೆಯಲು ಯಶಸ್ವಿಯಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಒಟ್ಟು 17ಕ್ಕೆ 16.45 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 40.89 ಅಂಕಗಳನ್ನು ಗಳಿಸುವ ಮೂಲಕ ಗ್ಲೋಬಲ್ NCAPಯಿಂದ 4 ಸ್ಟಾರ್ ರೇಟಿಂಗ್ ಗಳಿಸಿದೆ.

ಟಾಟಾ ಪಂಚ್ ಗ್ರಾಹಕರನ್ನು ಆಕರ್ಷಿಸುವ ವಿನ್ಯಾಸ ಹೊಂದಿದೆ. ಪ್ರಮುಖವಾಗಿ ಫ್ರಂಟ್ ಸಿಗ್ನೇಚರ್ ಗ್ರಿಲ್ ಪಡೆದಿದ್ದು, ಎರಡು ಬದಿಯಲ್ಲಿ ಹೆಡ್‌ಲೈಟ್ ಇದ್ದು, ಅದರ ಕೆಳಗೆ ಫಾಗ್ ಲೈಟ್ ಹಾಕಲಾಗಿದೆ. ಸೈಡ್ ಪ್ರೊಫೈಲ್ ಫೋರ್ - ಸ್ಪೋಕ್ 16 ಇಂಚಿನ ಅಲಾಯ್ ವೀಲ್ಸ್, ORVMಗಳಲ್ಲಿ ಟರ್ನ್ ಇಂಡಿಕೇಟರ್ ಪಡೆಯುವ ಮೂಲಕ ಅತ್ಯಾಧುನಿಕವಾಗಿದೆ ಎಂದು ಹೇಳಿದಾದರೆ ತಪ್ಪಾಗುವುದಿಲ್ಲ.

ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2-ಲೀಟರ್, 3-ಸಿಲಿಂಡರ್, ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 85 bhp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, 18.8 - 20.09 kmpl ಮೈಲೇಜ್ ನೀಡಲಿದೆ.

ಟಾಟಾ ಪಂಚ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಇದು ಅತ್ಯುತ್ತಮ ಕಾರೆಂದು ಹೇಳಬಹುದಾಗಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದ್ದು, ಹಲವು ಸುರಕ್ಷತಾ ಫೀಚರ್ಸ್ ಅನ್ನು ಹೊಂದಿದೆ.

ಟಾಟಾ ಪಂಚ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಇದು ಅತ್ಯುತ್ತಮ ಕಾರೆಂದು ಹೇಳಬಹುದಾಗಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದ್ದು, ಹಲವು ಸುರಕ್ಷತಾ ಫೀಚರ್ಸ್ ಅನ್ನು ಹೊಂದಿದೆ.

Article Published On: Wednesday, September 13, 2023, 13:48 [IST]
English summary
Tata punch owner loses control after delivery crashes vehicles details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+