ಟಾಟಾ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಕಾರು ಸುರಕ್ಷಿತವಲ್ಲ ಎಂದವರಿಗೆ ಕಾರಣ ನೀಡಿ ದಿಟ್ಟ ಉತ್ತರ ಕೊಟ್ಟ ಟಾಟಾ

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ಪಂಜಾಬ್‌ನ ಲುಧಿಯಾನದಲ್ಲಿ ಬೆಂಕಿ ಹೊತ್ತಿಕೊಂಡ ಸಫಾರಿ ಎಸ್‌ಯುವಿ ಕುರಿತು ತನ್ನ ತನಿಖಾ ವರದಿಯನ್ನು ಬಹಿರಂಗಪಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಟಾಟಾ ಸಫಾರಿ (Tata Safari) ಎಸ್‍ಯುವಿಯಲ್ಲಿ ಬೆಂಕಿಯಲ್ಲಿ ಕಾಣಿಸಿಕೊಂಡಿದೆ.

ಜನಪ್ರಿಯ ಟಾಟಾ ಸಫಾರಿ ಎಸ್‍ಯುವಿಯ ಎಂಜಿನ್ ಬೇ ಮತ್ತು ಮುಂಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಈ ವೇಳೆ ಅಲ್ಲಿ ಸುತ್ತುವರಿದ ಜನರು ಅದನ್ನು ನಂದಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಈ ಎಸ್‍ಯುವಿಯಲ್ಲಿ ಯಾವುದೇ ನಂತರದ ಮಾರ್ಪಾಡುಗಳನ್ನು ಮಾಡದೆ, ನಿಲುಗಡೆ ಮಾಡಲಾದ ಟಾಟಾ ಸಫಾರಿಯಲ್ಲಿ ಬೆಂಕಿ (Tata Safari Fire) ಹೇಗೆ ಹೊತ್ತಿಕೊಂಡಿರಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿತು.

Tata Safari

ಟಾಟಾ ಮೋಟಾರ್ಸ್‌ನ ವರದಿಯು ಪಾರ್ಕಿಂಗ್ ಮಾಡುವಾಗ ವಾಹನದ ಸುತ್ತಮುತ್ತಲಿನ ಪ್ರದೇಶಗಳನ್ನು ಸಹ ಪರಿಶೀಲಿಸುವುದು ಏಕೆ ಮುಖ್ಯ ಎಂದು ಹೊಂದಿದ್ದೇನೆ. ಕಳೆದ ವಾರ ಲೂಧಿಯಾನದಲ್ಲಿ ಈ ಘಟನೆ ನಡೆದಿದೆ. ಹೌಸಿಂಗ್ ಸೊಸೈಟಿಯ ಪಾರ್ಕಿಂಗ್ ಲಾಟ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಬೂದು ಬಣ್ಣದ ಸಫಾರಿ ಎಸ್‌ಯುವಿ ಭಾಗಶಃ ಹಾನಿಯಾಗಿದೆ. ಈ ಎಸ್‍ಯುವಿಯ ಮಾಲೀಕರು ಮಾತನಾಡಿ, ನಾನು ಈ ಟಾಟಾ ಸಫಾರಿ ಟಾಪ್ ಎಂಡ್ ರೂಪಾಂತರವನ್ನು ಹೊಂದಿದ್ದೇನೆ.

ಎಲ್ಲಾ ಅಧಿಕೃತ ಟಾಟಾ ಡೀಲರ್‌ನಿಂದ ಮಾತ್ರ ಸರ್ವಿಸ್ ಮತ್ತು ನಿರ್ವಹಣೆ ಮಾಡುತ್ತಿದ್ದೇನೆ. ಅದನ್ನು ನಿಲುಗಡೆ ಮಾಡುವಾಗ ಬೆಂಕಿ ಹೊತ್ತಿಕೊಂಡಿತು ಎಂದು ಎಸ್‍ಯುವಿಯ ಮಾಲೀಕರು ಹೇಳಿದರು. ಈ ಸಫಾರಿ ಎಸ್‍ಯುವಿಯಲ್ಲಿ ಆಫ್ಟರ್ ಮಾರ್ಕೆಟ್ ಮಾಡಿಫೈಗಳನ್ನು ಹೊಂದಿಲ್ಲ. ಯಾಕೆಂದರೆ ಕೆಲವು ಸಲ ಆಪ್ಟರ್ ಮಾರ್ಕೆಟ್ ಮಾಡಿಫೈಗಳಿಂದ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದೆ.

Tata Safari

ಟಾಟಾ ಮೋಟಾರ್ಸ್ ಘಟನೆಯ ಬಗ್ಗೆ ವಿಚಾರಣೆ ನಡೆಸಿದರು. ಹಲವರು ಟಾಟಾ ಸಫಾರಿ ಸುರಕ್ಷಿತ ವಾಹನವಲ್ಲವೆಂದು ಟೀಕಿಸಿದರು. ಟಾಟಾ ಮೊದಲು ಈ ಬೆಂಕಿಗೆ ಅಸುರಕ್ಷಿತ ಪಾರ್ಕಿಂಗ್ ಕಾರವಿರಬಹುದು ಎಂದು ಸೂಚಿಸಿದರು. ಅಲ್ಲದೇ ಟಾಟಾ ತನ್ನ ತನಿಖಾ ವರದಿಯನ್ನು ಬಹಿರಂಗಪಡಿಸಿದೆ. ಟಾಟಾ ಮೋಟಾರ್ಸ್ ತನಿಖಾ ವರದಿ ಪ್ರಕಾರ, ಈ ಎಸ್‍ಯುವಿಯ ಹಾಟ್ ಸೈಲೆನ್ಸರ್ ಅಸೆಂಬ್ಲಿ ಬಳಿಯ ಅಂಡರ್‌ಬಾಡಿ ಇಂಜಿನ್ ಗಾರ್ಡ್‌ನಲ್ಲಿ ಸಂಗ್ರಹವಾದ ಒಣ ಎಲೆಗಳು ಮತ್ತು ಪೇಪರ್ ಕಪ್‌ಗಳಿಂದ ಬೆಂಕಿ ಕಾಣಿಸಿಕೊಂಡಿದೆ.

ಸಾಧ್ಯವಾದಷ್ಟು ಉತ್ತಮ ಪರಿಹಾರವನ್ನು ಒದಗಿಸಲು ತಂಡವು ಗ್ರಾಹಕರೊಂದಿಗೆ ಸಂಪರ್ಕದಲ್ಲಿದೆ ಎಂದು ಕೂಡ ಕಂಪನಿ ಹೇಳಿದೆ. ಇಂತಹ ದುರಂತಗಳನ್ನು ತಪ್ಪಿಸಲು ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸುವುದು ಏಕೆ ಮುಖ್ಯ ಎಂಬುದನ್ನು ಈ ಘಟನೆ ತೋರಿಸುತ್ತದೆ. ಭಾರತದಲ್ಲಿ, ಕಾರು ಮತ್ತು ದ್ವಿಚಕ್ರ ವಾಹನ ಮಾಲೀಕರು ಸಾಮಾನ್ಯವಾಗಿ ನೆರಳಿನಲ್ಲಿ ನಿಲ್ಲಿಸುತ್ತಾರೆ. ಅದೇ ರೀತಿ ವಾಹನಗಳನ್ನು ಸುರಕ್ಷಿತವಾಗಿರಿಸಲು ಕಾರು ಅಥವಾ ದ್ವಿಚಕ್ರ ವಾಹನದ ಸುತ್ತಲೂ ಬೆಂಕಿ ಹತ್ತಿ ಉರಿಯಲು ಕಾರಣವಾಗುವ ವಸ್ತುಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಿ.

ಟಾಟಾ ಸಫಾರಿ ಎಸ್‌ಯುವಿಯ ಬಗ್ಗೆ ಹೇಳುವುದಾದರೆ, ಟಾಟಾ ಮೋಟಾರ್ಸ್, ಸಫಾರಿ ಎಸ್‌ಯುವಿಯ ಎಂಜಿನ್ ಅನ್ನು ಭಾರತದಾದ್ಯಂತ ಮುಂಬರಲಿರುವ ಎಮಿಷನ್ (BS6 ಹಂತ 2) ಮಾನದಂಡಗಳಿಗೆ ನವೀಕರಿಸಿದೆ. ಈ ಕಾರು ಚಾಲಕರಿಗೆ ಅನುಕೂಲವಾಗುವಂತಹ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡು ಅತ್ಯಾಕರ್ಷಕವಾಗಿದೆ.

ಈ ಟಾಟಾ ಸಫಾರಿ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.0 ಲೀಟರ್ Kryotec ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 168 bhp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ 6 ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ.

ಇನ್ನ್ನು ಸುರಕ್ಷತೆಯ ದೃಷ್ಟಿಯಿಂದಲೂ ಟಾಟಾ ಸಫಾರಿ ಎಸ್‌ಯುವಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಒಳಗೊಂಡಿದ್ದು, ಇದು ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಹೈ ಬೀಮ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಡೋರ್ ಓಪನ್ ಅಲರ್ಟ್ ಒಳಗೊಂಡಂತೆ ಹೆಚ್ಚಿನ ಫೀಚರ್ಸ್ ಗಳನ್ನು ಒಳಗೊಂಡಿದೆ.

Article Published On: Tuesday, September 26, 2023, 8:34 [IST]
English summary
Tata safari suv fire incident what found in car makers investigation report details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+