ಏನೋ ಮಾಡಲು ಹೋಗಿ.. ಬುದ್ದಿವಂತ ಟಾಟಾ ಪಂಚ್ ಮಾಲೀಕನಿಗೆ ಪೊಲೀಸರಿಂದ ಬಿತ್ತು ಫೈನ್!

ಕಾರುಗಳು ಅಥವಾ ದ್ವಿಚಕ್ರ ವಾಹನಗಳ ಮೇಲೆ ದೇವರ ಫೋಟೋ ಅಥವಾ ತಮ್ಮ ಆತ್ಮೀಯರ ಹೆಸರಿನ ಸ್ವೀಕರ್ ಹಾಕಿಸುವುದನ್ನು ಬಹುತೇಕರೂ ರೂಡಿಸಿಕೊಂಡು ಬಂದಿದ್ದಾರೆ. ಇಲ್ಲೊಬ್ಬ ವ್ಯಕ್ತಿ, ಆ ರೀತಿಯ ಸ್ಪೀಕರ್ ಅಂಟಿಸುವುದರಲ್ಲಿ ಬುದ್ದಿವಂತಿಕೆ ತೋರಿಸಲು ಹೋಗಿ, ಸರಿಯಾಗಿಯೇ ದಂಡ ತೆತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಗ್ರೇಟರ್ ನೋಯ್ಡಾದ ವ್ಯಕ್ತಿಯೊಬ್ಬರು, ತಮ್ಮ ಟಾಟಾ ಪಂಚ್‌ (Tata punch) ಎಸ್‌ಯುವಿ ಹೆಸರನ್ನು ತಮಗೆ ಬೇಕಂತೆ ತಿರುಚಲು ಹೋಗಿ, ಪೊಲೀಸರಿಂದ ಚಲನ್ ಪಡೆದಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ, ಕಾರಿನ 'ಪಂಚ್' ಲೋಗೋ ಎಡಭಾಗದಲ್ಲಿ ಹಿಂದಿ ಭಾಷೆಯಲ್ಲಿ ಸರ್ ಹಾಗೂ ಬಲಭಾಗದಲ್ಲಿ ಜಿ ಎಂಬ ಸ್ಪೀಕರ್ ಹಾಕಿದ್ದಾರೆ. ಇದನ್ನು ಒಮ್ಮೆಲೇ ಓದಿದರೆ 'ಸರ್ಪಂಚ್ ಜಿ' ಆಗುತ್ತದೆ. ಜೊತೆಗೆ ಟೈಲ್‌ಗೇಟ್‌ ಮೇಲೆ 'ಗುರ್ಜರ್' ಎಂಬ ಸಮುದಾಯದ ಹೆಸರನ್ನು ಬರೆಸಲಾಗಿದೆ.

ಏನೋ ಮಾಡಲು ಹೋಗಿ.. ಬುದ್ದಿವಂತ ಟಾಟಾ ಪಂಚ್ ಮಾಲೀಕನಿಗೆ ಪೊಲೀಸರಿಂದ ಬಿತ್ತು ಫೈನ್!

ಈ ಎಸ್‌ಯುವಿ, ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಆ ಬಳಿಕ ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಕೆಲವೇ ಗಂಟೆಗಳಲ್ಲಿ ಗ್ರೇಟರ್ ನೋಯ್ಡಾ ಟ್ರಾಫಿಕ್ ಪೊಲೀಸರ ಗಮನಕ್ಕೂ ಬಂದಿದ್ದು, ಅಲರ್ಟ್ ಗೊಂಡ ಇಲಾಖೆಯು, ಕಾರಿನ ಮಾಲೀಕ ಸಂದೀಪ್ ಭಾಟಿ ವಿರುದ್ದ ಕ್ರಮ ಕೈಗೊಂಡಿದ್ದು, ರೂ.500 ದಂಡ ವಿಧಿಸಿದ್ದಾರೆ.

ಈ ಹಿಂದೆ, ಆಗಸ್ಟ್ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ಕಾರು ಸೇರಿದಂತೆ ದ್ವಿಚಕ್ರ ವಾಹನಗಳ ಹಿಂದೆ, ಮುಂದೆ ಜಾತಿ ಹೆಸರನ್ನು ಬರೆಸಿದರೆ, ದಂಡ ವಿವಿಧಿಸುವಂತೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಅದರಂತೆ ಗಾಜಿಯಾಬಾದ್ ಹಾಗೂ ನೋಯ್ಡಾ ಪೊಲೀಸರು, ವಿಶೇಷ ಅಭಿಯಾನವನ್ನು ನಡೆಸಿ, 2300 ವಾಹನ ಮಾಲೀಕರಿಗೆ ದಂಡ ವಿಧಿಸಿದ್ದರು.

ಯಾವುದೇ ವಾಹನಗಳ ಮೇಲೆ ಜಾತಿ ಹಾಗೂ ಧರ್ಮ ಆಧಾರಿತ ಪಠ್ಯ ಅಥವಾ ಚಿಹ್ನೆಯನ್ನು ಬರೆಸಿದರೆ ರೂ.1000 ದಂಡ ವಿಧಿಸಲಾಗುತ್ತದೆ. ಅದು ಒಂದೊಮ್ಮೆ ನಂಬರ್ ಪ್ಲೇಟ್ ಮೇಲೆ ಕಂಡು ಬಂದರೆ ರೂ.5000 ವರೆಗೆ ಫೈನ್ ಹಾಕುವ ಅಧಿಕಾರವನ್ನು ಅಲ್ಲಿನ ಪೊಲೀಸರು ಹೊಂದಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸುವ ಅವಕಾಶವನ್ನು ಪಡೆದಿದ್ದಾರೆ.

ಇನ್ನು, ಉತ್ತರಪ್ರದೇಶದಲ್ಲಿ ಇಂತಹ ನಿಯಮಗಳು ಜಾರಿ ಇದ್ದರೂ ಈ ವ್ಯಕ್ತಿ, ತಮ್ಮ ಟಾಟಾ ಪಂಚ್‌ ಎಸ್‌ಯುವಿ ಹೆಸರನ್ನು ತಮಗೆ ಬೇಕಂತೆ ಈ ರೀತಿಯಾಗಿ ತಿರುಚಲು ಪ್ರಯತ್ನಪಟ್ಟಿರುವುದು ವಿಪರ್ಯಾಸವೇ ಸರಿ. ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪೊಲೀಸರಿಂದ ಚಲನ್ ಪಡೆದು ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಅಲ್ಲಿನ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.

ಇವೆಲ್ಲವನ್ನೂ ಬಿಟ್ಟು ಟಾಟಾ ಪಂಚ್ ಕಾರಿನ ಬಗ್ಗೆ ಮಾತನಾಡುವುದಾದರೆ, ಇದು, ರೂ.6 ಲಕ್ಷದಿಂದ ರೂ.10.10 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಸಿಗಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 20.09 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಏರ್ ಕಂಡೀಷನ್, ಕ್ರೂಸ್ ಕಂಟ್ರೋಲ್, ಡ್ಯೂಯಲ್ ಫ್ರಂಟ್ ಏರ್ ಬಾಗ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: India Today

Article Published On: Friday, October 13, 2023, 14:29 [IST]
English summary
Tata punch owners creative with suv name police challan issued
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+