Tata: ಟಾಟಾದ ಈ ಪ್ರಮುಖ ಕಾರುಗಳಿಗೆ ರೂ.1.25 ಲಕ್ಷ ರಿಯಾಯಿತಿ.. ಇನ್ನೂ ಶೋರೂಂಗಳು ತುಂಬಿ ತುಳುಕುವುದು ಪಕ್ಕಾ!
ದೇಶದಲ್ಲಿ ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. 2023ರಲ್ಲಿ ತಯಾರಿಸಿದ ಕಾರುಗಳಿಗೆ ಭರ್ಜರಿ ರಿಯಾಯತಿಯನ್ನು ಘೋಷಣೆ ಮಾಡಿದೆ. ಈ ಮಾದರಿಗಳನ್ನು ಖರೀದಿಸುವ ಗ್ರಾಹಕರು, ರೂ.1.25 ಲಕ್ಷದವರೆಗೆ ಡಿಸ್ಕೌಂಟ್ ಪಡೆಯಬಹುದು. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಟಾಟಾ ಕಂಪನಿಯು 2023ರಲ್ಲಿ ಉತ್ಪಾದಿಸಿ, ಮಾರಾಟವಾಗದಿರುವ ಸಫಾರಿ (Safari) ಎಸ್‌ಯುವಿಯ ಪ್ರಿ-ಫೇಸ್‌ಲಿಫ್ಟ್ ಮಾದರಿಗಳಿಗೆ ಈ ಏಪ್ರಿಲ್ ತಿಂಗಳು ರೂ.1.25 ಲಕ್ಷ ರಿಯಾಯಿತಿಯನ್ನು ಪ್ರಯೋಜನವನ್ನು ನೀಡಿದೆ. ಇದರಲ್ಲಿ ರೂ.75,000 ನಗದು ರಿಯಾಯಿತಿ ಹಾಗೂ ರೂ.50,000 ರವರೆಗೆ ಇತರೆ ಡಿಸ್ಕೌಂಟ್ ಆಫರ್ ಸೇರಿದೆ. ಎಡಿಎಎಸ್ ಅಲ್ಲದ ರೂಪಾಂತರಗಳು ರೂ.1 ಲಕ್ಷ ದವರೆಗೆ ರಿಯಾಯಿತಿಯನ್ನು ಹೊಂದಿವೆ.

ಅದೇ ರೀತಿಯಲ್ಲಿ ಹೋದ ವರ್ಷವೇ ತಯಾರಿಸಿದ ಸಫಾರಿ ಫೇಸ್‌ಲಿಫ್ಟ್ ಕಾರುಗಳು ಒಟ್ಟು ರೂ.70,000 ರಿಯಾಯಿತಿಯನ್ನು ಒಳಗೊಂಡಿದ್ದು, ರೂ.50,000 ನಗದು ರಿಯಾಯಿತಿ ಮತ್ತು ರೂ.20,000 ವಿನಿಮಯ ಬೋನಸ್ ಗಳು ಕೂಡ ಸೇರಿವೆ. 2023ರ ಹ್ಯಾರಿಯರ್ (Harrier) ಎಸ್‌ಯುವಿಯ ಪ್ರಿ-ಫೇಸ್‌ಲಿಫ್ಟ್ ಆವೃತ್ತಿಗಳು ರೂ.1.25 ಲಕ್ಷ ಮತ್ತು ಫೇಸ್‌ಲಿಫ್ಟ್ ಮಾದರಿಗಳು ರೂ.70,000 ರಿಯಾಯಿತಿಯನ್ನು ಹೊಂದಿವೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಾಟಾ ಸಫಾರಿ (Tata Safari) ಎಸ್‌ಯುವಿ ರೂ.16.19 ಲಕ್ಷದಿಂದ ರೂ.27.34 ಲಕ್ಷ ಎಕ್ಸ್ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ (ಒ), ಪ್ಯೂರ್ (ಒ), ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಡ್ವೆಂಚರ್ ಪ್ಲಸ್ ಡಾರ್ಕ್ ಸೇರಿದಂತೆ ವಿವಿಧ ರೂಪಾಂತರ ಮತ್ತು 7 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, 6, 7 ಆಸನ ವ್ಯವಸ್ಥೆಯನ್ನು ಪಡೆದಿದೆ.

ಟಾಟಾ ಸಫಾರಿ ಫೇಸ್‌ಲಿಫ್ಟ್, 2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 170 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 350 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ಸಿಗಲಿದ್ದು, 16.3 ಕೆಎಂ ಪಿಎಲ್ ಮೈಲೇಜ್ ಕೊಡುತ್ತದೆ.
ಈ ಸಫಾರಿ ಕಾರು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಆಂಡ್ರಾಯ್ಡ್, ಆಪಲ್ ಕಾರ್ ಪ್ಲೇ, ಆಂಬಿಯೆಂಟ್ ಲೈಟಿಂಗ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಹೊಂದಿದೆ.
ಟಾಟಾ ಹ್ಯಾರಿಯರ್ ಎಸ್‌ಯುವಿ, ರೂ.15.49 ಲಕ್ಷದಿಂದ ರೂ.26.44 ಲಕ್ಷ ಎಕ್ಷ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 170 ಪಿಎಸ್ ಗರಿಷ್ಠ ಪವರ್, 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೂ ಸಿಗುತ್ತದೆ. ಜೊತೆಗೆ 16.8 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.
ಈ ಹ್ಯಾರಿಯರ್ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಡ್ಯುಯಲ್-ಝೋನ್ ಆಟೋಮೆಟಿಕ್ ಎಸಿಯನ್ನು ಹೊಂದಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications