ಟಾಟಾ ಸಫಾರಿ ಏಟಿಗೆ ಬಾನೆಟ್ ನುಜ್ಜುಗುಜ್ಜು: ಎಷ್ಟೇ ದೊಡ್ಡ ಡ್ರೈವರ್ ಆದ್ರೂ ಡ್ರಿಫ್ಟ್ ಬಗ್ಗೆ ಇವು ತಿಳಿದಿರಲಿ!

ಕಾರು ಉತ್ಸಾಹಿಗಳ ಕೆಟ್ಟ ಚಟವೆಂದರೆ ಎಲ್ಲಂದರಲ್ಲಿ ಸ್ಟಂಟ್‌ಗಳನ್ನು ಮಾಡುವುದು, ಇದು ಕಾನೂನು ಬಾಹಿರವಾಗಿದೆ. ಅನಾವಶ್ಯಕವಾಗಿ ಸ್ಟಂಟ್ ಮಾಡುವುದಲ್ಲದೇ ಅವುಗಳಿಂದ ನಷ್ಟ ಅನುಭವಿಸುವವರೂ ಕೂಡ ಅವರೇ ಎಂಬುದಕ್ಕೆ ಇಲ್ಲಿನ ವಿಡಿಯೋ ಸಾಕ್ಷಿಯಾಗಿದೆ. ಟಾಟಾ ಸಫಾರಿ ಸ್ಟ್ರೋಮ್ ಮತ್ತು ಹಳೆಯ ಹ್ಯುಂಡೈ ಸ್ಯಾಂಟ್ರೋ ನಡುವಿನ ಡಿಕ್ಕಿಯಾದ ವಿಡಿಯೋ ಇದೀಗ ವೈರಲ್ ಆಗಿದೆ.

ಮೊದಲಿಗೆ ಈ ಸ್ಟಂಟ್‌ ಅನ್ನು ಕಾನೂನಿನಿಂದ ದೂರವಿಟ್ಟು, ವಿಡಿಯೋ ಬಗ್ಗೆ ಮಾತನಾಡೋಣ. ಈ ವಿಡಿಯೋದಲ್ಲಿ ದೊಡ್ಡ ಸಫಾರಿ ಸ್ಟ್ರೋಮ್ ಎಸ್‌ಯುವಿ ಹಾಗೂ ಸಣ್ಣ ಸ್ಯಾಂಟ್ರೋ ಸ್ಟಂಟ್ ಬಗ್ಗೆ ಹೇಳೋದಾದ್ರೆ ಇದರಲ್ಲಿ ಇಬ್ಬರದ್ದು ತಪ್ಪಿದೆ. ಮನರಂಜನೆಗಾಗಿ ಡ್ರಿಫ್ಟ್ ಮಾಡೋವಾಗ ಎರಡು ಕಾರುಗಳು ಒಂದೇ ಜಾಗದಲ್ಲಿ ಈ ರೀತಿಯ ಡ್ರಿಫ್ಟ್ ಮಾಡಬಾರದು.

tata-safari-hyundai-santro

ಮೊದಲಿಗೆ ಡ್ರಿಫ್ಟ್ ಮಾಡೋವಾಗ ಡ್ರೈವರ್ ತುಂಬಾ ಎಚ್ಚರದಿಂದ ಇರಬೇಕು. ಎಬಿಸಿ (ಆಕ್ಸಿಲರೇಟರ್, ಬ್ರೇಕ್, ಕ್ಲಚ್) ಮೇಲೆ ಸಂಪೂರ್ಣ ನಿಯಂತ್ರಣವಿರಬೇಕು. ಸ್ಟೀರಿಂಗ್ ತಿರುಗಿಸುವ ವೇಗಕ್ಕೆ ಟೈರ್ ಯಾವ ಆ್ಯಂಗಲ್‌ನಲ್ಲಿದೆ ಎಂಬುದನ್ನು ತಕ್ಷಣ ನಮ್ಮ ಮೆದುಳು ಕ್ಯಾಚ್ ಮಾಡಬೇಕು. ಈ ವೇಳೆ ಲೆಕ್ಕಾಚಾರಗಳು ಸ್ವಲ್ಪ ತಪ್ಪಾದರೂ ವಾಹನ ನಿಯಂತ್ರಣ ಕಳೆದುಕೊಳ್ಳುವುದು ಖಚಿತ.

ರೇಸರ್‌ಗಳು ತಮ್ಮ ಅನುಭವದೊಂದಿಗೆ ಎಲ್ಲವನ್ನು ಮೊದಲೇ ಯೋಜನೆ ಮಾಡಿಕೊಂಡು ಒಮ್ಮೆಲೆ ಒಂದೇ ಜಾಗದಲ್ಲಿ ಹಲವು ಕಾರುಗಳೊಂದಿಗೆ ಡ್ರಿಫ್ಟ್ ಮಾಡುತ್ತಾರೆ. ಆದ್ರೆ ನಾವು ಅದನ್ನು ಅನುಸರಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದಕ್ಕೆ ಈ ವಿಡಿಯೋ ನೋಡಿದ್ರೆ ಅರ್ಥವಾಗುತ್ತೆ. ಸುಖಾಸುಮ್ಮನೆ ಸ್ಯಾಂಟ್ರೋ ಕಾರು ಸಫಾರಿ ಹೊಡೆತಕ್ಕೆ ಬಲಿಯಾಗಿದ್ದು, ಮಾಲೀಕನಿಗೆ ರಿಪೇರಿಗೆ ಹಣ ವೆಚ್ಚಿಸುವಂತಾಗಿದೆ.

ವಿಡಿಯೋದಲ್ಲಿ ಏನಿದೆ: ಹ್ಯುಂಡೈ ಸ್ಯಾಂಟ್ರೋ ಮಾಲೀಕನೇ ಈ ವಿಡಿಯೋವನ್ನು ಯ್ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾನೆ. ಒಂದಷ್ಟು ಮಂದಿ ಸ್ಟಂಟ್‌ ಮಾಡಲೆಂದೇ ಆ ಪ್ರದೇಶಕ್ಕೆ ತಮ್ಮ ಕಾರುಗಳನ್ನು ತಂದಿದ್ದಾರೆ. ಕೆಸರಿನಲ್ಲಿ ತಮ್ಮ ಕಾರುಗಳೊಂದಿಗೆ ಡ್ರಿಫ್ಟ್‌ಗಳನ್ನು ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ನಿಯಂತ್ರಣ ಕಳೆದುಕೊಂಡ ಟಾಟಾ ಸಫಾರಿ ಸ್ಟ್ರೋಮ್, ಹ್ಯುಂಡೈ ಸ್ಯಾಂಟ್ರೋಗೆ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದ್ರೆ ಹ್ಯುಂಡೈ ಸ್ಯಾಂಟ್ರೋಗೆ ಮಾತ್ರ ಮುಂಭಾಗ ನುಜ್ಜುಗುಜ್ಜಾಗಿದೆ, ಎಲ್ಲರಿಗೂ ತಿಳಿದಿರುವಂತೆ ಟಾಟಾ ಕಾರುಗಳು ಗುಣಮಟ್ಟದಲ್ಲಿ ಉತ್ತಮವಾಗಿರುವ ಕಾರಣ ಟಾಟಾ ಸಫಾರಿಗೆ ಅಷ್ಟೇನು ಹಾನಿಯಾಗಿಲ್ಲ. ಕೇವಲ ಒಂದೇ ಸೆಕೆಂಡಿನಲ್ಲಿ ಡ್ರಿಫ್ಟ್ ಮಾಡುವಾಗ ನಮ್ಮ ಲೆಕ್ಕಾಚಾರಗಳು ತಪ್ಪಾಗಿ ವಾಹನ ನಿಯಂತ್ರಣ ಕಳೆದುಕೊಳ್ಳಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಮೊದಲಿಗೆ ಡ್ರಿಫ್ಟ್ ಆಗಲಿ ಇನ್ನಿತರ ಯಾವುದೇ ಸ್ಟಂಟ್‌ಗಳಾಗಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಡುವಂತಿಲ್ಲ ಎಂಬುದು ನೆನಪಿರಲಿ. ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ದಂಡವನ್ನು ಪಾವತಿಸುವುದರ ಜೊತೆಗೆ ಜೈಲಿಗೆ ಹೋಗಬಹುದು. ಯಾರಾದರೂ ಸ್ಟಂಟ್ ಅಭ್ಯಾಸ ಮಾಡಲು ಬಯಸಿದರೆ ಅಥವಾ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಬಯಸಿದರೆ, ಅದನ್ನು ರೇಸ್ ಟ್ರ್ಯಾಕ್‌ಗಳು ಮತ್ತು ಫಾರ್ಮ್‌ಹೌಸ್‌ಗಳಂತಹ ಖಾಸಗಿ ಆಸ್ತಿಯಲ್ಲಿ ಮಾಡಬೇಕು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Friday, June 2, 2023, 14:16 [IST]
English summary
Tata safari hyundai santro collided each other while drifting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+